Bhagyalakshmi Serial: ಅಂತು ಇಂತು ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಭಾಗ್ಯಗೆ ಕೆಲಸ ಸಿಕ್ತು: ಗಂಡ ಹಾಕಿರುವ ಸವಾಲ್‌ ಗೆಲ್ಲುತ್ತಾಳಾ??

Bhagyalakshmi Kannada Serial: ಭಾಗ್ಯಲಕ್ಷಿʼ ಧಾರವಾಹಿಯಲ್ಲಿ ಮನೆಯ ಖರ್ಚನ್ನು ನಿಭಾಯಿಸಲು ದುಡುಮೆಗಾಗಿ ಕೆಲಸವನ್ನು ಹುಡುಕುತ್ತಿದ್ದ ಭಾಗ್ಯಾಗೆ ಕೊನೆಗೂ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಕುಕ್‌ ಕೆಲಸ ಸಿಕ್ಕಿದೆ. ಇದರೆ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : May 10, 2024, 01:06 PM IST
  • ಗಂಡನ ಮಾತನ್ನು ಒಪ್ಪಿಕೊಂಡ ಭಾಗ್ಯಾ ದುಡಿಯುವುದಕ್ಕಾಗಿ ಕೆಲಸವನ್ನು ಹುಡುಕಿ ಹುಡುಕಿ ಬೇಸೆತ್ತು ಹೋಗಿರುತ್ತಾಳೆ.
  • ಭಾಗ್ಯಾಳಿಗೂ ಕೂಡ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿದೆ.
  • ಸದ್ಯ ಭಾಗ್ಯಾಗೆ ಸ್ಟಾರ್‌ ಹೋಟೆಲ್‌ನಲ್ಲಿ ಕುಕ್‌ ಕೆಲಸ ಸಿಕ್ಕಿದೆ. ಮುಂದೆ ಈಕೆಗೆ ಒಳ್ಳೆಯ ಸಂಬಳವೂ ಸಿಗುತ್ತದೆ.
Bhagyalakshmi Serial: ಅಂತು ಇಂತು ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಭಾಗ್ಯಗೆ ಕೆಲಸ ಸಿಕ್ತು: ಗಂಡ ಹಾಕಿರುವ ಸವಾಲ್‌ ಗೆಲ್ಲುತ್ತಾಳಾ?? title=

Bhagya Got Cook Job In Five Star Hotel: ʻಭಾಗ್ಯಲಕ್ಷಿʼ ಧಾರವಾಹಿಯಲ್ಲಿ ತಾಂಡವ್‌ ತನ್ನ ಹೆಂಡತಿಗೆ ಭಾಗ್ಯಾಗೆ ಮನೆಯ ಅರ್ಧ ಖರ್ಚು ನೋಡಿಕೊಳ್ಳಲು ಸವಾಲು ಹಾಕಿರುತ್ತಾನೆ. ಗಂಡನ ಮಾತನ್ನು ಒಪ್ಪಿಕೊಂಡ ಭಾಗ್ಯಾ ದುಡಿಯುವುದಕ್ಕಾಗಿ ಕೆಲಸವನ್ನು ಹುಡುಕಿ ಹುಡುಕಿ ಬೇಸೆತ್ತು ಹೋಗಿರುತ್ತಾಳೆ. ಸೊಸೆಯನ್ನು ಬಿಟ್ಟುಕೊಡಬಾರದೆಂದು ಅತ್ತೆ ಕುಸುಮಾ ಸಹ ಕೆಲಸ ಹುಡುಕಿಕೊಂಡು ಹೋಗಿದ್ದಾಳೆ.

