ಮತ್ತೆ ಬಾನೆತ್ತರಕ್ಕೆ ಹಾರಲಿದೆ ಈ ಕಂಪನಿಯ ವಿಮಾನಗಳು ! ಇನ್ನು ಅಗ್ಗದ ದರದಲ್ಲಿ ಲಭ್ಯ ವಿಮಾನ ಯಾನ !

SpiceJet Ticket Price:UK ಮೂಲದ SRAM ಮತ್ತು MRAM ಗ್ರೂಪ್ ಸ್ಪೈಸ್ ಎಕ್ಸ್‌ಪ್ರೆಸ್‌ನಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಏರ್‌ಲೈನ್ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ, ಹೂಡಿಕೆ ಒಪ್ಪಂದದ ಅಡಿಯಲ್ಲಿ ಎರಡೂ ಪಕ್ಷಗಳು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿವೆ

Written by - Ranjitha R K | Last Updated : May 15, 2023, 02:23 PM IST
  • ಯುಕೆ ಗ್ರೂಪ್ ನಿಂದ 100 ಮಿಲಿಯನ್ ಡಾಲರ್ ಹೂಡಿಕೆ
  • ಹೂಡಿಕೆ ಪಡೆಯಲಿರುವ ಸ್ಪೈಸ್ ಎಕ್ಸ್‌ಪ್ರೆಸ್ ಮತ್ತು ಲಾಜಿಸ್ಟಿಕ್ಸ್
  • ಮೇ 15 ರೊಳಗೆ ಉತ್ತರ ನೀಡುವಂತೆ Gofirstಗೆ ಸೂಚನೆ
ಮತ್ತೆ ಬಾನೆತ್ತರಕ್ಕೆ ಹಾರಲಿದೆ ಈ ಕಂಪನಿಯ ವಿಮಾನಗಳು ! ಇನ್ನು ಅಗ್ಗದ ದರದಲ್ಲಿ ಲಭ್ಯ ವಿಮಾನ ಯಾನ !   title=

SpiceJet Ticket Price : ಕಡಿಮೆ ವೆಚ್ಚದ ಏರ್‌ಲೈನ್ ಕಂಪನಿ ಸ್ಪೈಸ್‌ಜೆಟ್ ಏರ್‌ಲೈನ್ ತನ್ನ ಅಂಗಸಂಸ್ಥೆಯಾದ ಸ್ಪೈಸ್ ಎಕ್ಸ್‌ಪ್ರೆಸ್ ಮತ್ತು ಲಾಜಿಸ್ಟಿಕ್ಸ್ ಯುಕೆ ಗ್ರೂಪ್ ನಿಂದ  100  ಮಿಲಿಯನ್ ಡಾಲರ್ ಹೂಡಿಕೆಯನ್ನು ಸಂಗ್ರಹಿಸಲಿದೆ ಎಂದು ಹೇಳಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ವಿಮಾನ ಗುತ್ತಿಗೆದಾರರಿಂದ ಸಲ್ಲಿಸಲಾದ ದಿವಾಳಿತನದ ಅರ್ಜಿಯನ್ನು  ಸ್ಪೈಸ್‌ಜೆಟ್,  ಎದುರಿಸುತ್ತಿದೆ. ಇತ್ತೀಚೆಗಷ್ಟೇ ಸ್ಪೈಸ್‌ಜೆಟ್   ಸ್ಪೈಸ್‌ಎಕ್ಸ್‌ಪ್ರೆಸ್‌ನಿಂದ ಬೇರ್ಪಟ್ಟಿದೆ. ದಿವಾಳಿತನದ ಅರ್ಜಿ ಸಲ್ಲಿಸುವ ಯಾವುದೇ ಯೋಜನೆ ಸಂಸ್ಥೆಯ ಮುಂದೆ ಇಲ್ಲ ಎಂದು ವಿಮಾನಯಾನ ಸಂಸ್ಥೆಯು ಕಳೆದ ವಾರ ಹೇಳಿತ್ತು. ಅಲ್ಲದೆ, ಹಾರಾಟ ನಿಲ್ಲಿಸಿರುವ 25 ವಿಮಾನಗಳ ಹಾರಾಟ ಆರಂಭಿಸಲು 50 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ.

