Unsecured Lending: ಇನ್ಮುಂದೆ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಪಡೆಯುವುದು ಮತ್ತಷ್ಟು ಕಷ್ಟಕರವಾಗಲಿದೆ, ಕಾರಣ ಇಲ್ಲಿದೆ

RBI Rule Update: ಭಾರತೀಯ ರಿಸರ್ವ್ ಬ್ಯಾಂಕ್ ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಮೊದಲು ಗ್ರಾಹಕರ ಹಿನ್ನೆಲೆ ಪರಿಶೀಲನೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡಲು ಬ್ಯಾಂಕುಗಳಿಗೆ ಕೇಳಿಕೊಂಡಿದೆ ಎನ್ನಲಾಗಿದೆ.  

Written by - Nitin Tabib | Last Updated : Jun 19, 2023, 09:09 PM IST
  • 2022 ರಿಂದ ಕೋವಿಡ್ ನಂತರ, ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲದ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ.
  • ಅಂಕಿಅಂಶಗಳ ಪ್ರಕಾರ, 2022 ರಲ್ಲಿ, ವೈಯಕ್ತಿಕ ಸಾಲಗಳು 7.8 ಕೋಟಿಗಳಿಂದ 9.9 ಕೋಟಿಗಳಿಗೆ ಏರಿಕೆಯಾಗಿವೆ,
  • ಅಂದರೆ ಸುಮಾರು ಶೇ. 24 ರಷ್ಟು ಹೆಚ್ಚಳವಾಗಿದೆ, ಆದರೆ ಕ್ರೆಡಿಟ್ ಕಾರ್ಡ್‌ಗಳಿಂದ ಪಡೆದ ಸಾಲವು ಶೇ. 28 ರಷ್ಟು ಹೆಚ್ಚಾಗಿದೆ (1.3 ಲಕ್ಷ ಕೋಟಿಗಳಿಂದ 1.7 ಲಕ್ಷ ಕೋಟಿಗಳಿಗೆ)
Unsecured Lending: ಇನ್ಮುಂದೆ ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಪಡೆಯುವುದು ಮತ್ತಷ್ಟು ಕಷ್ಟಕರವಾಗಲಿದೆ, ಕಾರಣ ಇಲ್ಲಿದೆ title=

RBI Rule Update: ಮುಂಬರುವ ದಿನಗಳಲ್ಲಿ,  ನಿಮಗೆ ವೈಯಕ್ತಿಕ ಸಾಲ ಪಡೆಯುವುದು ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಮತ್ತಷ್ಟು ಕಷ್ಟಕರವಾಗಲಿದೆ. ಆರ್ಬಿಐ ಮೂಲಗಳು ನೀಡಿರುವ ವರದಿಯ ಪ್ರಕಾರ ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಮೊದಲು ಗ್ರಾಹಕರ ಹಿನ್ನೆಲೆ ಪರಿಶೀಲನೆಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತದ ಬ್ಯಾಂಕುಗಳನ್ನು ಕೋರಿದೆ.  

ವಾಸ್ತವದಲ್ಲಿ, ಬ್ಯಾಂಕ್‌ಗಳು ಅಸುರಕ್ಷಿತ ಸಾಲಗಳಲ್ಲಿ ಯಾವುದೇ ಮೇಲಾಧಾರವನ್ನು ಹೊಂದಿಲ್ಲ ಮತ್ತು ಅಂತಹ ಸಾಲಗಳು ಮುಳುಗಡೆಯಾಗುವ ಅಪಾಯದ ಕುರಿತು RBI ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದೆ. ಸಂಭವನೀಯ ಡೀಫಾಲ್ಟ್‌ನ ಅಪಾಯದ ನಡುವೆ ಆರ್‌ಬಿಐ ಬ್ಯಾಂಕ್‌ಗಳ ಅಸುರಕ್ಷಿತ ಪೋರ್ಟ್‌ಫೋಲಿಯೊವನ್ನು ಸಹ ನಿಗ್ರಹಿಸಬಹುದು.

ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲದ ಪ್ರವೃತ್ತಿ ಹೆಚ್ಚಾಗಿದೆ
2022 ರಿಂದ ಕೋವಿಡ್ ನಂತರ, ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲದ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, 2022 ರಲ್ಲಿ, ವೈಯಕ್ತಿಕ ಸಾಲಗಳು 7.8 ಕೋಟಿಗಳಿಂದ 9.9 ಕೋಟಿಗಳಿಗೆ ಏರಿಕೆಯಾಗಿವೆ, ಅಂದರೆ ಸುಮಾರು ಶೇ. 24 ರಷ್ಟು ಹೆಚ್ಚಳವಾಗಿದೆ, ಆದರೆ ಕ್ರೆಡಿಟ್ ಕಾರ್ಡ್‌ಗಳಿಂದ ಪಡೆದ ಸಾಲವು ಶೇ. 28 ರಷ್ಟು ಹೆಚ್ಚಾಗಿದೆ (1.3 ಲಕ್ಷ ಕೋಟಿಗಳಿಂದ 1.7 ಲಕ್ಷ ಕೋಟಿಗಳಿಗೆ)

ಈ ಅಸುರಕ್ಷಿತ ಸಾಲಗಳ ಹೆಚ್ಚಳದ ವೇಗ 2023 ರಲ್ಲಿಯೂ ನಿಲ್ಲುತ್ತಿಲ್ಲ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಫೆಬ್ರವರಿ 2022 ಕ್ಕೆ ಹೋಲಿಸಿದರೆ, ಈ ವರ್ಷ, ಫೆಬ್ರವರಿ 2023 ರ ವೇಳೆಗೆ, ವೈಯಕ್ತಿಕ ಸಾಲಗಳು 33 ಲಕ್ಷ ಕೋಟಿಯಿಂದ 40 ಲಕ್ಷ ಕೋಟಿಗೆ ಅಂದರೆ ಶೇ. 20.4 ಕ್ಕೆ ಏರಿಕೆಯಾಗಿವೆ, ಆದರೆ ಜನವರಿ 2023 ರ ಹೊತ್ತಿಗೆ 1.87 ಲಕ್ಷ ಕೋಟಿಯೊಂದಿಗೆ ಕ್ರೆಡಿಟ್ ಕಾರ್ಡ್ ಬಾಕಿ ದಾಖಲೆಯ ಶೇ. 29.6ರ ಮಟ್ಟದಲ್ಲಿತ್ತು ಎನ್ನಲಾಗಿದೆ.

ಗ್ರಾಹಕರ ಹಿನ್ನೆಲೆಯ ಕಟ್ಟುನಿಟ್ಟಿನ ಪರಿಶೀಲನೆ
ಇಂತಹ ಅಸುರಕ್ಷಿತ ಸಾಲದ ಬೆಳವಣಿಗೆಯು ಹಣದುಬ್ಬರ ಮತ್ತು ಹೆಚ್ಚಿದ ಬಡ್ಡಿದರಗಳ ನಡುವೆ ದೇಶದ ಸೆಂಟ್ರಲ್ ಬ್ಯಾಂಕ್‌ಗೆ ಕಳವಳಕಾರಿ ವಿಷಯವಾಗಿ ಪರಿಣಮಿಸಿವೆ. ಹೀಗಾಗಿ  ಅಂತಹ ಸಾಲಗಳಲ್ಲಿ ಸಂಭವನೀಯ ಡೀಫಾಲ್ಟ್ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಸುರಕ್ಷಿತ ಸಾಲಗಳ ಬಗ್ಗೆ ಕಟ್ಟುನಿಟ್ಟಾಗಿ ಇರುವಂತೆ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳನ್ನು ಕೋರಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಾಲ ಅಥವಾ ಕ್ರೆಡಿಟ್ ಕಾರ್ಡ್ ನೀಡುವ ಮೊದಲು, ಹಿನ್ನೆಲೆ ಪರಿಶೀಲನೆಯು ಹೆಚ್ಚು ಪರಿಣಾಮಕಾರಿಯಾಗಿಸಲು ಕೋರಲಾಗಿದೆ. ಇದರಿಂದಾಗಿ ಬ್ಯಾಂಕುಗಳು ತಂತ್ರಜ್ಞಾನವನ್ನು ಆಶ್ರಯಿಸುತ್ತಿವೆ.

