ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!

 Billinaire List: ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ. 

Written by - Ranjitha R K | Last Updated : May 7, 2024, 11:08 AM IST
  • ಒಂದು ವರ್ಷದಲ್ಲಿ 29.2 ಬಿಲಿಯನ್ ಡಾಲರ್ ಸಂಪತ್ತು
  • ಅತಿ ಹೆಚ್ಚು ಆದಾಯ ಗಳಿಸಿದವರಲ್ಲಿ ಜೆನ್ಸನ್ ಹುವಾಂಗ್ ಗೆ ಮೊದಲ ಸ್ಥಾನ
  • ಕಂಪನಿ ಆರಂಭಕ್ಕೂ ಮುನ್ನ ವೈಟರ್ ಕೆಲಸ ಮಾಡುತ್ತಿದ್ದರು
ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!  title=

Billinaire List : ವಿಶ್ವದ ಬಿಲಿಯನೇರ್‌ಗಳನ್ನು ಪಟ್ಟಿ ಮಾಡಿ ಹೇಳುವುದಾದರೆ ಎಲೋನ್ ಮಸ್ಕ್, ಜೆಫ್ ಬೋಸ್, ಬರ್ನಾರ್ಡ್ ಅರ್ನಾಲ್ಡ್ ಮತ್ತು ಮುಖೇಶ್ ಅಂಬಾನಿ ಅವರಂತಹವರ ಹೆಸರು ಅಲ್ಲಿರುತ್ತವೆ.ಇದೆಲ್ಲದರ ನಡುವೆ ಒಂದು ಹೆಸರು ಚರ್ಚೆಗೆ ಗ್ರಾಸವಾಗಿದೆ.ಒಂದು ಕಾಲದಲ್ಲಿ ಹೋಟೆಲ್ ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ. 

ಒಂದು ವರ್ಷದಲ್ಲಿ 29.2 ಬಿಲಿಯನ್ ಡಾಲರ್ ಸಂಪತ್ತು : 
ನಾವು ಇಲ್ಲಿ ಮಾತನಾಡುತ್ತಿರುವ ವೈಟರ್ ಬೇರೆ ಯಾರೂ ಅಲ್ಲ, AI ಚಿಪ್‌ಗಳನ್ನು ತಯಾರಿಸುವ ಅಮೇರಿಕನ್ ಕಂಪನಿಯಾದ Nvidia Corp ನ ಸಂಸ್ಥಾಪಕ ಮತ್ತು CEO ಜೆನ್ಸನ್ ಹುವಾಂಗ್.ಜೆನ್ಸನ್ ಈ ವರ್ಷ ಅಂದರೆ ಕಳೆದ ನಾಲ್ಕು ತಿಂಗಳಲ್ಲಿ 29.2 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. 2024ರಲ್ಲಿ ಇಲ್ಲಿಯವರೆಗೆ ಗಳಿಕೆಯ ವಿಷಯದಲ್ಲಿ ಎಲ್ಲರನ್ನು ಹಿಂದೆ ಹಾಕಿದ್ದಾರೆ.ಜೆನ್ಸನ್ ಹುವಾಂಗ್ 73.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿದ್ದಾರೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ತಮ್ಮ ಗಳಿಕೆಯಿಂದ ವಿಶ್ವದ ಅಗ್ರ ಬಿಲಿಯನೇರ್‌ಗಳನ್ನು ಹಿಂದೆ  ಹಾಕಿದ್ದಾರೆ. 

ಇದನ್ನೂ ಓದಿ : ಲೋನ್ ಡೀಫಾಲ್ಟರ್ ಆಗುವ ಭಯ ಇನ್ನಿಲ್ಲ : EMI ಪಾವತಿಸುವ ಮುನ್ನ RBIಯ ಈ ನಿಯಮವನ್ನು ತಿಳಿದುಕೊಳ್ಳಿ !