100 ಮಿಲಿಯನ್  ಡಾಲರ್ ಹೂಡಿಕೆ ಮಾಡಲಿದೆಸ್ಪೈಸ್ ಎಕ್ಸ್‌ಪ್ರೆಸ್ :
UK ಮೂಲದ SRAM ಮತ್ತು MRAM ಗ್ರೂಪ್ ಸ್ಪೈಸ್ ಎಕ್ಸ್‌ಪ್ರೆಸ್‌ನಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಏರ್‌ಲೈನ್ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ, ಹೂಡಿಕೆ ಒಪ್ಪಂದದ ಅಡಿಯಲ್ಲಿ ಎರಡೂ ಪಕ್ಷಗಳು ಒಪ್ಪಿಗೆ ಪತ್ರಕ್ಕೆ (MOU)ಸಹಿ ಹಾಕಿವೆ. ಮತ್ತೊಂದೆಡೆ, ಮತ್ತೊಂದು ವಿಮಾನಯಾನ ಸಂಸ್ಥೆ GoFirst ನ ದಿವಾಳಿತನದ ಅರ್ಜಿಯನ್ನು NCLT ಸ್ವೀಕರಿಸಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ GoFirst ಪರವಾಗಿ DGCA ಗೆ ಉತ್ತರವನ್ನು ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ : Unclaimed Deposits In Bank: ದೇಶದ ಬ್ಯಾಂಕ್‌ಗಳಲ್ಲಿರುವ 35 ಸಾವಿರ ಕೋಟಿ ಹಣಕ್ಕೆ ಕೇಳೋರಿಲ್ಲ!

ಮೇ 15 ರೊಳಗೆ ಉತ್ತರ ನೀಡುವಂತೆ Gofirstಗೆ ಸೂಚನೆ : 
ವಾಸ್ತವವಾಗಿ, ಮೇ 15 ರೊಳಗೆ ಹಾರಾಟವನ್ನು ನಿಲ್ಲಿಸುವ ಬಗ್ಗೆ Gofirst ನಿಂದ  DGCA ಉತ್ತರವನ್ನು ಕೇಳಿದೆ. ಬೇಜವಾಬ್ದಾರಿಯಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಮತ್ತು ಪ್ರಯಾಣಿಕರ ಟಿಕೆಟ್‌ಗಳಿಗೆ ಮರುಪಾವತಿಯನ್ನು ವ್ಯವಸ್ಥೆ ಮಾಡದಿದ್ದಕ್ಕಾಗಿ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ನೋಟಿಸ್ ನೀಡಿತ್ತು. ಡಿಜಿಸಿಎ ಮತ್ತು ಸರ್ಕಾರ ಎರಡೂ ಗೋಫಸ್ಟ್  ಪ್ರಕರಣದ ಮೇಲೆ ಕಣ್ಣಿಟ್ಟಿವೆ. ಗೋ ಫಸ್ಟ್ ಫ್ಲೈಟ್‌ಗಳನ್ನು ನಡೆಸಬೇಕಾದ ಎಲ್ಲಾ ಮಾರ್ಗಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂದು ಮೂಲಗಳು ಹೇಳುತ್ತವೆ.

ಇದಕ್ಕೂ ಮೊದಲು, ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ಏರ್‌ಲೈನ್ ಗೋಫರ್ಸ್ಟ್, ಹಲವಾರು ವಿಮಾನಗಳ ನೋಂದಣಿ ರದ್ದುಗೊಳಿಸುವಂತೆ ವಿಮಾನ ಗುತ್ತಿಗೆ ಕಂಪನಿಗೆ ಮನವಿ ಮಾಡಿದೆ. ಇದು ವಿಮಾನಯಾನ ಸಂಸ್ಥೆಯಲ್ಲಿ ಲಭ್ಯವಿರುವ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದುವರೆಗೆ 36 ವಿಮಾನಗಳ ನೋಂದಣಿಯನ್ನು ರದ್ದುಗೊಳಿಸುವಂತೆ ಕಂಪನಿಯಿಂದ ಮನವಿ ಮಾಡಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಇದನ್ನೂ ಓದಿ : Tata Punch Sales: ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಟಾಟಾ ಪಂಚ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News