ಇದನ್ನೂ ಓದಿ-Technology And GDP: 'ಮುಂದಿನ ಎರಡು ವರ್ಷಗಳಲ್ಲಿ ತಂತ್ರಜ್ಞಾನವನ್ನು ಭಾರತದ ಜಿಡಿಪಿಯ ಶೇ.25 ರಷ್ಟು ಮಾಡುವ ಗುರಿ'

ಡಿಸೆಂಬರ್ 30, 2022 ರಿಂದ ಏಪ್ರಿಲ್ 21, 2023 ರವರೆಗೆ ಬ್ಯಾಂಕ್‌ಗಳಲ್ಲಿನ ಕ್ರೆಡಿಟ್ ಕಾರ್ಡ್ ಸಾಲಗಳು 1.8 ಲಕ್ಷ ಕೋಟಿ ರೂಪಾಯಿಗಳಿಂದ 2 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಜನರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮನೆ ಬಾಡಿಗೆಯನ್ನು ಸಹ ಪಾವತಿಸಲು ಪ್ರಾರಂಭಿಸಿದ್ದಾರೆ, ಇದು ವಂಚನೆಗೆ ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕಾಗಿ, ಅನೇಕ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಬಾಡಿಗೆ ಪಾವತಿಯನ್ನು ನಿಲ್ಲಿಸಲು 1-1.5% ಶುಲ್ಕ ವಿಧಿಸಲು ಪ್ರಾರಂಭಿಸಿವೆ, ಇನ್ನೊಂದೆಡೆ ಕೆಲ ಬ್ಯಾಂಕುಗಳು ರಿವಾರ್ಡ್ ಪಾಯಿಂಟ್‌ಗಳನ್ನು ತೆಗೆದುಹಾಕಿವೆ. ಅಸುರಕ್ಷಿತ ಸಾಲಗಳ ಸಂಭಾವ್ಯ NPA ಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ-GST Council Meet: ನಕಲಿ ಬಿಲ್ ನೀಡುವವರ ಮೇಲೆ ನಿಯಂತ್ರಣ, ರೀಟರ್ನ್ ನಲ್ಲಿ ಹೆಚ್ಚುವರಿ ಪರಿಶೀಲನೆಯ ಸಾಧ್ಯತೆ

ಆರ್‌ಬಿಐ ಅಸುರಕ್ಷಿತ ಸಾಲಗಳಲ್ಲಿ ಅಪಾಯದ ವೇಟ್  ಹೆಚ್ಚಿಸಬಹುದು ಎಂದು ಮೂಲಗಳು ಬಹಿರಂಗಪಡಿಸಿವೆ. ಇದರರ್ಥ ಅಸುರಕ್ಷಿತ ಸಾಲಗಳು ಮುಳುಗಡೆಯಾಗುವ ಭಯದ ದೃಷ್ಟಿಯಿಂದ, ಬ್ಯಾಂಕುಗಳು ಹೆಚ್ಚಿನ ನಿಬಂಧನೆಗಳನ್ನು ಮಾಡಬೇಕಾಗಬಹುದು, ಇದು ಪ್ರಸ್ತುತ ವೈಯಕ್ತಿಕ ಸಾಲಗಳಿಗೆ 100% ಮತ್ತು ಕ್ರೆಡಿಟ್ ಕಾರ್ಡ್ ಸ್ವೀಕೃತಿಗಳಿಗೆ 125% ಆಗಿದೆ.

ಇದನ್ನೂ ನೋಡಿ-

 

Trending News