"ಸ್ಯಾಂಟ್ರೋ" ಹತ್ತಿದ ಪೊಲೀಸರಿಗೆ ನಡುಕ: ಸ್ಟೇ ತರಲು ಪೊಲೀಸರ ತಯಾರಿ..!

ಸಿಡಿ ಬಿಡುಗಡೆಯಾಗುವ  ಭಯದಲ್ಲಿ ರಾಜಕಾರಣಿಗಳಿದ್ದರೆ, ಲಕ್ಷ ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಅಧಿಕಾರಿಗಳ ಸ್ಥಿತಿ ಬೇರೆಯದೆ ಆಗಿದೆ. ಸ್ಯಾಂಟ್ರೋ ರವಿ ಪೋಸ್ಟಿಂಗ್ ಡೀಲ್ ಆದ ಬಳಿಕ ಪೊಲೀಸ್ ಅಧಿಕಾರಿಗಳ ಮಿನಿಟ್ ಕಾಪಿ, ಟ್ರಾನ್ಸ್ಫರ್ ಲಿಸ್ಟ್ ನ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದ. 

Written by - VISHWANATH HARIHARA | Edited by - Yashaswini V | Last Updated : Jan 18, 2023, 10:11 AM IST
  • ಸಿಡಿ ಬಿಡುಗಡೆಯಾಗುವ ಭಯದಲ್ಲಿ ರಾಜಕಾರಣಿಗಳು!
  • ಲಕ್ಷ ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಅಧಿಕಾರಿಗಳ ಸ್ಥಿತಿ ಬೇರೆಯೇ ಆಗಿದೆ.
  • ರವಿ ಕೇಸ್ ಸಿಐಡಿಗೆ ವರ್ಗಾವಣೆಯಾಗಲಿದ್ದು, ಮೊದಲಿಗೆ ಈ ಭ್ರಷ್ಟ ಪೊಲೀಸರಿಗೆ ನೋಟೀಸ್ ನೀಡುವ ಸಾಧ್ಯತೆ
"ಸ್ಯಾಂಟ್ರೋ" ಹತ್ತಿದ ಪೊಲೀಸರಿಗೆ ನಡುಕ: ಸ್ಟೇ ತರಲು ಪೊಲೀಸರ ತಯಾರಿ..! title=
Santro Ravi Case

ಬೆಂಗಳೂರು: ಸದ್ಯ ಪಿಂಪ್ ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೇ ಒಂದು ಕಡೆ ರಾಜಕಾರಣಿಗಳ ಎದೆಯಲ್ಲಿ ನಡುಕ‌ ಶುರುವಾಗಿದೆ. ಈಗ ಮತ್ತೊಂದು ಕಡೆ ಕೆಲ ಪೊಲೀಸರಿಗೆ ಚಳಿಜ್ವರವೇ ಬಂದಿದೆ ಎನ್ನಲಾಗಿದೆ.   

ಸಿಡಿ ಬಿಡುಗಡೆಯಾಗುವ  ಭಯದಲ್ಲಿ ರಾಜಕಾರಣಿಗಳಿದ್ದರೆ, ಲಕ್ಷ ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಅಧಿಕಾರಿಗಳ ಸ್ಥಿತಿ ಬೇರೆಯದೆ ಆಗಿದೆ. ಸ್ಯಾಂಟ್ರೋ ರವಿ ಪೋಸ್ಟಿಂಗ್ ಡೀಲ್ ಆದ ಬಳಿಕ ಪೊಲೀಸ್ ಅಧಿಕಾರಿಗಳ ಮಿನಿಟ್ ಕಾಪಿ, ಟ್ರಾನ್ಸ್ಫರ್ ಲಿಸ್ಟ್ ನ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದ. ಇದೆಲ್ಲಾ ಬಿಲ್ಡಪ್ ಗಾಗಿ. ಇದಕ್ಕೂ ಮುನ್ನ ಸಚಿವರಿಗೆ, ಶಾಸಕರಿಗೆ ಹಣ ಕೊಡಬೇಕು ಎಂದು ಹಣ ಪಡೆಯುತ್ತಿದ್ದ. ಹಣ ರೆಡಿ ಮಾಡ್ಕೊಂಡು ಅಧಿಕಾರಿಗಳು ರವಿಗೆ ಫೋಟೋ ವಾಟ್ಸ್ ಆಪ್ ಮಾಡಬೇಕಿತ್ತು. ಇದೇ ರೀತಿ  ಸಾಕಷ್ಟು ಪೊಲೀಸರು ಹಣ ಕಳುಹಿಸಿರುವ ವಾಟ್ಸ್ ಆಪ್ ಚಾಟ್ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ಇದರ ಜೊತೆಗೆ ಮಿನಿಟ್ ಕಾಪಿಗಳನ್ನ ಪೊಲೀಸರು ಇಗಾಗಲೇ ಸೀಜ್ ಮಾಡಿದ್ದಾರೆ. 

ಇದನ್ನೂ ಓದಿ- Santro Ravi CID Custody: ಜ.30ರವರೆಗೆ ಸಿಐಡಿ ವಶಕ್ಕೆ ಸ್ಯಾಂಟ್ರೋ ರವಿ!

ಇನ್ನು  ರವಿ ಕೇಸ್ ಸಿಐಡಿಗೆ ವರ್ಗಾವಣೆಯಾಗಲಿದ್ದು, ಮೊದಲಿಗೆ ಈ ಭ್ರಷ್ಟ ಪೊಲೀಸರಿಗೆ ನೋಟೀಸ್ ನೀಡುವ ಸಾಧ್ಯತೆಯಿದೆ. ಇದರಿಂದ ಆಘಾತಕ್ಕೊಳಗಾಗಿರೋ ಪೊಲೀಸರು ಕೋರ್ಟ್ ಮೂಲಕ ಹೇಗಾದರೂ ತಮ್ಮ ಹೆಸರು ಆಚೆ ಬರದಂತೆ ಸ್ಟೇ ತರಲು ಹರಸಾಹಸಪಡುತ್ತಿದ್ದಾರೆ ಎಂಬ ಮಾತಿದೆ. 

ಇದನ್ನೂ ಓದಿ- “ಆತ್ಮ ಕಳ್ಳ ಎಂದರೆ ಆ ಕ್ಷಣಕ್ಕೆ ಆತಹತ್ಯೆ ಮಾಡಿಕೊಳ್ತೇನೆ”: ಗೃಹ ಸಚಿವ ಜ್ಞಾನೇಂದ್ರ

ಒಟ್ಟಿನಲ್ಲಿ  ಪಿಂಪ್ ಒಬ್ಬ ಕೆಲ ರಾಜಕಾರಣಿಗಳ ಚೇಲಾ ಆಗಿ ದೊಡ್ಡ ದೊಡ್ಡ ಡೀಲ್ ಕುದುರಿಸುತ್ತಿದ್ದ ಎಂದರೆ  ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News