ಇದೀಗ ಅತ್ತೆ ಕುಸುಮಾಗೆ ಮೊದಲು ರೆಸ್ಟಾರೆಂಟ್‌ವೊಂದರಲ್ಲಿ ಕೆಲಸ ಪಡೆದುಕೊಂಡಿದ್ದು, ತನ್ನ ಸೊಸೆ ಗೆಲ್ಲಬೇಕು ಅಂತ ಅವಳು ಕೆಲಸ ಆರಂಭಿಸಿದ್ದಾಳೆ. ಈಗ ಭಾಗ್ಯಾಳಿಗೂ ಕೂಡ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ  ಅಡುಗೆ ಮಾಡುವ ಕೆಲಸ ಸಿಕ್ಕಿದೆ. ಭಾಗ್ಯಾ ಇಂಗ್ಲಿಷ್‌ ಗೊತ್ತಿಲ್ಲದ್ದಿದ್ದರೂ ತನ್ನ ಮಕ್ಕಳು ಹೇಳಿದ್ದನ್ನು ನೆನಪಿಸಿಕೊಂಡು ತನ್ನ ಬುದ್ಧಿವಂತಿಕೆಯಿಂದ ಇಂಟರ್‌ವ್ಯೂನಲ್ಲಿ ಪಾಸ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾಳೆ. 

ಇದನ್ನೂ ಓದಿ: Srirastu Shubhamastu: ದೀಪಿಕಾಗೆ ಟಕ್ಕರ್‌ ಕೊಟ್ಟ ಪೂರ್ಣಿ: ಮಗಳನ್ನು ಹುಡುಕಿಕೊಂಡ ಬಂದ ವನಜಾಗೆ ಶಾಕ್‌!

ಸದ್ಯ ಭಾಗ್ಯಾಗೆ ಸ್ಟಾರ್‌ ಹೋಟೆಲ್‌ನಲ್ಲಿ ಕುಕ್‌ ಕೆಲಸ ಸಿಕ್ಕಿದೆ. ಮುಂದೆ ಈಕೆಗೆ ಒಳ್ಳೆಯ ಸಂಬಳವೂ ಸಿಗುತ್ತದೆ. ಈಕೆಗೆ ಹೋಟೆಲ್‌ನಲ್ಲಿ ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಈಕೆ ಅದನೆಲ್ಲಾ ಎದುರಿಸಿ ನಿಲ್ಲುತ್ತಾಳೆ. ಮುಂದೆ ಭಾಗ್ಯಾಳ ಕೈ ರುಚಿಯನ್ನು ಎಲ್ಲರೂ ಮೆಚ್ಚಿಕೊಂಡು ಈಕೆಗೆ ಇನ್ನಷ್ಟು ಸಂಬಳ ಜಾಸ್ತೀ ಕೂಡ ಮಾಡಬಹುದು. ಅತ್ತೆ ಸೊಸೆ ಸೇರಿಕೊಂಡು ತಾಂಡವ್ ಮುಖಕ್ಕೆ ಹಣ ಎಸೆಯುತ್ತಾರಾ ಅಂತ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ತಾಂಡವ್‌  ಮುಂದೆ ಭಾಗ್ಯ  ಗೆಲ್ಲುವನ್ನು ಪಡೆದುಕೊಳ್ಳುವುದಕ್ಕೆ ಒಳ್ಳೆಯ ಸಮಯ ಬಂದಿದೆ. ಅತ್ತೆ ಸೊಸೆ ಇಬ್ಬರು ಕೂಡಿ ಹಣವನ್ನು ಸಂಪಾದಿಸಿ ಇಡೀ ಮನೆಯ ಖರ್ಚು, ಸಾಲದ ಅರ್ಧ ಭಾಗವನ್ನು ತೀರಿಸುತ್ತಾರಾ? ಮುಂದೆ  ಶ್ರೇಷ್ಠ ಮಾಡಿದ ಮೋಸದ ಫಲವಾಗಿ ಅವಳಿಗೂ ಎರಡು ಲಕ್ಷ ರೂಪಾಯಿ ಕೊಡಬೇಕಾಗಿದ್ದು ಈ ವಿಚಾರವಾಗಿ ಭಾಗ್ಯಾ ಏನು ಮಾಡಬಹುದು? ಈ ಕುತೂಹಲಕಾರಿ ವಿಷಯಗಳನ್ನು ಮುಂಬರುವ ಸಂಚಿಕೆಗಳಲ್ಲಿ ವೀಕ್ಷಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 
 

Trending News