Katrina Kaif: ನಟಿ ಕತ್ರಿನಾ ಕೈಫ್‌ ಗರ್ಭಿಣಿ?! ಹೊರಬಿತ್ತು ಬಿಗ್‌ ಸಿಕ್ರೇಟ್!!

Katrina Kaif pregnancy: ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಚರ್ಚೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದೀಗ ನಟಿ ಗರ್ಭಿಣಿಯಲ್ಲ ಎಂಬ ಸತ್ಯ ಹೊರಬೀಳುವುದರ ಜೊತೆಗೆ ಕ್ಯಾಟ್ ಏಕೆ ಲಂಡನ್‌ನಲ್ಲಿದ್ದಾರೆ ಎಂಬುದೂ ಬಹಿರಂಗವಾಗಿದೆ.

Written by - Savita M B | Last Updated : May 11, 2024, 09:20 PM IST
  • ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯ ಸುದ್ದಿಯಲ್ಲಿದ್ದಾರೆ.
  • ಈ ಪ್ರೆಗ್ನೆನ್ಸಿ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಈಗ ತಿಳಿಯೋಣ..
 Katrina Kaif: ನಟಿ ಕತ್ರಿನಾ ಕೈಫ್‌ ಗರ್ಭಿಣಿ?! ಹೊರಬಿತ್ತು ಬಿಗ್‌ ಸಿಕ್ರೇಟ್!! title=

Katrina Kaif: ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯ ಸುದ್ದಿಯಲ್ಲಿದ್ದಾರೆ.. 'ಕ್ಯಾಟ್' 2021 ರಲ್ಲಿ ನಟ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಇವರು ಮದುವೆಯಾಗಿ ಎರಡು ವರ್ಷಗಳಾಗಿವೆ. ಈ ಹಿನ್ನಲೆಯಲ್ಲಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ಮಾತು ಶುರುವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ನಟಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಫೋಟೋದಲ್ಲಿ, ಕತ್ರಿನಾ ಒಂದು ಕೈಯಲ್ಲಿ ಕಾಫಿ ಮಗ್ ಮತ್ತು ಇನ್ನೊಂದು ಕೈಯಲ್ಲಿ ಹೊಟ್ಟೆಯ ಮೇಲೆ ಹಿಡಿದಿದ್ದಾರೆ. ಫೋಟೋ ವೈರಲ್ ಆದ ನಂತರ, ನೆಟಿಜನ್‌ಗಳು ನಟಿ ಗರ್ಭಿಣಿ ಎಂದು ಮಾತನಾಡಲು ಪ್ರಾರಂಭಿಸಿದ್ದಾರೆ.. ಅಲ್ಲದೇ ಅವರನ್ನು ಭೇಟಿ ಮಾಡಲು ವಿಕ್ಕಿ ಕೌಶಲ್ ಲಂಡನ್‌ಗೆ ತೆರಳಿದ್ದಾರೆ ಎಂಬ ವದಂತಿಗಳು ಪ್ರಾರಂಭವಾಗಿವೆ. ಈ ಪ್ರೆಗ್ನೆನ್ಸಿ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಈಗ ತಿಳಿಯೋಣ.. 

ವರದಿಯ ಪ್ರಕಾರ, ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹಲವಾರು ಬಾರಿ ಹೊರಹೊಮ್ಮಿವೆ. ಇನ್ನು ಮುಂದೆ ಅಭಿಮಾನಿಗಳು ಈ ವದಂತಿಗಳು ಹರಡದಂತೆ, ವಿಕ್ಕಿ ಕೌಶಲ್ ಮತ್ತು ಅವರು ಇನ್ನೂ ಫ್ಯಾಮಿಲಿ ಪ್ಲ್ಯಾನ್‌ ಮಾಡಿಲ್ಲ.. ನಟಿ ಕತ್ರಿನಾ ಕೈಫ್ ಕೆಲವು ವೈಯಕ್ತಿಕ ಕೆಲಸಗಳಿಗಾಗಿ ಲಂಡನ್‌ನಲ್ಲಿದ್ದು, ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾಳೆ. ಈಗ ವಿಕ್ಕಿ ಕೌಶಲ್ ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ... 

ಇದನ್ನೂ ಓದಿ-ಹೇಗಿದ್ದಾಳೆ ಗೊತ್ತೆ ʼಕಬ್ಜʼ ಸಿನಿಮಾದ ನಟಿ ಶ್ರಿಯಾ ಅವರ ಮಗಳು.! ಅಮ್ಮನಂತೆ ಸಖತ್‌ ಕ್ಯೂಟ್‌ ಈಕೆ

ಜನವರಿ 2024 ರಲ್ಲಿ ಬಿಡುಗಡೆಯಾದ 'ಮೆರ್ರಿ ಕ್ರಿಸ್ಮಸ್' ಚಿತ್ರದಲ್ಲಿ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಅವರೊಂದಿಗೆ ನಟಿ ಕತ್ರಿನಾ ತೆರೆ ಹಂಚಿಕೊಂಡಿದ್ದಾರೆ. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಗಿತ್ತು. ಇದಾದನಂತರ ನಟಿ ಯಾವುದೇ ಪ್ರಾಜೆಕ್ಟ್‌ನ್ನು ಘೋಷಿಸಿಲ್ಲ.. ಸದ್ಯ ಕೈಫ್ ಅಭಿಮಾನಿಗಳು ಅವರ ಮುಂಬರುವ ಪ್ರಾಜೆಕ್ಟ್ ಬಗ್ಗೆ ಕುತೂಹಲ ಹೊಂದಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್‌ನಲ್ಲಿ ಪೋಷಕರಾಗಲಿದ್ದಾರೆ. ಇವರಿಗಿಂತಲೂ ಮೊದಲು, ರಿಚಾ ಚಡ್ಡಾ ಮತ್ತು ಅಲಿ ಅಫ್ಜ್ ಅವರು ಅಭಿಮಾನಿಗಳಿಗೆ ಗರ್ಭಧಾರಣೆಯ ಶುಭ ಸುದ್ದಿಯನ್ನು ನೀಡಿದರು. ಕೆಲ ದಿನಗಳ ಹಿಂದೆ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಿದ್ದರು. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. 

ಇದನ್ನೂ ಓದಿ-Jio Cinema ದಲ್ಲಿ Anime Showsಗಳ ಹಬ್ಬ..! ತಿಂಗಳಿಗೆ ಜಸ್ಟ್‌ 29 ರೂ. ಮಾತ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News