ಎಸ್‌ಬಿ‌ಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬದಲಾಗಲಿದೆ ಈ ನಿಯಮ

SBI Credit Card Rules Change: ಭಾರತದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿ‌ಐ) ಇಂದಿನಿಂದ ಮಹತ್ವದ ನಿಯಮವೊಂದನ್ನು ಬದಲಾಯಿಸುತ್ತಿದೆ. ಇದು ಗ್ರಾಹಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಇಂದಿನಿಂದ ಯಾವ ನಿಯಮ ಬದಲಾಗುತ್ತಿದೆ. ಇದರಿಂದ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯಿರಿ.

Written by - Yashaswini V | Last Updated : Mar 17, 2023, 10:39 AM IST
  • ಗಮನಾರ್ಹವಾಗಿ ಇದಕ್ಕೂ ಮೊದಲು ಎಸ್‌ಬಿ‌ಐ ಜನವರಿ 2023 ರಿಂದ ಜಾರಿಗೆ ಬರುವಂತೆ ಕಾರ್ಡ್‌ದಾರರಿಗಾಗಿ ಕೆಲವು ನಿಯಮಾವಳಿಗಳನ್ನು ನವೀಕರಿಸಿತ್ತು.
  • ಇದರನ್ವಯ ಗಿಫ್ಟ್ ಕಾರ್ಡ್‌ಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗಿದ್ದವು.
ಎಸ್‌ಬಿ‌ಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬದಲಾಗಲಿದೆ ಈ ನಿಯಮ  title=

SBI Cards New Rules: ಪ್ರಸ್ತುತ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದ ಜೀವನ ಅಸಾಧ್ಯವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸಹ ತಮ್ಮ ವ್ಯಾಲೆಟ್‌ನಲ್ಲಿ ಕನಿಷ್ಠ ಒಂದೇ ಒಂದು ಕ್ರೆಡಿಟ್ ಕಾರ್ಡ್ ಆದರೂ ಹೊಂದಿರುತ್ತಾರೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಾಗಿದ್ದರೆ ನಿಮಗೆ ಒಂದು ಶಾಕಿಂಗ್ ನ್ಯೂಸ್ ಇದೆ. ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿ‌ಐ) ಇಂದಿನಿಂದ ಜಾರಿಗೆ ಬರುವಂತೆ ಎಸ್‌ಬಿಐ ಕಾರ್ಡ್‌ಗಳು ಮತ್ತು ಪಾವತಿ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ. 

ಇಂದಿನಿಂದ ದುಬಾರಿಯಾಗಲಿದೆ ಎಸ್‌ಬಿ‌ಐ ಕಾರ್ಡ್ ಶುಲ್ಕ :
ಹೊಸ ನಿಯಮದನ್ವಯ ಮಾರ್ಚ್ 17, 2023 ರಿಂದ, ಎಸ್‌ಬಿಐ ಕಾರ್ಡ್‌ಗಳು ಮತ್ತು ಪಾವತಿ ಸೇವೆಗಳ ಶುಲ್ಕಗಳು ಹೆಚ್ಚಾಗಲಿವೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರಿಗೆ ₹99 + ತೆರಿಗೆ ಬದಲಿಗೆ  ₹ 199 + ಅನ್ವಯವಾಗುವ ತೆರಿಗೆಗಳನ್ನು ವಿಧಿಸಲಾಗುತ್ತದೆ. 

ಇದನ್ನೂ ಓದಿ- ಹಿರಿಯ ನಾಗರಿಕರಿಗೊಂದು ಬಂಬಾಟ್ ಸುದ್ದಿ, ತಿಂಗಳಿಗೆ 70,500 ನೀಡುವುದಾಗಿ ಘೋಷಿಸಿದೆ ಮೋದಿ ಸರ್ಕಾರ!

