ʼತಡರಾತ್ರಿ ಕರೆ ಮಾಡಿ ಕೋಣೆಗೆ ಬಾ ಎನ್ನುತ್ತಿದ್ದರು ಆ ಕ್ಯಾಮರಾಮ್ಯಾನ್‌ʼ.. ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ತೆರೆದಿಟ್ಟ ಖ್ಯಾತ ನಿರೂಪಕಿ!!

Famous Anchor and South Actress: ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಸಾಮಾನ್ಯವೆನ್ನುವಂತಾಗಿದೆ.. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಇವುಗಳನ್ನು ಎದುರಿಸಬೇಕಾಗುತ್ತದೆ. ಬರೀ ನಟಿಯರಷ್ಟೇ ಅಲ್ಲ ಇಂಡಸ್ಟ್ರಿಯ ಟಾಪ್ ಆ್ಯಂಕರ್‌ಗಳೂ ಈ ಕಾಸ್ಟಿಂಗ್‌ ಕೌಚ್‌ನ್ನು ಎದುರಿಸಿದ್ದಾರೆ.  

Written by - Savita M B | Last Updated : Mar 18, 2024, 12:50 PM IST
  • ಚಿತ್ರರಂಗದಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ತುಂಬಾ ಸಾಮಾನ್ಯವಾಗಿದೆ
  • ಪ್ರತಿ ನಟಿಯೂ ಒಂದಲ್ಲ ಒಂದು ಹಂತದಲ್ಲಿ ಇದನ್ನು ಎದುರಿಸಬೇಕಾಗುತ್ತದೆ.
  • ಇಂಡಸ್ಟ್ರಿಯ ಟಾಪ್ ಆ್ಯಂಕರ್‌ಗಳೂ ಇದನ್ನು ಎದುರಿಸಿದ್ದಾರೆ.
ʼತಡರಾತ್ರಿ ಕರೆ ಮಾಡಿ ಕೋಣೆಗೆ ಬಾ ಎನ್ನುತ್ತಿದ್ದರು ಆ ಕ್ಯಾಮರಾಮ್ಯಾನ್‌ʼ.. ಕಾಸ್ಟಿಂಗ್‌ ಕೌಚ್‌ ಕರಾಳ ಮುಖ ತೆರೆದಿಟ್ಟ ಖ್ಯಾತ ನಿರೂಪಕಿ!! title=

Famous Anchor and South Actress Shyamala: ಸೌತ್‌ ಚಿತ್ರರಂಗದಲ್ಲಿಯೂ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ತುಂಬಾ ಸಾಮಾನ್ಯವಾಗಿದೆ. ಪ್ರತಿ ನಟಿಯೂ ಒಂದಲ್ಲ ಒಂದು ಹಂತದಲ್ಲಿ ಇದನ್ನು ಎದುರಿಸಬೇಕಾಗುತ್ತದೆ. ಇಂಡಸ್ಟ್ರಿಯ ಟಾಪ್ ಆ್ಯಂಕರ್‌ಗಳೂ ಇದನ್ನು ಎದುರಿಸಿದ್ದಾರೆ. 

ಶ್ಯಾಮಲಾ ಚಿತ್ರರಂಗದ ಪ್ರತಿಷ್ಠಿತ ನಿರೂಪಕರಲ್ಲಿ ಒಬ್ಬರು. ಕಾರ್ಯಕ್ರಮಗಳಲ್ಲದೆ ಧಾರಾವಾಹಿಗಳಲ್ಲಿಯೂ ನಟಿಸಿ ಉತ್ತಮ ಮನ್ನಣೆ ಗಳಿಸಿದ್ದಾರೆ. ಇವರು ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ತಮ್ಮ ಅಭಿನಯದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಇತ್ತೀಚೆಗಷ್ಟೇ ಈಕೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಧಾರಾವಾಹಿಗಳಿಗೆ ಕ್ಯಾಮರಾಮನ್ ಆಗಿ ಕೆಲಸ ಮಾಡುವವರೊಬ್ಬರು ನನಗೆ ತುಂಬಾ ತೊಂದರೆ ಕೊಡುತ್ತಿದ್ದರು ಎಂದು ಸಂದರ್ಶನವೊಂದರಲ್ಲಿ ಶ್ಯಾಮಲಾ ಹೇಳಿದ್ದಾರೆ. ತಡರಾತ್ರಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ಪೀಡಿಸುತ್ತಿದ್ದರು ಎಂದು ಬಹಿರಂಗವಾಗಿ ಮಾತನಾಡಿದ್ದಾರೆ.. 

ಇದನ್ನೂ ಓದಿ-"ಆ ನಟ ಮೂರು ಮದುವೆ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ" : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ!

"ಒಂದು ದಿನ ಕ್ಯಾಮರಾಮ್ಯಾನ್‌ ಕಾಲ್‌ ಮಾಡಿ ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ಮಾತನಾಡುತ್ತಿದ್ದ. ಆದರೆ ಆಗ ಪೋನ್‌ ಎತ್ತಿದ್ದು ನನ್ನ ತಾಯಿ.. ಆ ಕೂಡಲೇ ಅದನ್ನೇಲ್ಲ ಕೇಳಿದ ನನ್ನ ಅಮ್ಮ ನಿನಗೆ ಗಂಡಸುತನ ಇಲ್ಲವೇ ಎಂದು ಕೇಳಿ ಆತನಿಗೆ ಗದರಿಸಿದ್ದರು..  ಈ ಬಗ್ಗೆ ಇಂಡಸ್ಟ್ರಿಯಲ್ಲಿನ ಹಿರಿಯರಿಗೆ ದೂರು ನೀಡಿದರೂ ಯಾರೂ ಅಷ್ಟಾಗಿ ಗಮನ ಹರಿಸಿಲ್ಲ. ಈ ವಿಚಾರದಲ್ಲಿ ತನಗೆ ತುಂಬಾ ನೋವಾಗಿದೆ" ಎಂದು ನಟಿ ಶ್ಯಾಮಲಾ  ತಮಗಾದ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಹೇಳಿಕೊಂಡಿದ್ದರು.. ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.. ಆದರೆ ಇದೀಗ ಅವರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 ಇಂಡಸ್ಟ್ರಿಯಲ್ಲಿ ಕೆಲವು ನಾಯಕಿ ಅಥವಾ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ಹೇಳುತ್ತಲೇ ಇರುತ್ತಾರೆ. ಪರಿಸ್ಥಿತಿಯಲ್ಲಿ ಅವಕಾಶಕ್ಕಾಗಿ ಶರಣಾಗಬೇಕಾಯಿತು ಎಂದು ಕೆಲವರು ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.. ಶರಣಾಗದಿದ್ದರೆ ಅವಕಾಶಗಳು ಬರುವುದಿಲ್ಲ, ಗುರಿ ಇಟ್ಟುಕೊಂಡು ಸಿನಿಮಾ ಜಗತ್ತಿಗೆ ಬಂದವರು ಕಾಸ್ಟಿಂಗ್ ಕೌಚ್ ನಿಂದ ದೂರ ಉಳಿಯಲು ಯತ್ನಿಸುತ್ತಾರೆ.. 

ಇದನ್ನೂ ಓದಿ-ಸನ್ನಿ ಲಿಯೋನ್‌ ಅತ್ತಿಗೆ ಯಾರು ಗೊತ್ತಾ? ಪಡ್ಡೆ ಹುಡುಗರ ಚಿನ್ನಿಗಿಂತ ಸಖತ್‌ ಹಾಟ್‌ ಗುರು ಈಕೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News