ಪ್ರಭಾಸ್ ಕಲ್ಕಿ ಚಿತ್ರದಲ್ಲಿನ ಅಮಿತಾಬ್ ಲುಕ್‌ ಔಟ್‌ : ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಬಿಗ್‌ ಬಿ ಹೊಸ ಅವತಾರ

Kalki 2898 ad Amitabh bachchan look : ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ' ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇಂದು ಬಿಗ್‌ ಬಿ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

Written by - Krishna N K | Last Updated : Oct 11, 2023, 05:02 PM IST
  • ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಚಿತ್ರ.
  • ಈ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
  • ಬಿಗ್ ಬಿ ಲುಕ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದಲ್ಲಿ ಅವರ ಲುಕ್‌ ಅನ್ನು ಅನಾವರಣಗೊಳಿಸಿದೆ.
ಪ್ರಭಾಸ್ ಕಲ್ಕಿ ಚಿತ್ರದಲ್ಲಿನ ಅಮಿತಾಬ್ ಲುಕ್‌ ಔಟ್‌ : ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಬಿಗ್‌ ಬಿ ಹೊಸ ಅವತಾರ title=

Amitabh Bachchan birthday : ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಬಹುನಿರೀಕ್ಷಿತ ಟೈಮ್ ಟ್ರಾವೆಲ್ ಚಿತ್ರ ಕಲ್ಕಿ 2898 ಎಡಿ. ಈ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಅಮಿತಾಬ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದಲ್ಲಿನ ಬಿಗ್ ಬಿ ಲುಕ್ ಅನ್ನು ಬಿಡುಗಡೆ ಮಾಡಿದೆ. 

ಹೌದು.. ಅಮಿತಾಬ್ ಬಚ್ಚನ್ ಅವರ ಲುಕ್ ಬಿಡುಗಡೆಯಾಗಿದೆ ಆದರೆ ಅವರ ಮುಖವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿಲ್ಲ. ಕಣ್ಣುಗಳು ಮಾತ್ರ ಗೋಚರಿಸುತ್ತಿದೆ. ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಮತ್ತು ಹಣೆಯ ಮೇಲೆ ಬೊಟ್ಟು ಇಟ್ಟಿಕೊಂಡಿರುವ ಸಂತನಂತೆ ಕಾಣುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅವರ ಜನ್ಮದಿನದಂದು ವೈಜಯಂತಿ ಮೂವೀಸ್ ಈ ಪೋಸ್ಟರ್‌ ರಿಲೀಸ್‌ ಮಾಡಿ ಬರ್ತ್‌ಡೇ ಶುಭ ಕೋರಿದೆ.

ಇದನ್ನೂ ಓದಿ: ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಅಂಬಿ ನಿಂಗೆ ವಯಸ್ಸಾಯ್ತೋ' ನಿರ್ದೇಶಕ ಗುರುದತ್

'ಮಹಾನಟಿ' ನಂತರ ನಾಗ್ ಅಶ್ವಿನ್ ನಿರ್ದೇಶನದ ಚಿತ್ರ 'ಕಲ್ಕಿ 2989 AD'. ಈ ಚಿತ್ರವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ. ಅಶ್ವಿನಿದತ್ ನಿರ್ಮಿಸಿದ್ದಾರೆ. 400 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ಸಂಕ್ರಾಂತಿಯಂದು ರಿಲೀಸ್ ಆಗಬೇಕಿತ್ತು... ಆದ್ರೆ ನಿಗದಿ ದಿನಾಂಕದಂದು ಬಿಡುಗಡೆಯಾಗುವುದು ಅನುಮಾನ.  

'ಕಲ್ಕಿ' ಚಿತ್ರದ ಟೀಸರ್‌ಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್‌ನಲ್ಲಿ ಪ್ರಭಾಸ್ ಕಲ್ಕಿ ಪಾತ್ರವನ್ನು ಅನಾವರಣ ಮಾಡಲಾಗಿದೆ. ಅಲ್ಲದೆ, ಕಥೆಯಲ್ಲಿ ಟೈಮ್ ಟ್ರಾವೆಲ್ ಬಗ್ಗೆ ಸುಳಿವು ನೀಡಲಾಗಿದೆ. ದೀಪಿಕಾ ಪಡುಕೋಣೆ ಕೂಡ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರಭಾಸ್ ಮತ್ತು ದೀಪಿಕಾ ಅವರ ಮೊದಲ ಚಿತ್ರವಾಗಿದೆ.

ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಂದ ʼಘೋಸ್ಟ್ʼ ಚಿತ್ರಕ್ಕೆ ಹಾಡಿನ ಉಡುಗೊರೆ..! 

ಭಾರತೀಯ ಚಿತ್ರರಂಗದ ಲೆಜೆಂಡರಿ ಹೀರೋಗಳಾದ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ವಿಶ್ವ ನಾಯಕ ಕಮಲ್ ಹಾಸನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ದಿಶಾ ಪಟಾನಿಯೂ ಸಹ ನಟಿಸುತ್ತಿದ್ದಾರೆ. ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದ್ರೆ... ಚಿತ್ರತಂಡ ಅಧಿಕೃತವಾಗಿ ಅದನ್ನು ಬಹಿರಂಗಪಡಿಸಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News