ಗಮನಾರ್ಹವಾಗಿ ಇದಕ್ಕೂ ಮೊದಲು ಎಸ್‌ಬಿ‌ಐ ಜನವರಿ 2023 ರಿಂದ ಜಾರಿಗೆ ಬರುವಂತೆ ಕಾರ್ಡ್‌ದಾರರಿಗಾಗಿ ಕೆಲವು ನಿಯಮಾವಳಿಗಳನ್ನು ನವೀಕರಿಸಿತ್ತು. ಇದರನ್ವಯ ಗಿಫ್ಟ್ ಕಾರ್ಡ್‌ಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗಿದ್ದವು. ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ಪಾವತಿ ಸೇವೆಗಳ ಪ್ರಕಾರ , SimplyCLICK ಕಾರ್ಡ್‌ದಾರರಿಗೆ ನೀಡಲಾದ ಕ್ಲಿಯರ್‌ಟ್ರಿಪ್ ವೋಚರ್ ಅನ್ನು ಒಂದು ವಹಿವಾಟಿನೊಳಗೆ ರಿಡೀಮ್ ಮಾಡಿಕೊಳ್ಳಬೇಕು ಮತ್ತು ಅದನ್ನು ಯಾವುದೇ ಆಫರ್ ಅಥವಾ ವೋಚರ್‌ನೊಂದಿಗೆ ಸಂಯೋಜಿಸಲಾಗುವುದಿಲ್ಲ ಎಂದು ಹೇಳಲಾಗಿದೆ. 

ಇದಲ್ಲದೆ, ಸಿಂಪ್ಲಿಕ್ಲಿಕ್ ಅಡ್ವಾಂಟೇಜ್ ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಗಳಿಂದ ಸಂಗ್ರಹಿಸಲಾದ ರಿವಾರ್ಡ್ ಪಾಯಿಂಟ್‌ಗಳ ಸಂಖ್ಯೆಯನ್ನು 10X ನಿಂದ 5X ಗೆ ಇಳಿಸಲಾಗಿದೆ. ಆದಾಗ್ಯೂ, ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ BookMyShow, Cleartrip, Lenskart, Netmeds, Apollo 24X7 ಮತ್ತು ಎಸ್‌ಬಿ‌ಐ ಪಾವತಿ ಸೇವೆಗಳಲ್ಲಿ ಆನ್‌ಲೈನ್ ವೆಚ್ಚದಲ್ಲಿ ಮಾತ್ರ 10X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದನ್ನು ಮುಂದುವರೆಸಲಿವೆ. 

ಇದನ್ನೂ ಓದಿ- ಆಧಾರ್‌ಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ನಿರ್ಧಾರ, ಲಕ್ಷಾಂತರ ಜನರಿಗೆ ಲಾಭ

ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ಗಳಿಗೆ ಅಗತ್ಯವಿರುವ ದಾಖಲೆಗಳು: 
ನೀವು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿ‌ಐ ) ಗ್ರಾಹಕರಾಗಿದ್ದು ಇನ್ನೂ ಕೂಡ ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ಪಡೆದಿಲ್ಲ ಎಂದಾದರೆ, ಕೆಲವು ದಾಖಲೆಗಳನ್ನು ಒದಗಿಸುವ ಮೂಲಕ ಕ್ರೆಡಿಟ್ ಕಾರ್ಡ್‌ ಪಡೆಯಬಹುದು.  

ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿ. ಇದರೊಂದಿಗೆ ಗುರುತಿನ ಪುರಾವೆ, ವಸತಿ ಪುರಾವೆ, ಸ್ವಯಂ ಉದ್ಯೋಗಿಗಳಾಗಿದ್ದರೆ ಆದಾಯ ಪುರಾವೆ (ವ್ಯಾಪಾರ ಹಣಕಾಸು ಸ್ಟೇಟ್ಮೆಂಟ್, ಪ್ರಸ್ತುತ ತೆರಿಗೆ ರಿಟರ್ನ್ಸ್, ಲಾಭ ಮತ್ತು ನಷ್ಟ ಸ್ತತೆಮೆಂಟ್ಸ್ ಮತ್ತು ಬ್ಯಾಲೆನ್ಸ್ ಶೀಟ್) ಒದಗಿಸಬೇಕಾಗುತ್ತದೆ. ಒಂದೊಮ್ಮೆ ನೀವು ಉದ್ಯೋಗಿಗಳಾಗಿದ್ದಾರೆ, ನಿಮ್ಮ ಸ್ಯಾಲರಿ ಸ್ಲಿಪ್ ಅನ್ನು ಸಲ್ಲಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News