RCB ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾರಣ..! DBoss ಪ್ಯಾನ್ಸ್‌ ಪೋಸ್ಟ್‌ ವೈರಲ್‌

Reason for RCB Lose : ಗಜಪಡೆ ಎಂಬ ಹೆಸರಿನ ಟ್ಟಿಟರ್‌ ಅಕೌಂಟ್‌ನಲ್ಲಿ ʼಶುಭಕಾರ್ಯಕ್ಕೆ ಮುತೈದೆಯರನ್ನು ಕರೀಬೇಕು, ಗಂಡ ಸತ್ತವರನ್ನ ಅಲ್ಲʼ ಎಂದು ಅಶ್ವಿನಿ ಪುನೀತ್‌ ಅವರ ಫೋಟೋವನ್ನು ಹಂಚಿಕೊಂಡು ಅವಹೇಳನಕಾರಿಯಾಗಿ ಪೋಸ್ಟ್‌ ಬರೆಯಲಾಗಿದೆ.. ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written by - Krishna N K | Last Updated : Apr 5, 2024, 12:47 PM IST
    • ಶುಭಕಾರ್ಯಕ್ಕೆ ಮುತೈದೆಯರನ್ನು ಕರೀಬೇಕು
    • ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ ಕಾರಣ
    • ಗಜಪಡೆ ಎಂಬ ಪೇಜ್‌ನಿಂದ ಅವಹೇಳನ ಪೋಸ್ಟ್‌
RCB ಸೋಲಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾರಣ..! DBoss ಪ್ಯಾನ್ಸ್‌ ಪೋಸ್ಟ್‌ ವೈರಲ್‌ title=

Ashwini Puneeth rajkumar : IPL 2024 ಇದುವರೆಗೆ RCB ಕೇವಲ 1 ಮ್ಯಾಚ್‌ ಗೆದ್ದಿದ್ದು ಬಿಟ್ಟರೆ ಉಳಿದ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಇದರಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಆರ್‌ಸಿಬಿ ಸೋಲಿಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾರಣ ಎಂದು ಟ್ರೋಲ್‌ ಮಾಡಲಾಗುತ್ತಿದೆ.

ಹೌದು.. ಈ ಕುರಿತು ಗಜಪಡೆ ಎಂಬ ಹೆಸರಿನ ಟ್ಟಿಟರ್‌ ಅಕೌಂಟ್‌ನಲ್ಲಿ ʼಶುಭಕಾರ್ಯಕ್ಕೆ ಮುತೈದೆಯರನ್ನು ಕರೀಬೇಕು, ಗಂಡ ಸತ್ತವರನ್ನ ಅಲ್ಲʼ ಎಂದು ಅಶ್ವಿನಿ ಪುನೀತ್‌ ಅವರ ಫೋಟೋವನ್ನು ಹಂಚಿಕೊಂಡು ಅವಹೇಳನಕಾರಿಯಾಗಿ ಪೋಸ್ಟ್‌ ಬರೆಯಲಾಗಿತ್ತು. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ:ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಡೇನಿಯಲ್‌ಗೆ..! ನಿಧನಕ್ಕೂ ಮುನ್ನ ಈ ಪುಣ್ಯ ಕ್ಷೇತ್ರಗಳ ದರ್ಶನ ಪಡೆದಿದ್ದ ನಟ

ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ದೊಡ್ಮನೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಅಲ್ಲದೆ, ಈ ಕುರಿತು ದೂರು ನೀಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಇದು ದರ್ಶನ್‌ ಅಭಿಮಾನಿಗಳ ಕೆಲಸವಲ್ಲ, ಬೇರೆ ಯಾರೋ ಕಿಡಿಗೇಡಿ ಈ ರೀತಿ ಮಾಡಿದ್ದಾರೆ ಎಂದು ದಚ್ಚು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ರೀತಿ ಮಾಡುವುದು ಸರಿಯಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಲಾದ ಈ ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯಾರೇ ಆದರೂ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಅಂತ ದರ್ಶನ್‌, ಸುದೀಪ್‌ ಹಾಗೂ ಇತರೆ ನಟರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:ಸೂಪರ್‌ ಸ್ಟಾರ್‌ ನಟ ಅಜಿತ್ ಕುಮಾರ್‌​ ಕಾರು ಭೀಕರ ಅಪಘಾತ..! ಇನ್ನೊಬ್ಬ ನಟನ ಕತ್ತಿಗೆ ಗಾಯ.. ಹೇಗಿದೆ ʼತಲಾʼ ಆರೊಗ್ಯ

ಇನ್ನು ಇತ್ತೀಚಿಗೆ ಅಶ್ವಿನಿಯವರು ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದರು. ಅದಕ್ಕೂ ಸಹ ಕೆಲವರು ಹೀಯಾಳಿಸಿ ಮಾತನಾಡಿದ್ದರು. ಇದೀಗ ಈ ಕೃತ್ಯ ಎಸಗಿದ್ದಾರೆ. ಇದರಿಂದ ಕೋಪಗೊಂಡಿರುವ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಇಂದು ದೂರು ನೀಡುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News