5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ

ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ ಜುಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್ 4) ವಜಾಗೊಳಿಸಿದೆ.

Last Updated : Jun 5, 2021, 12:52 AM IST
  • ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ ಜುಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್ 4) ವಜಾಗೊಳಿಸಿದೆ.
5G ನೆಟ್ ವರ್ಕ್ ವಿರೋಧಿಸಿ ಅರ್ಜಿ ಸಲ್ಲಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ.ಗಳ ದಂಡ title=
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ ಜುಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್ 4) ವಜಾಗೊಳಿಸಿದೆ.

ದೂರುದಾರರು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ನಟಿಗೆ 20 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ನಾನು ಯಾವತ್ತೂ ಕನ್ನಡ ಚಿತ್ರರಂಗವನ್ನು ಮರೆಯುವುದಿಲ್ಲ- ಯಾಮಿ ಗೌತಮಿ

ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ, 'ಮೊಕದ್ದಮೆ ಪ್ರಚಾರಕ್ಕಾಗಿ ಎಂದು ತೋರುತ್ತದೆ' ಎಂದು ಹೇಳಿದೆ ಜುಹಿ ಚಾವ್ಲಾ (Juhi Chawla) ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಚಾರಣೆಯ ಲಿಂಕ್ ಅನ್ನು ಪ್ರಸಾರ ಮಾಡಿದ್ದರಿಂದಾಗಿ, ಅದರ ಲಿಂಕ್ ನ್ನು ಅವರ ಅಭಿಮಾನಿಗಳು ಹಾಡು ಹಾಡುವ ಮೂಲಕ ಮೂರು ಬಾರಿ ಅಡ್ಡಿಪಡಿಸಿದರು.

ಇದನ್ನೂ ಓದಿ: ಜೂಹಿ ಚಾವ್ಲಾ 5G ಅರ್ಜಿ ವಿಚಾರಣೆ ವೇಳೆ ಹಾಡಿದ ಅಭಿಮಾನಿ, ನೋಟಿಸ್ ಜಾರಿ

ಈ ಪ್ರಕರಣದ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್‌ನ ವಿಚಾರಣೆಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News