Ganapath: ಬಹು ನಿರೀಕ್ಷಿತ ‘ಗಣಪತ್’ ಚಿತ್ರದ ಟ್ರೈಲರ್ ಬಿಡುಗಡೆ!

Ganapath Movie trailer: ಟೈಗರ್ ಶ್ರಾಫ್‍ನ ಹೊಸ ಅವತಾರ, ಕೃತಿ ಸನೋನ್ ಅವರ ಸಾಹಸ ಮತ್ತು ಅಮಿತಾಭ್ ಬಚ್ಚನ್‍ ಅವರ ಉಪಸ್ಥಿತಿ ಇವೆಲ್ಲವೂ ಚಿತ್ರದ ಮೇಲಿರುವ ಕುತೂಹಲವನ್ನು ಇನ್ನಷ್ಟು ಹೆಚ್ಚಾಗಿಸಿದೆ.

Written by - YASHODHA POOJARI | Edited by - Puttaraj K Alur | Last Updated : Oct 10, 2023, 07:27 PM IST
  • ಬಹುನೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ‘ಗಣಪತ್‍’ನ ಟ್ರೈಲರ್ ಬಿಡುಗಡೆಯಾಗಿದೆ.
  • ಟೈಗರ್ ಶ್ರಾಫ್‍ನ ಹೊಸ ಅವತಾರ ಮತ್ತು ಕೃತಿ ಸನೋನ್ ಸಾಹಸಕ್ಕೆ ಮನಸೋತ ಅಭಿಮಾನಿಗಳು
  • ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಹೊಸ ಅನುಭವ ನೀಡಲು ಸಜ್ಜಾಗಿದೆ
Ganapath: ಬಹು ನಿರೀಕ್ಷಿತ ‘ಗಣಪತ್’ ಚಿತ್ರದ ಟ್ರೈಲರ್ ಬಿಡುಗಡೆ! title=
GANAPATH Official Trailer

ಬೆಂಗಳೂರು: ಟೈಗರ್ ಶ್ರಾಫ್‍ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಬಹುನೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ‘ಗಣಪತ್‍’ನ ಟ್ರೈಲರ್ ಬಿಡುಗಡೆಯಾಗಿದೆ. ಟೈಗರ್ ಶ್ರಾಫ್‍ನ ಹೊಸ ಅವತಾರ, ಕೃತಿ ಸನೋನ್ ಅವರ ಸಾಹಸ ಮತ್ತು ಅಮಿತಾಭ್ ಬಚ್ಚನ್‍ ಅವರ ಉಪಸ್ಥಿತಿ ಇವೆಲ್ಲವೂ ಚಿತ್ರದ ಮೇಲಿರುವ ಕುತೂಹಲವನ್ನು ಇನ್ನಷ್ಟು ಹೆಚ್ಚಾಗಿಸಿದೆ.

ಇದುವರೆಗೂ ಹತ್ತು ಹಲವು ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆಯಾದ ಪೂಜಾ ಎಂಟರ್ ಟೈನ್ಮೆಂಟ್, ಇದೀಗ ‘ಗಣಪತ್‍’ ಚಿತ್ರದ ಮೂಲಕ ನಿರ್ಮಾಣ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಹೊಸ ಸಿನಿಮಾ ಅನುಭವ ನೀಡುವುದಕ್ಕೆ ಸಜ್ಜಾಗಿದೆ.

‘ಗಣಪತ್‍’ ಚಿತ್ರವು ಅ.20ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈಗ ಟ್ರೈಲರ್ ಎಲ್ಲರ ಗಮನ ಸೆಳೆದಿದೆ. ಟ್ರೈಲರ್ ನೋಡಿ ಪ್ರೇಕ್ಷಕರು ಚಿತ್ರಕ್ಕಾಗಿ ಕುತೂಹಲದಿಂದ ಕಾಯುವಂತಾಗಿದೆ. ಈ ಟ್ರೈಲರ್‍ನಲ್ಲಿ ಕಣ್ಸೆಳೆಯುವ ದೃಶ್ಯಗಳ ಜೊತೆಗೆ ಅದ್ಭುತ ತಾರಾಗಣವಿದೆ. ಈ ಚಿತ್ರವು ಪ್ರೇಕ್ಷಕರನ್ನು ಇದುವರೆಗೂ ಕಂಡುಕೇಳರಿಯದ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ.

