Indian Railways Rule: ಟ್ರೈನ್ ಟಿಕೆಟ್ ಬುಕ್ ಮಾಡುವ ಮುನ್ನ ಬರ್ತ್‌ಗೆ ಸಂಬಂಧಿಸಿದ ಈ ನಿಮಯ ತಿಳಿಯಿರಿ

Indian Railways Latest Rule: ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆಯು ಬರ್ತ್‌ಗೆ ಸಂಬಂಧಿಸಿದ ಹಲವು ನಿಯಮಗಳನ್ನು ರೂಪಿಸಿದೆ. ರೈಲು ಪ್ರಯಾಣ ಮಾಡುವ ಮೊದಲು ಈ ನಿಮಯಗಳ ಬಗ್ಗೆ ತಿಳಿಯುವುದು ಅವಶ್ಯಕ.

Written by - Yashaswini V | Last Updated : Jul 7, 2022, 08:36 AM IST
  • ಭಾರತೀಯ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ನಿಯಮಗಳು
  • ಮಧ್ಯದ ಬರ್ತ್‌ಗೆ ಸಂಬಂಧಿಸಿದ ರೈಲ್ವೆ ನಿಯಮವು ವಿಭಿನ್ನವಾಗಿದೆ.
  • ನೀವು ರೈಲಿನಲ್ಲಿ ಪ್ರಯಾಣಿಸುವ ಮೊದಲು, ಈ ನಿಯಮಗಳ ಬಗ್ಗೆ ತಿಳಿದಿರುವುದು ಅವಶ್ಯಕ
Indian Railways Rule: ಟ್ರೈನ್ ಟಿಕೆಟ್ ಬುಕ್ ಮಾಡುವ ಮುನ್ನ ಬರ್ತ್‌ಗೆ ಸಂಬಂಧಿಸಿದ ಈ ನಿಮಯ ತಿಳಿಯಿರಿ  title=
Indian railways reservation rules

ಭಾರತೀಯ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ನಿಯಮಗಳು:  ನೀವೂ ರೈಲಿನಲ್ಲಿ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ರೈಲು ಟಿಕೆಟ್ ಬುಕಿಂಗ್ ಸಮಯದಲ್ಲಿ, ನೀವು ಬರ್ತ್ ಆಯ್ಕೆಯ ಆಯ್ಕೆಯನ್ನು ಹೊಂದಿರುತ್ತೀರಿ. ಆದರೆ ಪ್ರತಿ ಬಾರಿಯೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೀಟು ಸಿಗುವುದಿಲ್ಲ. ವಾಸ್ತವವಾಗಿ, ಭಾರತೀಯ ರೈಲ್ವೆ ಕೂಡ ಸೀಮಿತ ಸೀಟುಗಳನ್ನು ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೇಯು ಬರ್ತ್‌ಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿದೆ. ನೀವು ರೈಲಿನಲ್ಲಿ ಪ್ರಯಾಣಿಸುವ ಮೊದಲು, ಈ ನಿಯಮಗಳ ಬಗ್ಗೆ ತಿಳಿದಿರುವುದು ಮತ್ತು ಪ್ರಯಾಣದ ಸಮಯದಲ್ಲಿ ಅವುಗಳನ್ನು ಅನುಸರಿಸುವುದು ಅತ್ಯಗತ್ಯ.

