ಸುವರ್ಣ ಜಾಕ್‌ಪಾಟ್‌ : ಗೇಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ!

Suvarna Jackpot: ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಹೊಚ್ಚ ಹೊಸ ಗೇಮ್ ಶೋ ಶುರು ಆಗುತ್ತಿದ್ದು, ಇದೇ ಭಾನುವಾರ 26 ರಿಂದ ಸಂಜೆ 7 ಗಂಟೆಗೆ ಈ ಗೇಮ್ ಶೋ ಆರಂಭಗೊಳ್ಳುತ್ತಿದೆ. ಸೆಲೆಬ್ರಿಟಿಗಳ ಈ ಒಂದು ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತದ್ದು, ಇದರಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ.   

Written by - Zee Kannada News Desk | Last Updated : Nov 23, 2023, 12:22 PM IST
  • ಹೊಸ ಧಾರವಾಹಿಗಳ ಮಧ್ಯೆ ಇದೀಗ ಈ ವಾಹಿನಿಯಲ್ಲಿ ರಿಯಾಲಿ ಶೋ ಗಳೂ ಆರಂಭಗೊಳ್ಳುತ್ತಿದ್ದು, ಆ ಒಂದು ಲೆಕ್ಕದಲ್ಲಿ ಸುವರ್ಣ ಜಾಕ್‌ಪಾಟ್ ಗ್ರೇಮ್ ಶೋ ಕೂಡ ಒಂದಾಗಿದೆ.
  • ಜಾಕ್‌ಪಾಟ್ ಗೇಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ ಆಗುತ್ತಿದ್ದು, ಎರಡು ತಂಡವಾಗಿಯೇ ಇಲ್ಲಿ ಈ ಎಲ್ಲಾ ಸೆಲೆಬ್ರಿಟಿಗಳು ಆಟವಾಡುತ್ತಿದ್ದಾರೆ.
  • ಜಾಕ್‌ಪಾಟ್‌ ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತಿದ್ದು, ಇಡೀ ಶೋದಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ.
ಸುವರ್ಣ ಜಾಕ್‌ಪಾಟ್‌ : ಗೇಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ! title=

Suvarna Jackpot Game Show Grand Opening: ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಹೊಸ ಹೊಸ ಶೋಗಳನ್ನ ಆರಂಭಿಸುತ್ತಿದ್ದು, ಹಬ್ಬ ಹರಿದಿನಗಳಲ್ಲಿ ಸೆಲೆಬ್ರಿಟಿಗಳ ಕಾರ್ಯಕ್ರಮಗಳು ಇಲ್ಲಿ ಜಾಸ್ತಿನೇ ಇರುತ್ತೆ. ಇರೊಟ್ಟಿಗೆ ಹೊಸ ಹೊಸ ಧಾರವಾಹಿಗಳನ್ನು ಇಲ್ಲಿ ಪ್ಲಾನ್ ಮಾಡಲಾಗಿದ್ದು, ಒಂದೊಂದೇ ಧಾರವಾಹಿಗಳು ಇಲ್ಲಿ ಆರಂಭಗೊಳ್ಳುತ್ತಿವೆ. ಹೊಸ ಧಾರವಾಹಿಗಳ ಮಧ್ಯೆ ಇದೀಗ ಈ ವಾಹಿನಿಯಲ್ಲಿ ರಿಯಾಲಿ ಶೋ ಗಳೂ ಆರಂಭಗೊಳ್ಳುತ್ತಿದ್ದು, ಆ ಒಂದು ಲೆಕ್ಕದಲ್ಲಿ ಸುವರ್ಣ ಜಾಕ್‌ಪಾಟ್ ಗ್ರೇಮ್ ಶೋ ಕೂಡ ಒಂದಾಗಿದ್ದು, ಈ ಶೋ ನಿರೂಪಣೆಯನ್ನ ಅನುಪಮಾ ಗೌಡ ಮಾಡುತಿದ್ದಾರೆ.