ಇದನ್ನೂ ಓದಿ: ಪ್ರಭುದೇವ ಅವರಂತೆ ಕಾಣುವ ಕಾರಣಕ್ಕೆ ನಯನತಾರಾ ವಿಘ್ನೇಶ್ ಶಿವನನ್ನು ಪ್ರೀತಿಸುತ್ತಿದ್ದರೇನೋ..! ಸೆಲೆಬ್ರಿಟಿ ಬಿಚ್ಚಿಟ್ಟ ಶಾಕಿಂಗ್ ಸೀಕ್ರೆಟ್

‘ಗಣಪತ್‍’ ಚಿತ್ರದ ಒಂದು ವಿಶೇಷತೆಯೆಂದರೆ ಇದೊಂದು ಭವಿಷ್ಯದ ಚಿತ್ರವಾಗಿರುವುದು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಜಗತ್ತಿನಾದ್ಯಂತ ಇರುವ ನುರಿತ ಗ್ರಾಫಿಕ್ಸ್ ತಜ್ಞರು ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಸ್ಪರ್ಶ ಕೊಟ್ಟಿದ್ದಾರೆ. ಇದುವರೆಗೂ ಯಾವುದೇ ಭಾರತೀಯ ಚಿತ್ರದಲ್ಲೂ ಕಂಡರಿಯದ ವಿಎಫ್‍ಎಕ್ಸ್ ಕೆಲಸ ಈ ಚಿತ್ರದಲ್ಲಿ ನೋಡಬಹುದಾಗಿದ್ದು, ಈ ನಿಟ್ಟಿನಲ್ಲಿ ‘ಗಣಪತ್‍’ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮಾದರಿಯಾಗಿರಲಿದೆ. ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಅನುಭವ ನೀಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಜಾಕಿ ಭಗ್ನಾನಿ ಹೇಳಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಗಣಪತ್‍’ ಚಿತ್ರದ ಹಾಡು ಮತ್ತು ಟೀಸರ್‍ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಹೃದಯ ತುಂಬಿ ಬಂದಿದೆ. ನಮ್ಮ ಕಲ್ಪನೆಯು ಪ್ರೇಕ್ಷಕರಿಗೂ ಇಷ್ಟವಾಗಿರುವುದನ್ನು ನೋಡಿ ಖುಷಿಯಾಗಿದೆ. ಟ್ರೈಲರ್‍ಗೂ ಅದೇ ಮಟ್ಟದ ಪ್ರೀತಿ ಹಾಗೂ ಮೆಚ್ಚುಗೆ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಷಯಗಳಿದ್ದು, ಮುಂದಿನ ದಿನಗಳಲ್ಲಿ ಒಂದರ ಹಿಂದೊಂದು ವಿಷಯವನ್ನು ಬಹಿರಂಗಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪೂಜಾ ಎಂಟರ್‍ಪ್ರೈಸಸ್ ಅರ್ಪಿಸುತ್ತಿರುವ ‘ಗಣಪತ್‍" (ಎ ಹೀರೋ ಈಸ್‍ ಬಾರ್ನ್‍) ಚಿತ್ರವನ್ನು ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಖಾ ದೇಶ್ ಮುಖ್ ಮತ್ತು ವಿಕಾಸ್‍ ಬಹ್ಲ್ ಜಂಟಿಯಾಗಿ ನಿರ್ಮಿಸಿದ್ದಾರೆ. ವಿಕಾಸ್‍ ಬಹ್ಲ್ ನಿರ್ದೇಶಿಸಿರುವ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಅ.20ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Ramayan: ಭಗವಾನ್‌ ರಾಮನ ಪಾತ್ರಕ್ಕಾಗಿ ಮಾಂಸ ಮತ್ತು ಮದ್ಯ ತ್ಯಜಿಸಿದ ಬಾಲಿವುಡ್‌ ಸ್ಟಾರ್‌ ನಟ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News