ಬಾಲಿವುಡ್‌ ನಟ ಶಾಹಿದ್ ಕಪೂರ್ ಕೋಟಿ ಕೋಟಿ ಒಡೆಯ.. ಈತನ ಆಸ್ತಿ ಎಷ್ಟು ಗೊತ್ತಾ?

Bollywood actor Shahid Kapoor: ಬಾಲಿವುಡ್ ನಟ ಶಾಹಿದ್ ಕಪೂರ್ ಚಿತ್ರಗಳ ಜೊತೆಗೆ ಗಳಿಕೆಯಲ್ಲೂ ಬಹಳ ಮುಂದಿದ್ದಾರೆ. ಹಾಗಾದರೆ ಶಾಹಿದ್ ಕಪೂರ್ ಸಿನಿಮಾಗಳ ಹೊರತಾಗಿ ಎಲ್ಲಿಂದ ಹಣ ಗಳಿಸುತ್ತಾರೆ ಮತ್ತು ಈತನ ಆಸ್ತಿ ಎಷ್ಟು ಎಂಬುದನ್ನು ಇದೀಗ ತಿಳಿಯೋಣ..

Written by - Savita M B | Last Updated : Feb 16, 2024, 12:40 PM IST
  • ಶಾಹಿದ್ ಕಪೂರ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು.
  • ಶ್ರೇಷ್ಠ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಹಿದ್ ಕಪೂರ್ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದಾರೆ
  • ಶಾಹಿದ್ ಒಬ್ಬ ಶ್ರೇಷ್ಠ ನಟನಲ್ಲದೆ, ಬುದ್ಧಿವಂತ ಉದ್ಯಮಿ ಕೂಡ.
ಬಾಲಿವುಡ್‌ ನಟ ಶಾಹಿದ್ ಕಪೂರ್ ಕೋಟಿ ಕೋಟಿ ಒಡೆಯ.. ಈತನ ಆಸ್ತಿ ಎಷ್ಟು ಗೊತ್ತಾ? title=

Shahid Kapoor: ಶಾಹಿದ್ ಕಪೂರ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. 'ಹೈದರ್', 'ಕಬೀರ್ ಸಿಂಗ್' ನಂತಹ ಶ್ರೇಷ್ಠ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಹಿದ್ ಕಪೂರ್ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದ್ದಾರೆ. ಅವರು ಇತ್ತೀಚೆಗೆ ಬಿಡುಗಡೆಯಾದ 'ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ' ಚಿತ್ರದ ಮೂಲಕ ಜನಮನದಲ್ಲಿದ್ದಾರೆ.

ಶಾಹಿದ್ ಒಬ್ಬ ಶ್ರೇಷ್ಠ ನಟನಲ್ಲದೆ, ಬುದ್ಧಿವಂತ ಉದ್ಯಮಿ ಕೂಡ. ಚಲನಚಿತ್ರಗಳ ಹೊರತಾಗಿ, ಶಾಹಿದ್ ಕಪೂರ್ ಅನೇಕ ಆದಾಯದ ಮೂಲಗಳನ್ನು ಹೊಂದಿದ್ದಾರೆ... 2016 ರಲ್ಲಿ, ನಟ ಶಾಹಿದ್ ಬಟ್ಟೆ ಬ್ರಾಂಡ್‌ವೊಂದನ್ನು ಪ್ರಾರಂಭಿಸಿದ್ದು.. ಇದರಿಂದಲೂ ಉತ್ತಮ ಗಳಿಕೆ ಮಾಡುತ್ತಿದ್ದಾರೆ.. ಶಾಹಿದ್ ಇನ್‌ಸ್ಟಾಗ್ರಾಮ್ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. 

ಇದನ್ನೂ ಓದಿ-Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಒಂಬತ್ತು ಸಿನಿಮಾ ಘೋಷಣೆ!

ವರದಿಯ ಪ್ರಕಾರ, ಪ್ರಾಯೋಜಿತ ಪೋಸ್ಟ್‌ಗೆ ಶಾಹಿದ್ 20 ರಿಂದ 40 ಲಕ್ಷ ರೂ.ಇದಲ್ಲದೆ, ಶಾಹಿದ್ ಅನೇಕ ಪ್ರಶಸ್ತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಿಗೂ ಶಾಹಿದ್ ತೀರ್ಪುಗಾರರಾಗಿದ್ದಾರೆ. ಮಲೈಕಾ ಅರೋರಾ, ಗಣೇಶ್ ಹೆಗ್ಡೆ ಮತ್ತು ಲಾರೆನ್ಸ್ ಅವರೊಂದಿಗೆ 'ಜಲಕ್ ದಿಖ್ಲಾಜಾ' ಎಂಟನೇ ಸೀಸನ್‌ನಲ್ಲಿ ಶಾಹಿದ್ ಜಡ್ಜ್‌ ಆಗಿ ಕಾಣಿಸಿಕೊಂಡರು.

ಇದನ್ನೂ ಓದಿ-Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್‌ ಉಡುಗರೆಯಾಗಿ ನೀಡಿದ ಫ್ಯಾನ್‌!

ಚಲನಚಿತ್ರಗಳ ಹೊರತಾಗಿ, ಶಾಹಿದ್ ಅನೇಕ ಬ್ರಾಂಡ್‌ ಪ್ರಮೋಷನ್‌ಗಳನ್ನು ಮಾಡಿ.. ದೊಡ್ಡ ಮಟ್ಟದಲ್ಲಿ ಗಳಿಸುತ್ತಾರೆ.. ಇದಲ್ಲದೇ ನಟ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಶಾಹಿದ್ ಜುಹುದಲ್ಲಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಹೊಂದಿದ್ದು, ಅದನ್ನು ಕಾರ್ತಿಕ್ ಆರ್ಯನ್‌ಗೆ ಬಾಡಿಗೆಗೆ ನೀಡಿದ್ದಾರೆ.. 

ಕಾರ್ತಿಕ್ ಪ್ರತಿ ತಿಂಗಳು ಶಾಹಿದ್ ಗೆ 7.50 ಲಕ್ಷ ರೂ. ನೀಡುತ್ತಾರೆ ಎನ್ನಲಾಗಿದೆ.  ಶಾಹಿದ್ ಈ ಫ್ಲಾಟ್ ಅನ್ನು 2014 ರಲ್ಲಿ ಖರೀದಿಸಿದರು, ಇದರ ಬೆಲೆ ಸುಮಾರು 35 ಕೋಟಿ ರೂ. ಒಟ್ಟಾರೆಯಾಗಿ ನಟ ಶಾಹಿದ್ ಕಪೂರ್‌ ನಿವ್ವಳ ಮೌಲ್ಯ 300 ಕೋಟಿ ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News