ಮಮ್ಮುಟ್ಟಿಯೊಂದಿಗೆ ರಾಜ್ ಬಿ ಶೆಟ್ಟಿ!ಮಲಯಾಳಂ ನಲ್ಲಿಯೂ ಕಿಚ್ಚು ಹಚ್ಚಲಿದ್ದಾರೆ ಕನ್ನಡದ ಪ್ರತಿಭೆ

Raj B Shetty with Mammootty :ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಅದ್ಭುತ ಪ್ರತಿಭೆ. ಕ್ಲಾಸ್ ಚಿತ್ರವಾದರೂ ಓಕೆ, ಮಾಸ್ ಸಿನಿಮಾಗೂ ಸೈ ಎನ್ನುವುದನ್ನು ರಾಜ್ ಬಿ ಶೆಟ್ಟಿ ಸಾಬೀತು ಪಡಿಸಿದ್ದಾರೆ. 

Written by - Ranjitha R K | Last Updated : May 13, 2024, 10:40 AM IST
  • ಮಲಯಾಳಂ ನಲ್ಲಿ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ ರಾಜ್ ಬಿ ಶೆಟ್ಟಿ
  • ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಅದ್ಭುತ ಪ್ರತಿಭೆ.
  • ಕ್ಲಾಸ್ ಚಿತ್ರವಾದರೂ ಓಕೆ, ಮಾಸ್ ಸಿನಿಮಾಗೂ ಸೈ
ಮಮ್ಮುಟ್ಟಿಯೊಂದಿಗೆ ರಾಜ್ ಬಿ ಶೆಟ್ಟಿ!ಮಲಯಾಳಂ ನಲ್ಲಿಯೂ ಕಿಚ್ಚು ಹಚ್ಚಲಿದ್ದಾರೆ ಕನ್ನಡದ ಪ್ರತಿಭೆ  title=

Raj B Shetty with Mammootty :ಕನ್ನಡದ ಖ್ಯಾತ ನಟ -ನಿರ್ದೇಶಕ ರಾಜ್ ಬಿ.ಶೆಟ್ಟಿಯವರು ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳನ್ನು ಕನ್ನಡದಲ್ಲಿ ನೀಡುವ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ.ಇದೀಗ, ಈ ಕನ್ನಡದ ಕಣ್ಮಣಿ ಮಲಯಾಳಂನಲ್ಲಿ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಅದ್ಭುತ ಪ್ರತಿಭೆ. ಕ್ಲಾಸ್ ಚಿತ್ರವಾದರೂ ಓಕೆ, ಮಾಸ್ ಸಿನಿಮಾಗೂ ಸೈ ಎನ್ನುವುದನ್ನು ರಾಜ್ ಬಿ ಶೆಟ್ಟಿ ಸಾಬೀತು ಪಡಿಸಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಮಲಯಾಳಂ ಚಿತ್ರದ ನಟನೆಗಾಗಿ.ಭಾರತ ದೇಶದ ಉತ್ತಮ ನಟರಲ್ಲಿ ಒಬ್ಬರಾದ ಮಮ್ಮುಟ್ಟಿ ಸ್ವತಃ ನಿರ್ಮಿಸಿ ನಟಿಸುತ್ತಿರುವ 'ಟರ್ಬೋ'ಚಿತ್ರದ   ಮುಖ್ಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.ಇದು ಈಗ ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ. 

ಇದನ್ನೂ ಓದಿ :  Naga Chaitanya: ಹೆತ್ತ ತಾಯಿಯಿಂದ ದೂರವಾಗಿದ್ದೇಕೆ ನಾಗ ಚೈತನ್ಯ? ಅಮೆರಿಕದಲ್ಲಿರುವ ಚೈತು ನಿಜವಾದ ಅಮ್ಮ ಇವರೇ ನೋಡಿ.!

ನಿನ್ನೆ ದುಬೈನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಭಾಗಿಯಾಗಿದ್ದಾರೆ.ಮಲಯಾಳಂ ನಲ್ಲಿ ಪುಲಿಮುರುಗನ್,ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರ ಕತೆಯಿದೆ.   ಮಮ್ಮುಟ್ಟಿಯವರ ಒಡೆತನದ 'ಮಮ್ಮುಟ್ಟಿ ಕಂಪನಿ'ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್,ತೆಲುಗಿನ ಸುನಿಲ್, ಶಬರೀಶ್ ವರ್ಮಾ,ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ. 

ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ' ಲೈಟರ್ ಬುದ್ಧ ಫಿಲಂಸ್'ಹಂಚಿಕೆ ಮಾಡುತ್ತಿದೆ.

ಇದನ್ನೂ ಓದಿ : ಡಾಲಿ ನಟನೆಯ 'ಕೋಟಿ' ಚಿತ್ರದ ಮೊದಲ ಹಾಡು 'ಮಾತು ಸೋತು' ಇಂದು ಬಿಡುಗಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News