ಜಾಕ್‌ಪಾಟ್ ಗೇಮ್ ಶೋದಲ್ಲಿ ಸೆಲೆಬ್ರಿಟಿಗಳು ಭಾಗಿ ಆಗುತ್ತಿದ್ದು, ಎರಡು ತಂಡವಾಗಿಯೇ ಇಲ್ಲಿ ಈ ಎಲ್ಲಾ ಸೆಲೆಬ್ರಿಟಿಗಳು ಆಟವಾಡುತ್ತಿದ್ದಾರೆ. ವಿಶೇಷವಾಗಿ ಇಲ್ಲಿ ಸೆಲೆಬ್ರಿಟಿಗಳ ನೆನಪಿನ ಶಕ್ತಿಯ ಪರೀಕ್ಷೆ ಕೂಡ ಇಲ್ಲಿ ನಡೆಯುತ್ತಿದ್ದು, ಇದರ ಬಗ್ಗೆ ಅಧಿಕೃತವಾಗಿಯೇ ಚಾನೆಲ್ ಹೇಳಿಕೊಂಡಿದೆ.ಸೆಲೆಬ್ರಿಟಿಗಳ ಈ ಒಂದು ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತಿದ್ದು, ಇಡೀ ಶೋದಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ. ತುಂಬಾನೆ ಸ್ಪೆಷಲ್ ಅನಿಸೋ ಈ ಶೋ ಗ್ರ್ಯಾಂಡ್ ಆಗಿಯೇ ಓಪನ್ ಆಗುತ್ತಿದೆ.

ಇದನ್ನೂ ಓದಿ: ಪತ್ರಕರ್ತೆಯನ್ನು ತಬ್ಬಿಕೊಂಡು ಕಿಸ್‌ ಮಾಡಿದ ಸಲ್ಮಾನ್‌ ಖಾನ್‌..! ವಿಡಿಯೋ ವೈರಲ್‌

ಹೌದು, ಜೋಗಿ ಪ್ರೇಮ್ ಅಭಿನಯದ ಡಿಕೆ ಚಿತ್ರದಲ್ಲಿ ಬಾಗ್ಲು ತೆಗಿಯೇ ಸೇಸಮ್ ಅನ್ನುವ ಹಾಡಿದ್ದು, ಇದರಲ್ಲಿ ಸಿನ್ನಿ ಲಿಯೋ ಕಾಣಿಸಿಕೊಂಡು ಕನ್ನಡಕ್ಕೆ ಕಾಲಿಟ್ಟಿದ್ದರು. ಅದರಿಂದಲೇ ಸ್ಪೂರ್ತಿ ಪಡೆದಂತನೇ ಕಾಣಿಸುತ್ತಿದೆ, ಈ ಚಾನೆಲ್‌ನ ಗೇಮ್ ಶೋಗೆ ಬಾಗ್ಲು ತೆಗಿಯೇ ಸೇಸಮ್ ಅನ್ನು ಟ್ಯಾಗ್ ಲೈನ್ ಇಡಲಾಗಿದೆ.ಈ ಟ್ಯಾಗ್ ಲೈನ್‌ಗೂ ಗೇಮ್ ಶೋಗೂ ಲಿಂಕ್ ಇದ್ದು, ಇಡೀ ಶೋದ ಪರಿಕಲ್ಪನೆಯನ್ನ ಕೂಡ ಬಿಂಬಿಸುವಂತೆ ಕಾಣಿಸುತ್ತಿದೆ. ಅಂತಹ ಈ ಶೋದ ಪ್ರೋಮೋ ಈಗಾಗಲೇ ರಿಲೀಸ್ ಆಗಿವೆ. ಇದರಲ್ಲಿ ಯಾರೆಲ್ಲ ಭಾಗಿ ಆಗಿದ್ದಾರೆ ಅನ್ನುವ ವಿಚಾರವೂ ತಿಳಿಯುತ್ತಿದೆ.

ಸುವರ್ಣ ಜಾಕ್‌ಪಾಟ್ ಶೋದಲ್ಲಿ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಭಾಗಿ ಆಗಿದ್ದಾರೆ. ಶೈನ್ ಶೆಟ್ಟಿ-ದೀಪಿಕಾ ದಾಸ್‌ ಸೇರಿದಂತೆ ಇನ್ನೂ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಇದರಲ್ಲಿ ಬೆಲೆ ಬಾಳುವ ವಸ್ತುಗಳಾದ ಫ್ರಿಡ್ಜ್, ಟಿವಿ, ವಾಷಿಂಗ್ ಮಷಿನ್, ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನ ಗೆಲ್ಲುವ ಅವಕಾಶ  ಸೆಲೆಬ್ರಿಟಿಗಳಿಗೆ ದೊರೆಯುತ್ತಿದೆ.ಸುವರ್ಣ ಜಾಕ್‌ಪಾಟ್ ಶೋ ಇದೇ ಭಾನುವಾರ 26 ರಿಂದ ಶುರು ಆಗುತ್ತಿದ್ದು, ಪ್ರತಿ ಭಾನುವಾರ ಸಂಜೆ 7 ಗಂಟೆಗೆ ಈ ಶೋ ಪ್ರಸಾರ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News