2024 ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದವರಲ್ಲಿ ಜೆನ್ಸನ್ ಹುವಾಂಗ್ ಮೊದಲ ಸ್ಥಾನದಲ್ಲಿದ್ದರೆ,ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಎರಡನೇ ಸ್ಥಾನದಲ್ಲಿದ್ದಾರೆ.ಕಳೆದ ನಾಲ್ಕು ತಿಂಗಳಲ್ಲಿ ಅವರು 28.3 ಬಿಲಿಯನ್ ಡಾಲರ್  ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್ ಇದ್ದಾರೆ.  ಅವರ ಗಳಿಕೆ 24.3 ಬಿಲಿಯನ್ ಡಾಲರ್. ಎನ್ವಿಡಿಯಾದ ಷೇರುಗಳಲ್ಲಿನ ನಿರಂತರ ಏರಿಕೆಯಿಂದಾಗಿ ಜೆನ್ಸನ್ ಅವರ ಗಳಿಕೆ ಕೂಡಾ ವೇಗವಾಗಿ ಹೆಚ್ಚಿದೆ. ಮೈಕ್ರೋಸಾಫ್ಟ್ ಮತ್ತು ಆಪಲ್ ನಂತರ ಅವರ ಕಂಪನಿ NVideo ವಿಶ್ವದ ಮೂರನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. AI ಮತ್ತು ಸೆಮಿಕಂಡಕ್ಟರ್ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರುತ್ತಿದೆ.ಎನ್ವಿಡಿಯಾದ ಮಾರುಕಟ್ಟೆ ಕ್ಯಾಪ್ ಎರಡು ಟ್ರಿಲಿಯನ್ ಡಾಲರ್ ತಲುಪಿದೆ.  

ವೈಟರ್ ಕೆಲಸ ಮಾಡುತ್ತಿದ್ದರು :  
ಎನ್ವಿಡಿಯಾವನ್ನು ಪ್ರಾರಂಭಿಸುವ ಮೊದಲು,ಜೆನ್ಸನ್ ಹುವಾಂಗ್  ವೈಟರ್ ಆಗಿ  ಕೆಲಸ ಮಾಡುತ್ತಿದ್ದರು.1963 ರಲ್ಲಿ ತೈವಾನ್‌ನಲ್ಲಿ ಜನಿಸಿದ ಜೆನ್ಸನ್ ತಮ್ಮ ಬಾಲ್ಯವನ್ನು ತೈವಾನ್ ಮತ್ತು ಥೈಲ್ಯಾಂಡ್‌ನಲ್ಲಿ ಕಳೆದರು.ನಂತರ ಉತ್ತಮ ಶಿಕ್ಷಣಕ್ಕಾಗಿ 1973ರಲ್ಲಿ ಅಮೆರಿಕಕ್ಕೆ ತೆರಳಿದರು.ತನ್ನ ಶಿಕ್ಷಣ ಮುಗಿಸಿದ ನಂತರ, ಅವರು ಕೆಲವು ತಿಂಗಳುಗಳ ಕಾಲ ಡೆನ್ನಿ ರೆಸ್ಟೋರೆಂಟ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದರು.ನಂತರ 1993ರಲ್ಲಿ ಅವರು ಎನ್ವಿಡಿಯಾವನ್ನು ಪ್ರಾರಂಭಿಸಿದರು. ಅವರು ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಸಹ ಕೆಲಸ ಮಾಡುತ್ತಾರೆ.ತನ್ನ ಉದ್ಯೋಗಿಗಳ ಜೊತೆ ಬೆರೆಯುವ ಸಲುವಾಗಿ ಒಟ್ಟಿಗೆ ಕುಳಿತು ಕೆಫೆಯಲ್ಲಿ ಊಟ ಮಾಡುತ್ತಾರೆ.ಒಂದು ಕಾಲದಲ್ಲಿ ಅವರ ಕಂಪನಿ ದಿವಾಳಿಯಾಗುವ ಹಂತಕ್ಕೂ ತಲುಪಿತ್ತು.ಆದರೆ  ಇಂದು ವಿಶ್ವದ ಅತ್ಯಮೂಲ್ಯ ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. 

ಇದನ್ನೂ ಓದಿ : Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News