ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !

Mukesh Ambani birthday:ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದರೂ ಇಂದಿಗೂ ಅಂಬಾನಿ ಸಾರ್ವಜನಿಕವಾಗಿ ಮಾತನಾಡಲು ಹೆದರುತ್ತಾರೆಯಂತೆ.

Written by - Ranjitha R K | Last Updated : Apr 19, 2024, 08:59 AM IST
  • ಇಂದು ಮುಖೇಶ್ ಅಂಬಾನಿ ಜನ್ಮದಿನ
  • ಮುಖೇಶ್ ಅಂಬಾನಿ ಇಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
  • ರಿಲಯನ್ಸ್‌ನ ವ್ಯವಹಾರವು ಪ್ರಸ್ತುತ ಹಲವು ಕ್ಷೇತ್ರಗಳಲ್ಲಿ ಹರಡಿದೆ.
ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !  title=

Mukesh Ambani birthday : ಇಂದು ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ  ಮುಖೇಶ್ ಅಂಬಾನಿ ಜನ್ಮದಿನ. ಮುಖೇಶ್ ಅಂಬಾನಿ ಇಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಒಟ್ಟು ನಿವ್ವಳ ಆಸ್ತಿ 115.6 ಬಿಲಿಯನ್ ಡಾಲರ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಹೆಸರು 11ನೇ ಸ್ಥಾನದಲ್ಲಿದೆ.ತಂದೆ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ, ಮುಖೇಶ್ ಕಂಪನಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. 

ರಿಲಯನ್ಸ್‌ನ ವ್ಯವಹಾರವು ಪ್ರಸ್ತುತ ಹಲವು ಕ್ಷೇತ್ರಗಳಲ್ಲಿ ಹರಡಿದೆ.ಕಂಪನಿಯ ವ್ಯವಹಾರವು ಚಿಲ್ಲರೆ, ಹಣಕಾಸು, ಟೆಲಿಕಾಂ ಮತ್ತು ತೈಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡಿದೆ. 

ಇದನ್ನೂ ಓದಿ : ನಿಮ್ಮ ಬಳಿ ಇದೊಂದಿದ್ದರೆ ಸಾಕು, ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು !

ಮುಖೇಶ್ ಅಂಬಾನಿ ಯಾವ ಕೆಲಸಕ್ಕೆ ಹೆದರುತ್ತಾರೆ? :
ಮುಖೇಶ್ ಅಂಬಾನಿ ನಾಚಿಕೆ ಸ್ವಭಾವದ ವ್ಯಕ್ತಿ, ತುಂಬಾ ಸರಳ.ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದರೂ ಇಂದಿಗೂ ಅಂಬಾನಿ ಸಾರ್ವಜನಿಕವಾಗಿ ಮಾತನಾಡಲು ಹೆದರುತ್ತಾರೆಯಂತೆ. ಇದಲ್ಲದೇ ಅವರು ಇಲ್ಲಿಯವರೆಗೆ ಮದ್ಯವನ್ನು ಮುಟ್ಟಿಯೂ  ನೋಡಿಲ್ಲವಂತೆ. ಮುಖೇಶ್ ಅಂಬಾನಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಇದಲ್ಲದೆ,ಅವರು ಹೆಚ್ಚು ಸಂದರ್ಶನಗಳನ್ನು ನೀಡುವುದೂ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯವಾಗಿಲ್ಲ. 

ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು : 
ಇನ್ನು ಮುಖೇಶ್ ಅಂಬಾನಿಯವರ ಶಿಕ್ಷಣದ ಬಗ್ಗೆ ಹೇಳುವುದಾದರೆ, ಅವರು ಬಾಂಬೆ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.ನಂತರ, ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರಾದರೂ ಇಲ್ಲಿ ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು. ತಂದೆಯ ಬಿಸಿನೆಸ್ ಗೆ ಹೆಗಲು ಕೊಡುವ ಉದ್ದೇಶದಿಂದ ಮುಖೇಶ್ ತನ್ನ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. 

1981 ರಲ್ಲಿ ರಿಲಯನ್ಸ್ ಗ್ರೂಪ್‌ ಗೆ ಸೇರ್ಪಡೆ :
1981 ರಲ್ಲಿ, ಮುಖೇಶ್ ಅಂಬಾನಿ ತಮ್ಮ ತಂದೆಯೊಂದಿಗೆ ರಿಲಯನ್ಸ್ ಗ್ರೂಪ್ ಅನ್ನು ಪ್ರವೇಶಿಸಿದರು.ನಂತರ, 1985 ರಲ್ಲಿ, ಈ ಕಂಪನಿಯ ಹೆಸರನ್ನು ರಿಲಯನ್ಸ್ ಟೆಕ್ಸ್ಟೈಲ್ ಇಂಡಸ್ಟ್ರೀಸ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು.ಇದರೊಂದಿಗೆ ಅವರು ಟೆಲಿಕಾಂ ಕ್ಷೇತ್ರದಲ್ಲಿಯೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.  

ಇದನ್ನೂ ಓದಿ : Gold And Silver Price: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಚಿನ್ನ ಹಾಗೂ ಬೆಳ್ಳಿಯ ದರ: ಇಂದಿನ ಬೆಲೆಯೆಷ್ಟು ಗೊತ್ತೇ?

ಎಲ್ಲಾ ಸಾಲಗಳಿಂದ ಮುಕ್ತಿ : 
ಮುಖೇಶ್ ಅಂಬಾನಿ 2016 ರಲ್ಲಿ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸಿದರು. ರಿಲಯನ್ಸ್ ಅನ್ನು ಪ್ರಾರಂಭಿಸಿದ ನಂತರ, ಕಂಪನಿಯು ಸಂಪೂರ್ಣ ಸಾಲ ಮುಕ್ತವಾಯಿತು.ಕೇವಲ 58 ದಿನಗಳಲ್ಲಿ ಜಿಯೋ ಪ್ಲಾಟ್‌ಫಾರ್ಮ್ 52,124.20 ಕೋಟಿ ಗಳಿಸಿದೆ.ಮಾರ್ಚ್ 31, 2020 ರಂದು, ರಿಲಯನ್ಸ್ ಸುಮಾರು 1,61,035 ಕೋಟಿ ಸಾಲವನ್ನು ಹೊಂದಿತ್ತು. ಆದರೆ ಮುಖೇಶ್ ಅಂಬಾನಿ ಅವರು ತಮ್ಮ ಯೋಜನೆಯ ಮೂಲಕ ಈ ಸಾಲವನ್ನು 9 ತಿಂಗಳೊಳಗೆ  ತೀರಿಸಿಬಿಟ್ಟರು. 

ಒಂದು ವರ್ಷದ ಹಿಂದೆ ಎಜಿಎಂನಲ್ಲಿ ಮುಖೇಶ್ ಅಂಬಾನಿ ತಮ್ಮ ವ್ಯವಹಾರವನ್ನು ತಮ್ಮ ಮಕ್ಕಳಿಗೆ ಹಂಚಿದ್ದರು. ಇದರಲ್ಲಿ ಹಿರಿಯ ಮಗ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಜವಾಬ್ದಾರಿ ವಹಿಸಿಕೊಳ್ಳುವಂತೆ ಹೇಳಲಾಗಿದೆ. ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಅನಂತ್ ಅಂಬಾನಿ ಹೊಸ ಇಂಧನ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News