ಈ ಸೂಪರ್‌ ಸ್ಟಾರ್‌ ನಟ ಒಂದು ಕಾಲದಲ್ಲಿ ʼಮುಖ ನೋಡಿ.. ಇವನು ಹೀರೋ ನಾ..?ʼ.. ಅಂತ ಟ್ರೋಲ್‌ ಆಗಿದ್ದರು.!

Allu Arjun life history : ಅವಮಾನ, ಕಷ್ಟಗಳನ್ನು ಎದುರಿಸಿದಾಗಲೇ ಮನುಷ್ಯ ಬೆಳೆಯುತ್ತಾನೆ ಎನ್ನುವುದಕ್ಕೆ ನಮ್ಮಲ್ಲಿ ಹಲವಾರು ಉದಾರಹಣೆಗಳಿವೆ. ಈ ಪೈಕಿ ಇಂದು ಸ್ಟಾರ್‌ ನಟನಾಗಿ ಗುರುತಿಸಿಕೊಂಡಿರುವ ನಟರೊಬ್ಬರು, ತಮ್ಮ ಮೊದಲ ಸಿನಿಮಾ ಹಿಟ್‌ ಆದರೂ ಸಹ ತಮ್ಮ ಲುಕ್‌ನಿಂದ ಸಾಕಷ್ಟು ಅವಮಾನ ಅನುಭವಿಸಬೇಕಾಯಿತು.. ಬನ್ನಿ ಆ ನಟ ಯಾರು ಅಂತ ತಿಳಿಯೋಣ..

Written by - Krishna N K | Last Updated : May 9, 2024, 05:31 PM IST
    • ಅವಮಾನ, ಕಷ್ಟಗಳನ್ನು ಎದುರಿಸಿದಾಗಲೇ ಮನುಷ್ಯ ಬೆಳೆಯುತ್ತಾನೆ
    • ಮೊದಲ ಸಿನಿಮಾ ಹಿಟ್‌ ಆದರೂ ಸಹ ತಮ್ಮ ಲುಕ್‌ನಿಂದ ಸಾಕಷ್ಟು ಅವಮಾನ ಅನುಭವಿಸಿದ್ದ ನಟ
    • ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ರಸಿದ್ದರಾಗಿರುವ ನಾಯಕ ನಟರಲ್ಲಿ ಈ ನಟರೂ ಸಹ ಒಬ್ಬರು.
ಈ ಸೂಪರ್‌ ಸ್ಟಾರ್‌ ನಟ ಒಂದು ಕಾಲದಲ್ಲಿ ʼಮುಖ ನೋಡಿ.. ಇವನು ಹೀರೋ ನಾ..?ʼ.. ಅಂತ ಟ್ರೋಲ್‌ ಆಗಿದ್ದರು.! title=

Pushpa 2 Allu Arjun life : ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ರಸಿದ್ದರಾಗಿರುವ ನಾಯಕ ನಟರಲ್ಲಿ ಈ ನಟರೂ ಸಹ ಒಬ್ಬರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದ ನಟ ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದರು. ಆದರೆ ಆ ನಂತರ ಒಳ್ಳೆಯ ಚಿತ್ರಗಳು ಮತ್ತು ಅವಕಾಶಗಳು ಬರಲಿಲ್ಲ. ಅಲ್ಲದೆ, ತಮ್ಮ ಲುಕ್‌ನಿಂದ ಸಾಕಷ್ಟು ಅವಮಾನ ಅನುಭವಿಸಬೇಕಾಯಿತು.

ಆ ನಟ ಬೇರೆ ಯಾರೂ ಅಲ್ಲ ನಮ್ಮ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್. ಬನ್ನಿ ನಟನೆಯ ಮೊದಲ ಸಿನಿಮಾ ಗಂಗೋತ್ರಿಯಲ್ಲಿ ಹಿಟ್ ಆದರೂ ಸಹ ಆ ಸಮಯದಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ ಸ್ವತಃ ಅರ್ಜುನ್‌ ಹೇಳಿಕೊಂಡಿದ್ದರು. ಲವರ್ ಬಾಯ್ ಆಗಿ ಅಲ್ಲು ಅರ್ಜುನ್ ಅಭಿನಯದ ‘ಆರ್ಯ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ. ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮ ಸಭೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ತಾಂಡೇಲ್‌ To ರಾಮಾಯಣ ನಟಿ ಸಾಯಿ ಪಲ್ಲವಿ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..! ಲಿಸ್ಟ್‌ ಇಲ್ಲಿದೆ

ಗಂಗೋತ್ರಿ ಸೂಪರ್‌ ಹಿಟ್ ಆಗಿದ್ದರೂ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಆ ಸಿನಿಮಾದಲ್ಲಿ ನನ್ನ ಲುಕ್ ಮತ್ತು ಎಕ್ಸ್‌ಪ್ರೆಶನ್ ಕೆಲವರಿಗೆ ಇಷ್ಟವಾಗಲಿಲ್ಲ, ಹಾಗಾಗಿ ಒಳ್ಳೆಯ ಆಫರ್‌ಗಳು ಬರಲಿಲ್ಲ ಅಂತ ಸ್ವತಃ ಅಲ್ಲು ಅರ್ಜುನ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ರವಿತೇಜ ಅಭಿನಯದ ‘ಈಡಿಯಟ್’ ಸಿನಿಮಾ ನೋಡಿದಾಗ ಇಂಥ ಕೂಲ್ ಸಿನಿಮಾದಲ್ಲಿ ನಟಿಸಬೇಕು ಅಂತ ಆಸೆಯಾಯಿತು. ಆ ಆಸೆ ʼಆರ್ಯʼ ಸಿನಿಮಾದಿಂದ ನೆರವೇರಿತು ಅಂತ ಹೇಳಿದರು.

ಪುಷ್ಪ-2 ಮೂಲಕ ಶೀಘ್ರದಲ್ಲೇ ಬನ್ನಿ ಹೊಸ ಹಿಸ್ಟರ್‌ ಕ್ರಿಯೇಟ್‌ ಮಾಡಲಿದ್ದಾರೆ. ಸ್ಟಾರ್‌ ಡೈರೆಕ್ಟರ್‌ ಸುಕುಮಾರ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ. ತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ವಿಜಯ್ ಸೇತುಪತಿ, ಶ್ರೀತೇಜ್ ಮತ್ತು ಪ್ರಿಯಾಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News