ʼಪ್ರಭಾಸ್‌ʼ ನಟನೆಯ ಈ ಸಿನಿಮಾದ ಫೋಟೋ, ವಿಡಿಯೋ ಶೇರ್‌ ಮಾಡಿದ್ರೆ ಕಠಿಣ ಕ್ರಮ..!

Kalki 2898 AD : ಫೋಟೋ ಸೋರಿಕೆಯಾದ ನಂತರ 'ಕಲ್ಕಿ 2898 AD' ತಯಾರಕರು ಅಲರ್ಟ್ ಆಗಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಫೋಟೋ, ವಿಡಿಯೋ ಸೇರಿದಂತೆ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Written by - Krishna N K | Last Updated : Sep 21, 2023, 04:56 PM IST
  • ಫ್ಯಾನ್‌ ಇಂಡಿಯಾ ಸ್ಟಾರ್‌ ನಟ ಪ್ರಭಾಸ್ ಅವರ ಮುಂಬರುವ ಚಿತ್ರ 'ಕಲ್ಕಿ 2898 AD'.
  • ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
  • ಫೋಟೋ ಸೋರಿಕೆಯಾದ ನಂತರ 'ಕಲ್ಕಿ 2898 AD' ತಯಾರಕರು ಅಲರ್ಟ್ ಆಗಿದ್ದಾರೆ.
ʼಪ್ರಭಾಸ್‌ʼ ನಟನೆಯ ಈ ಸಿನಿಮಾದ ಫೋಟೋ, ವಿಡಿಯೋ ಶೇರ್‌ ಮಾಡಿದ್ರೆ ಕಠಿಣ ಕ್ರಮ..! title=

Prabhas Kalki 2898 AD : ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರ ಮುಂಬರುವ ಚಿತ್ರ 'ಕಲ್ಕಿ 2898 AD'. ನಿರ್ದೇಶಕ ನಾಗ್ ಅಶ್ವಿನ್ ಈ ಸಿನಿಮಾವನ್ನು ಡೈರೆಕ್ಟ್‌ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಸುಮಾರು 600 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. 

ಇತ್ತೀಚೆಗಷ್ಟೇ ಈ ಸಿನಿಮಾಗೆ ಸಂಬಂಧಿಸಿದ ಫೋಟೋವೊಂದು ಲೀಕ್ ಆಗಿತ್ತು. ಇದೀಗ ಈ ವಿಚಾರದಲ್ಲಿ ನಿರ್ಮಾಣ ಸಂಸ್ಥೆ ಗಂಭೀರವಾಗಿದೆ. ಚಿತ್ರಕ್ಕೆ ಸಂಬಂಧಿಸಿದ ವಿಎಫ್‌ಎಕ್ಸ್ ಕೆಲಸ ಮಾಡುತ್ತಿರುವ ಕಂಪನಿಯಿಂದ ಈ ಫೋಟೋ ಹೊರಬಂದಿದೆ. ತಯಾರಕರು ಹೇಳಿದ ವಿಎಫ್‌ಎಕ್ಸ್ ಕಂಪನಿಯ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ಸೋರಿಕೆಗೆ ಕಾರಣವಾದ ಉದ್ಯೋಗಿಯನ್ನು ಈಗಾಗಲೇ ಕಂಪನಿಯಿಂದ ತೆಗೆದುಹಾಕಲಾಗಿದ್ದರೂ, ನಿರ್ಮಾಪಕರು ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ತೋರುತ್ತದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಜಾರಿಬಿದ್ದು ʼ3 ಈಡಿಯಟ್ಸ್ʼ ನಟ ಸಾವು..!

ಇದೀಗ ವೈಜಯಂತಿ ಮೂವೀಸ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಿನಿಮಾಗೆ ಸಂಬಂಧಿಸಿದ ಫೋಟೊ, ವೀಡಿಯೋ ಸೇರಿದಂತೆ ಇನ್ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ವೈ ಜಯಂತಿ ಮೂವೀಸ್ 'ಕಲ್ಕಿ 2898 AD' ಚಿತ್ರದ ಹಕ್ಕುಸ್ವಾಮ್ಯ ಹೊಂದಿದೆ. ಈ ಚಲನಚಿತ್ರದ ಯಾವುದೇ ಫೋಟೋಗಳು ಅಥವಾ ವೀಡಿಯೊಗಳನ್ನು ಇತರರೊಂದಿಗೆ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ನಿಯಮ ಉಲ್ಲಂಘಿಸಿದರೆ ಪೊಲೀಸರ ಸಹಕಾರದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ವೈಜಯಂತಿ ಮೂವಿಸ್‌ ಎಚ್ಚರಿಕೆ ನೀಡಿದೆ.

ಎಷ್ಟೇ ಮುಂಜಾಗ್ರತೆ ವಹಿಸಿದರೂ ಸಿನಿಮಾದ ವಿಡಿಯೋ ಮತ್ತು ಫೋಟೋಗಳು ಸೋರಿಕೆಯಾಗುತ್ತಲೇ ಇರುತ್ತದೆ. ಶೂಟಿಂಗ್ ಸ್ಥಳಗಳಿಂದ ಫೋಟೋಗಳು ಮತ್ತು ವೀಡಿಯೊಗಳು ಸೋರಿಕೆಯಾಗುತ್ತಿವೆ. ನಾಯಕ ನಟರ ಲುಕ್, ಹಾಡುಗಳೂ ಲೀಕ್‌ ಆಗುತ್ತಿವೆ. ವಿಎಫ್‌ಎಕ್ಸ್ ಕೆಲಸ ನಡೆಯುತ್ತಿರುವ ಎಡಿಟಿಂಗ್ ರೂಂ ಮತ್ತು ಸ್ಟುಡಿಯೋಗಳಿಂದ ಆಯಾ ಸಿನಿಮಾಗಳ ದೃಶ್ಯಗಳು ಮತ್ತು ಫೋಟೋಗಳು ಸೋರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋರಿಕೆ ತಡೆಗೆ ನಿರ್ಮಾಣ ಸಂಸ್ಥೆಗಳು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿವೆ.  

ಇದನ್ನೂ ಓದಿ: ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್‌ ಪೋಸ್‌ ನೀಡಿದ ಸಂಗೀತಾ..! ಫೋಟೋಸ್‌ ಇಲ್ಲಿವೆ

'ಕಲ್ಕಿ 2898 ಎಡಿ' ವೈಜ್ಞಾನಿಕ ಆಕ್ಷನ್ ಚಿತ್ರದಲ್ಲಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅವರಂತಹ ದೊಡ್ಡ ತಾರಾಬಳಗ ಇದೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್‌ ಆದ ಚಿತ್ರದ ಗ್ಲಿಂಪ್ಸ್ ವಿಡಿಯೋ ಒಂದು ರೇಂಜ್ ನಲ್ಲಿ ಅಭಿಮಾನಿಗಳನ್ನು ಆಕರ್ಷಿಸಿತ್ತು. ಮುಂದಿನ ವರ್ಷ ಜನವರಿ 12 ರಂದು ಚಿತ್ರ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News