Bigg Boss ಅಲ್ಲಾರಿ.. Fit Boss : ಕನ್ನಡ ಕಿರುತೆರೆ ಲೋಕದಲ್ಲೇ ವಿಭಿನ್ನ ರಿಯಾಲಿಟಿ ಶೋ!

Fit Boss Kannada Reality Show: "ಫಿಟ್ ಬಾಸ್" ಶೀರ್ಷಿಕೆಯ ಕಾರ್ಯಕ್ರಮವನ್ನು ನಡೆಸಲಿದೆ. ಆರೋಗ್ಯಕ್ಕೆ ಮೀಸಲಾದ ವಿಶ್ವದ ಮೊದಲ ಕನ್ನಡ ಭಾಷೆಯ ರಿಯಾಲಿಟಿ ಶೋ ಇದಾಗಲಿದೆ.   

Written by - Chetana Devarmani | Last Updated : Oct 16, 2023, 09:12 AM IST
  • ಆರೋಗ್ಯಕ್ಕೆ ಮೀಸಲಾದ ವಿಶ್ವದ ಮೊದಲ ಕನ್ನಡದ ರಿಯಾಲಿಟಿ ಶೋ
  • ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶ
  • ತೂಕವನ್ನು ಕಳೆದುಕೊಳ್ಳಬೇಕಾದ ವ್ಯಕ್ತಿಗಳಿಗಾಗಿ ತಯಾರಿಸಿದ ಶೋ
Bigg Boss ಅಲ್ಲಾರಿ.. Fit Boss : ಕನ್ನಡ ಕಿರುತೆರೆ ಲೋಕದಲ್ಲೇ ವಿಭಿನ್ನ ರಿಯಾಲಿಟಿ ಶೋ!   title=

Fit Boss : ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಕನ್ನಡದ ವಾಹಿನಿಯೊಂದು ವಿಶಿಷ್ಟ ರಿಯಾಲಿಟಿ ಶೋಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಬಾರಿ "ಫಿಟ್ ಬಾಸ್" ಶೀರ್ಷಿಕೆಯ ಕಾರ್ಯಕ್ರಮವನ್ನು ನಡೆಸಲಿದೆ. ಆರೋಗ್ಯಕ್ಕೆ ಮೀಸಲಾದ ವಿಶ್ವದ ಮೊದಲ ಕನ್ನಡ ಭಾಷೆಯ ರಿಯಾಲಿಟಿ ಶೋ ಇದಾಗಲಿದೆ. 

ಇದನ್ನೂ ಓದಿ: BBK 10: ಸ್ನೇಕ್‌ ಶ್ಯಾಮ್‌ ಸಮರ್ಥರಾದ್ರೂ ಎಲಿಮಿನೇಟ್‌ ಆಗಲು ಕಾರಣ ಇದೇನಾ? 

ಫಿಟ್ ಬಾಸ್ ರಿಯಾಲಿಟಿ ಶೋ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಮ್ಮ ಪ್ರಯಾಣದಲ್ಲಿ ಒಂದು ಗಮನಾರ್ಹ ಹೆಜ್ಜೆಯಾಗಿದೆ. ಮೊದಲ ಬಾರಿಗೆ ತೂಕವನ್ನು ಕಳೆದುಕೊಳ್ಳಬೇಕಾದ ವ್ಯಕ್ತಿಗಳಿಗಾಗಿ ತಯಾರಿಸಿದ ಶೋ ಇದಾಗಿದೆ. ಈ ರಿಯಾಲಿಟಿ ಶೋ ನಲ್ಲಿ ಭಾಗವಹಿಸುವವರ ಜೀವನವನ್ನು ಪರಿವರ್ತಿಸುತ್ತದೆ. 'ಫಿಟ್ ಬಾಸ್' ಆಯುಷ್ ಟಿವಿಯಲ್ಲಿ ಸಂಜೆ 7 ರಿಂದ 8 ರವರೆಗೆ ಮತ್ತು ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ರಿಂದ 9 ರವರೆಗೆ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

ಆಡಿಷನ್‌ನಲ್ಲಿ ಸುಮಾರು 2 ಸಾವಿರ ಮಂದಿ ಭಾಗಿಯಾಗಿದ್ದರು. ಇದರಲ್ಲಿ ಸುಮಾರು 100 ಕೆಜಿಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 21 ದಿನಗಳ ಅವಧಿಯಲ್ಲಿ, ಸ್ಪರ್ಧಿಗಳು ವಿವಿಧ ದೈಹಿಕ ಮತ್ತು ಮಾನಸಿಕ ಸವಾಲುಗಳಲ್ಲಿ ಭಾಗವಹಿಸುವಾಗ ತೂಕವನ್ನು ಕಳೆದುಕೊಳ್ಳುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ನಗದು ಬಹುಮಾನ ನೀಡಲಾಗುವುದು. ಫಿಟ್‌ ಬಾಸ್‌ ಕಾರ್ಯಕ್ರಮವನ್ನು ಪ್ರಶಾಂತ್ ಸಂಬರಗಿ ನಿರೂಪಣೆ ಮಾಡಲಿದ್ದಾರೆ. 

ಇದನ್ನೂ ಓದಿ: Bigg Boss 10 : ಬಿಗ್‌ ಬಾಸ್‌ ನಲ್ಲಿ ಮೊದಲ ವಾರವೇ ಚಿಗುರೊಡೆಯಿತು ಪ್ರೇಮ.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News