Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್

Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

Written by - Zee Kannada News Desk | Last Updated : Apr 27, 2024, 07:19 PM IST
  • ರಣಬೀರ್ ಹಾಗೂ ಸಾಯಿ ಪಲ್ಲವಿ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ
  • 11 ಕೋಟಿ ಮೌಲ್ಯದ ಸೆಟ್‌ನಲ್ಲಿ ಅಯೋಧ್ಯೆಯನ್ನು ಮರುಸೃಷ್ಟಿಸಲಾಗಿದೆ.
  • ಶೂಟಿಂಗ್ ಸೆಟ್ ನಿಂದ ರಾಮ ಸೀತೆ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ಹೊರ ಬಿದ್ದಿದೆ.
Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್ title=

Photos leaked from ramyana set : ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ  ರಾಮಾಯಣ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಚಿತ್ರೀಕರಣ ಆರಂಭವಾಗಿದ್ದು, ಸೆಟ್ ನಿಂದ ರಾಮ ಸೀತೆಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು, ಇದೀಗ ಆ ಕುತೂಹಲ ಏನು ಎನ್ನುವುದು ಹೊರ ಬಿದ್ದಿದೆ.

ಇದನ್ನು ಓದಿ :  Lokasabha Election : ಚಾಮರಾಜನಗರದಲ್ಲಿ ಎಪ್ರಿಲ್ 29 ರಂದು ಮರುಮತದಾನ : ಚುನಾವಣಾ ಆಯೋಗ 

ಶೂಟಿಂಗ್ ಸೆಟ್ ನಿಂದ ರಾಮ ಸೀತೆ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ಹೊರ ಬಿದ್ದಿದೆ. ರಾಮ ಪಾತ್ರದಲ್ಲಿ ರಣಬೀರ್ ಹಾಗೂ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸೆಟ್‌ನಿಂದ ಅವರ ಫಸ್ಟ್ ಲುಕ್ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಅಭಿಮಾನಿಗಳು ಮತ್ತು ನೆಟಿಜನ್‌ಗಳಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ.

ರಣಬೀರ್ ಹಾಗೂ ಸಾಯಿ ಪಲ್ಲವಿ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಾಯಿ ಪಲ್ಲವಿ ಸೀರೆಯಲ್ಲಿ ಅಪ್ಪಟ ಸೀತೆಯ ಹಾಗೆಯೇ ಕಾಣಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ, ಮತ್ತು ಯಶ್ ಹೊರತುಪಡಿಸಿ , ಅರುಣ್ ಗೋವಿಲ್ ರಾಜ ದಶರಥನಾಗಿ, ಲಾರಾ ದತ್ತಾ ಕೈಕೇಯಿಯಾಗಿ, ಸನ್ನಿ ಡಿಯೋಲ್ ಹನುಮಾನ್ ಆಗಿ, ಸಾಕ್ಷಿ ತನ್ವರ್ ಮಂಡೋದರಿಯಾಗಿ ಮತ್ತು ನವೀನ್ ಪೋಲಿಶೆಟ್ಟಿ ಲಕ್ಷ್ಮಣನಾಗಿ ನಟಿಸಲಿದ್ದಾರೆ.

ಇದನ್ನು ಓದಿ : Shruti Hariharan : ವಿಭಿನ್ನ ಅವತಾರದಲ್ಲಿ ಶ್ರುತಿ ಹರಿಹರನ್ : ಪೋಟೋಸ್ ಇಲ್ಲಿವೆ

11 ಕೋಟಿ ಮೌಲ್ಯದ ಸೆಟ್‌ನಲ್ಲಿ ಅಯೋಧ್ಯೆಯನ್ನು ಮರುಸೃಷ್ಟಿಸಲಾಗಿದೆ. ಅರಮನೆ ಮತ್ತು ಬೀದಿಗಳು ಎಲ್ಲವೂ ಸಂಪೂರ್ಣವಾಗಿ ಅಯೋಧ್ಯೆಯನ್ನು ಹೋಲುವ ಹಾಗೆಯೆ ಸೆಟ್ ತಯಾರಾಗಿದೆ. ಈ ರಾಮಾಯಣ ಸಿನಿಮಾವನ್ನು ನಿರ್ದೇಶಕ  ನಿತೇಶ್ ತಿವಾರಿ ಮೂರು ಭಾಗಗಳಲ್ಲಿ ತಯಾರಿಸುವ ಯೋಜನೆಯನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News