BBK10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು!

Bigg Boss Kannada: ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಒಬ್ಬರು ಸದಸ್ಯರನ್ನು ಕಳೆದುಕೊಂಡ ಬಿಗ್‌ಬಾಸ್ ಮನೆಯ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ.   

Written by - Savita M B | Last Updated : Jan 22, 2024, 01:11 PM IST
  • ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ?
  • ಈ ವಾರದ ಆರಂಭ ಹರಿತವಾದ ಪ್ರಶ್ನೊತ್ತರಗಳಿಂದ ಆರಂಭವಾಗಿದೆ.
  • ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ.
BBK10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು! title=

BBK Final Week: ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ? ಈ ಪ್ರಶ್ನೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲಹುಟ್ಟಿಸಿದೆ. ಆ ಕುತೂಹಲ ತಣಿಸುವಂಥ ಸುಳಿವೊಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. 

ಈ ವಾರದ ಆರಂಭ ಹರಿತವಾದ ಪ್ರಶ್ನೊತ್ತರಗಳಿಂದ ಆರಂಭವಾಗಿದೆ. ಆ ಪ್ರಶ್ನೋತ್ತರ ಕಲಾಪವನ್ನು ನಡೆಸಿಕೊಡಲು ಬಿಗ್‌ಬಾಸ್ ಹಿಂದಿನ ಸ್ಪರ್ಧಿಯಾದ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಯ ಮೇಲೂ ಗುರಿಯಿಟ್ಟು ಎಸೆಯುತ್ತಿದ್ದ ಹಾಗೆ ಅವರ ಮುಖದ ಬಣ್ಣ ಭಾವ ಬದಲಾಗುತ್ತಿದೆ. 

ಇದನ್ನೂ ಓದಿ-ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್

‘ವಿನಯ್ ನಿಮಗೆ ಜೈ ಜೈ ಎನ್ನುವವರೆಲ್ಲ ಹೊರಗಡೆ ಇದ್ದಾರೆ. ಯಾಕೆ ಏನಾಯ್ತು?’ ‘ಕಾರ್ತಿಕ್, ಮಡಕೆ ಒಡೆದು, ಅವರಿಲ್ದೆ ನಾನು ಝೀರೊ ಅಲ್ಲ ಅಂತ ಪ್ರೂವ್ ಮಾಡ್ತೀನಿ ಅಂತ ಹೇಳಿದ್ರಿ… ಪ್ರೂವ್ ಮಾಡಿದ್ರಾ?’ ‘ಸಂಗೀತಾ ಅವ್ರೆ, ಪ್ರತಾಪ್‌ಗೆ ಇರುವ ಜನಬೆಂಬಲ ನೋಡಿ, ನೀವು ಅವ್ರಿಗೆ ಪ್ರತು… ತಮ್ಮ ಅಂತ ಬಾಂಡಿಂಗ್ ಕ್ರಿಯೇಟ್ ಮಾಡಿದ್ರಾ? ಅಂದ್ರೆ ಇದು ಸ್ಟಾರ್ಟರ್ಜಿನಾ?’

ಇದನ್ನೂ ಓದಿ-ಗಿಚ್ಚಿ ಗಿಲಿಗಿಲಿ ಹೊಸ ಸೀಸನ್‌ನಲ್ಲಿ ಜಡ್ಜ್‌ ಆಗಿ ಸ್ಯಾಂಡಲ್‌ವುಡ್‌ ಹಾಸ್ಯನಟನ ಎಂಟ್ರೀ!

ಇವು ಕೇವಲ ಎಕ್ಸಾಂಪಲ್‌ಗಳಷ್ಟೆ. ಇಂಥ ಇನ್ನೂ ಹತ್ತು ಹಲವು ನೇರ, ಹರಿತ ಪ್ರಶ್ನೆಗಳು ಬಿಗ್‌ಬಾಸ್‌ ಟಾಪ್ ಸಿಕ್ಸ್ ಸ್ಪರ್ಧಿಗಳ ಮುಖಕ್ಕೆ ರಾಚಿವೆ. ಅದಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ? ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುತ್ತಾರಾ? ಅಥವಾ ಸಹನೆ ಕಳೆದುಕೊಳ್ಳುತ್ತಾರಾ? 

ಈ ಎಲ್ಲವೂ ಇಂದಿನ ಸಂಚಿಕೆಯಲ್ಲಿ ಅನಾವರಣಗೊಳ್ಳಲಿದೆ. ಬಿಗ್‌ಬಾಸ್‌ ಫೈನಲ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮನೆಯಿಂದ ಮತ್ತೊಬ್ಬರು ಸ್ಪರ್ಧಿಯನ್ನು ಹೊರಗೆ ಕಳಿಸುವ ಸನ್ನಿವೇಶವೂ ಯಾವುದೇ ಕ್ಷಣದದಲ್ಲಿಯೂ ಎರಗಬಹುದಾಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿರುವ ಬಿಗ್‌ಬಾಸ್‌ ಮನೆಯ ಲೈವ್ ಅಪ್‌ಡೇಟ್‌ಗಳಿಗಾಗಿ ಜಿಯೊ ಸಿನಿಮಾ ನೋಡಿ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News