ಮಾಡಿದ್ದು ಬರೀ ಎರಡೇ ಸಿನಿಮಾ.. ಆದ್ರೆ ನಟಿ ಮೃಣಾಲ್ ಸಂಭಾವನೆ ಎಷ್ಟು ಗೊತ್ತೆ..?

Mrunal Thakur remuneration : ದಕ್ಷಿಣ ಭಾರತದ ಟಾಪ್ ಯುವ ನಟಿಯಾಗಿ ಭರ್ತಿ ಪಡೆದಿರುವ ಬಿಟೌನ್‌ ಬೆಡಗಿ ನಟಿ ಮೃಣಾಲ್ ಟ್ಯಾಗೋರ್ ಮಾಡಿರೋದು ಕೇವಲ ಎರಡು ಸಿನಿಮಾ, ಆದ್ರೆ ಅವರ ಸಂಭಾವನೆ ಮತ್ತು ಬೇಡಿಕೆ ಗಗನಕ್ಕೇರಿದೆ. ಅಲ್ಲದೆ ಇದೀಗ ನಟ ನಾನಿ ಅಭಿನಯದ ನಾನ್ನಾ ಸಿನಿಮಾದಲ್ಲಿ ಮೃಣಾಲ್‌ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Written by - Krishna N K | Last Updated : Dec 19, 2023, 10:41 PM IST
  • ಸೌತ್‌ ಸಿನಿರಂಗದಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಮೃಣಾಲ್ ಠಾಕೂರ್ ಒಬ್ಬರು.
  • ದುಲ್ಕರ್ ಸಲ್ಮಾನ್ ಅವರ ಸೀತಾ ರಾಮಂ ಚಿತ್ರದ ಮೂಲಕ ಸೌತ್‌ ಸಿನಿ ಇಂಡ್ರಸ್ಟಿಂಗೆ ಬಂದರು.
  • ಮೃಣಾಲ್ ಟ್ಯಾಗೋರ್‌ಗೆ ಸೀತಾ ರಾಮಂ ಸಿನಿಮಾ ಅದ್ದೂರಿ ಸ್ವಾಗತ ನೀಡಿತು.
ಮಾಡಿದ್ದು ಬರೀ ಎರಡೇ ಸಿನಿಮಾ.. ಆದ್ರೆ ನಟಿ ಮೃಣಾಲ್ ಸಂಭಾವನೆ ಎಷ್ಟು ಗೊತ್ತೆ..? title=

Mrunal Thakur salary : ಬಾಲಿವುಡ್‌ನಿಂದ ಬಂದು ಸೌತ್‌ ಸಿನಿರಂಗದಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಮೃಣಾಲ್ ಠಾಕೂರ್ ಒಬ್ಬರು. ಹಿಂದಿಯಲ್ಲಿ ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ದುಲ್ಕರ್ ಸಲ್ಮಾನ್ ಅವರ ಸೀತಾ ರಾಮಂ ಚಿತ್ರದ ಮೂಲಕ ಸೌತ್‌ ಸಿನಿ ಇಂಡ್ರಸ್ಟಿಂಗೆ ಬಂದರು.

ಹೌದು.. ಮೃಣಾಲ್ ಟ್ಯಾಗೋರ್‌ಗೆ ಸೀತಾ ರಾಮಂ ಸಿನಿಮಾ ಅದ್ದೂರಿ ಸ್ವಾಗತ ನೀಡಿತು. ಈ ಚಿತ್ರದ ಮೂಲಕ ಮೃಣಾಲ್ ಪ್ಯಾನ್ ಇಂಡಿಯಾ ಲೆವಲೆನಲ್ಲಿ ಮಿಂಚಿದರು. ಸದ್ಯ ವಿಜಯ್ ದೇವರಕೊಂಡ ಜೊತೆ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ. ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆ ತೆರೆಕಂಡ ‘ಹಾಯ್‌ ನಾನ್ನಾ’ ಚಿತ್ರದಲ್ಲಿ ನಾನಿ ಜತೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಸಲಾರ್ ಬಜೆಟ್ 400 ಕೋಟಿ.. ಆದ್ರೆ ಪ್ರಭಾಸ್‌, ಶ್ರುತಿ ಹಾಸನ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಇಷ್ಟುದಿನ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ಆಸಕ್ತಿ ತೋರಿಸುತ್ತಿರುವ ಮೃಣಾಲ್ ಟ್ಯಾಗೋರ್ ಇತ್ತೀಚೆಗೆ ಮೇಡ್ ಇನ್ ಹೆವನ್ 2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ.

ಮೃಣಾಲ್ ಠಾಕೂರ್ ಸಂಭಾವನೆ ವಿಚಾರಕ್ಕೆ ಬಂದ್ರೆ, ಹಾಯ್‌ ನಾನಾ ಚಿತ್ರದಲ್ಲಿ ನಟಿಸಲು ಸುಮಾರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಯುವ ನಟಿ ಮೃಣಾಲ್ ಠಾಕೂರ್ ತಮಿಳು ಚಿತ್ರರಂಗದ ಪ್ರಮುಖ ನಟಿಯರಿಗೆ ನೀಡುವ ಸಂಭಾವನೆಯನ್ನು ಪಡೆದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ:ಲೀಲಾವತಿ ಕೊನೆಯವರೆಗೂ ಇದೇ ಚಿಂತೆಯಲ್ಲಿ ನರಳಿದರಂತೆ.. ವಿನೋದ್ ರಾಜ್ ಬಿಚ್ಚಿಟ್ರು ಆ ಸತ್ಯ!

ಕಡಿಮೆ ಅವಧಿಯಲ್ಲಿ ಖ್ಯಾತಿ ಗಳಿಸಿದ ಮೃಣಾಲ್ ಟ್ಯಾಗೋರ್ ಅವರ ಆಸ್ತಿ ಮೌಲ್ಯದ ಕುರಿತು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಸಿದ್ದಾರೆ. ನಟಿಯ ಆಸ್ತಿ ಮೌಲ್ಯ ರೂ.33 ಕೋಟಿಗೂ ಹೆಚ್ಚು ಇರಲಿದೆ ಎನ್ನಲಾಗಿದೆ. ಅವರ ಬಳಿ 30 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರು ಮತ್ತು 45 ಲಕ್ಷ ಮೌಲ್ಯದ ಹೊಂಡಾ ಅಕಾರ್ಡ್ ಕೂಡ ಇದೆ. ಇದಲ್ಲದೇ ಇತ್ತೀಚೆಗೆ ನಟಿ 2.17 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಅಲ್ಲದೆ ಲಕ್ಷಗಟ್ಟಲೇ ಬೆಲೆ ಬಾಳುವ ಹ್ಯಾಂಡಲ್‌ ಬ್ಯಾಗ್‌ ಇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News