ಎಸ್‌ಎಸ್‌ಎಲ್‌ಸಿ ಫಲಿತಾಂಶ: ಗಡಿಜಿಲ್ಲೆ ಟಾಪ್ 10 ರಲ್ಲಿ ಸರ್ಕಾರಿ ಶಾಲೆಯ 8 ವಿದ್ಯಾರ್ಥಿಗಳು‌

Karnataka SLLC 10th Result 2024: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆಯು 24ನೇ ಸ್ಥಾನ ಗಳಿಸಿದೆ.

Written by - Yashaswini V | Last Updated : May 9, 2024, 05:55 PM IST
  • ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 11655 ವಿದ್ಯಾರ್ಥಿಗಳ ಪೈಕಿ 8344 ವಿದ್ಯಾರ್ಥಿಗಳು ಉತ್ತೀರ್ಣ
  • ಕಳೆದ ವರ್ಷ 94.37 ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 7ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿದ್ದ ಜಿಲ್ಲೆ 24ನೇ ಸ್ಥಾನಕ್ಕೆ ಕುಸಿತ
ಎಸ್‌ಎಸ್‌ಎಲ್‌ಸಿ ಫಲಿತಾಂಶ:  ಗಡಿಜಿಲ್ಲೆ ಟಾಪ್ 10 ರಲ್ಲಿ ಸರ್ಕಾರಿ ಶಾಲೆಯ 8 ವಿದ್ಯಾರ್ಥಿಗಳು‌ title=

Karnataka SLLC 10th Result : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರು ಬಹಳ. ‌ಆದರೆ, ಇಂದು ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ (Karnataka SSLC Result 2024)  ಚಾಮರಾಜನಗರ ಜಿಲ್ಲೆಯ ಟಾಪ್ 10 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳುವ್ ಸರ್ಕಾರಿ ಶಾಲೆಯವರೇ ಆಗಿದ್ದಾರೆ.

ಹೌದು... , ಚಾಮರಾಜನಗರದ (Chamarajanagar) ಟಾಪ್ 10 ವಿದ್ಯಾರ್ಥಿಗಳಲ್ಲಿ 8 ಮಂದಿ ವಿದ್ಯಾರ್ಥಿಗಳು ಜಿಲ್ಲೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ- Karnataka SSLC Results 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಎಲ್ಲಿ? ಯಾವಾಗ? ಹೇಗೆ ಪರಿಶೀಲಿಸುವುದು?

ಗುಂಡ್ಲುಪೇಟೆ ಆದರ್ಶ ವಿದ್ಯಾಲಯಯದ ರತ್ಮಮ್ಮ‌ ಎಂಬ ವಿದ್ಯಾರ್ಥಿನಿ 625 ಕ್ಕೆ 619 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ನಂ1 ಸ್ಥಾನದಲ್ಲಿದ್ದಾರೆ.  ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಸಿ.ವಿ.ಪ್ರಜನ್ ಮತ್ತು ಎಸ್.ಸಂಜನಾ ಎಂಬವರು 618, ಚಾಮರಾಜನಗರ ಆದರ್ಶ ವಿದ್ಯಾಲಯದ ಆರ್ಯ ಎಂಬಾತ 617, ಗುಂಡ್ಲುಪೇಟೆಯ ನಿಸರ್ಗ ವಿದ್ಯಾನಿಕೇತನ ಶಾಲೆಯ ಯುಕ್ತಾ 616,  ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ನಂದಿನಿ, ಗುಂಡ್ಲುಪೇಟೆಯ ಕ್ರೈಸ್ಟ್ ಸಿಎಂಐ ಶಾಲೆಯ ಅಂಕಿತಾ 615 , ‌ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಉಮ್ಮೇ ಜುಹಾ 614, ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ಅಹಲ್ಯಾ 613, ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಆಫಿಯಾ 612 ಅಂಕ ಪಡೆಯುವ ಮೂಲಕ ಟಾಪ್ 10 ಸ್ಥಾನದಲ್ಲಿದ್ದಾರೆ.

ಸರ್ಕಾರದ ಆದರ್ಶ ವಿದ್ಯಾಲಯದ 8 ಮಂದಿ ಟಾಪ್ 10 ಅಲ್ಲಿ ಇದ್ದರೇ ಇಬ್ಬರು ವಿದ್ಯಾರ್ಥಿಗಳು ಖಾಸಗಿ ಶಾಲೆಯವರಾಗಿದ್ದಾರೆ.

ಇದನ್ನೂ ಓದಿ- Karnataka SSLC Results 2024 :ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಯಾದಗಿರಿಗೆ ಕೊನೆಯ ಸ್ಥಾನ 

24 ಕ್ಕೆ ಕುಸಿತ: 
2023 24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆಯು 24 ನೇ ಸ್ಥಾನ ಗಳಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 11655 ವಿದ್ಯಾರ್ಥಿಗಳ ಪೈಕಿ 8344 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 71.59ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 94.37 ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 7ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿತ್ತು ಆದರೆ ಈ ಬಾರಿ ಫಲಿತಾಂಶದಲ್ಲಿ ಇಳಿಕೆ ಕಂಡುಬಂದಿದ್ದು 7ನೇ ಸ್ಥಾನದಿಂದ 24 ನೇ ಸ್ಥಾನ ಪಡೆಯುವ ಮೂಲಕ ಫಲಿತಾಂಶದಲ್ಲಿ ಕುಸಿತ ಕಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News