ರೈಲಿನ ಮಿಡಲ್ ಬರ್ತ್: 
ರೈಲಿನಲ್ಲಿ ಪ್ರಯಾಣಿಸುವಾಗ ಕೆಲವರಿಗೆ ಕೆಳಗಿನ ಬರ್ತ್ ಬೇಕು ಎಂದೆನಿಸಿದರೆ, ಇನ್ನೂ ಕೆಲವರಿಗೆ ಮೇಲಿನ ಬರ್ತ್ ಸಿಕ್ಕರೆ ಚೆನ್ನಾಗಿರುತ್ತೆ ಎಂದೆನಿಸುತ್ತದೆ. ಸಾಮಾನ್ಯವಾಗಿ, ಮಿಡಲ್ ಬರ್ತ್ ಸಿಕ್ಕರೆ ಬಹುತೇಕ ಜನರಿಗೆ ಇದು ಕಿರಿಕಿರಿ ಎಂದೆನಿಸುತ್ತದೆ. ವಾಸ್ತವವಾಗಿ, ಪ್ರಯಾಣದ ವೇಳೆ ಮಿಡಲ್ ಬರ್ತ್ ಸಿಕ್ಕರೆ ಹಲವು ಬಾರಿ ಎದುರಿಸಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೇಳಿನ ಬರ್ತ್ ಸಿಕ್ಕವರು ತಡರಾತ್ರಿವರೆಗೆ ಕುಳಿತುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಧ್ಯಮ ಬರ್ತ್ ಹೊಂದಿರುವ ಪ್ರಯಾಣಿಕರು ರೈಲ್ವೆಯ ನಿಯಮಗಳನ್ನು ತಿಳಿದಿರಬೇಕು. ಮಧ್ಯದ ಬರ್ತ್‌ಗೆ ಸಂಬಂಧಿಸಿದ ರೈಲ್ವೆ ನಿಯಮವು ವಿಭಿನ್ನವಾಗಿದೆ. ಈ ರೈಲ್ವೆ  ನಿಯಮಗಳು ಬಹಳ ಉಪಯುಕ್ತವಾಗಿವೆ, ನೀವು ಅವುಗಳ ಬಗ್ಗೆ ತಿಳಿದಿದ್ದರೆ ನಿಮ್ಮ ಪ್ರಯಾಣವು ಆರಾಮದಾಯಕವಾಗಿರುತ್ತದೆ. 

ಇದನ್ನೂ ಓದಿ- Cooking oil price: ಮುಂದಿನ ಒಂದು ವಾರದಲ್ಲಿ ಅಗ್ಗವಾಗಲಿದೆ ಅಡುಗೆಎಣ್ಣೆ

ರೈಲ್ವೆಯ ಮಿಡಲ್ ಬರ್ತ್ ನಿಯಮ: 
ರೈಲು ಪ್ರಯಾಣದ ವೇಳೆ ನಿಮಗೆ ಮಿಡಲ್ ಬರ್ತ್ ಸಿಕ್ಕರೆ ರೈಲ್ವೆ ನಿಯಮಗಳ ಪ್ರಕಾರ, ಮಧ್ಯದ ಬರ್ತ್ ಹೊಂದಿರುವ ಪ್ರಯಾಣಿಕರು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ತಮ್ಮ ಬರ್ತ್‌ನಲ್ಲಿ ಮಲಗಬಹುದು. ಅಂದರೆ, ರಾತ್ರಿ 10ಗಂಟೆ ಮೊದಲು ಪ್ರಯಾಣಿಕರು  ಮಧ್ಯದ ಬರ್ತ್ ತೆರೆಯುವುದನ್ನು  ನೀವು ತಡೆಯಬಹುದು. ಅದೇ ಸಮಯದಲ್ಲಿ  ಬೆಳಿಗ್ಗೆ 6 ಗಂಟೆಯ ನಂತರ, ಇತರ ಪ್ರಯಾಣಿಕರು ಕೆಳಗಿನ ಬರ್ತ್‌ನಲ್ಲಿ ಕುಳಿತುಕೊಳ್ಳಲು ಬರ್ತ್ ಅನ್ನು ಕೆಳಗಿಳಿಸಬೇಕಾಗುತ್ತದೆ. 

ಕೆಲವೊಮ್ಮೆ ಲೋವರ್ ಬರ್ತ್‌ನಲ್ಲಿ ಇರುವವರು ತಡರಾತ್ರಿಯವರೆಗೂ ಕುಳಿತಿರುತ್ತಾರೆ, ಬೆಳಿಗ್ಗೆ ಹೊತ್ತು ಸಹ ಬೇಗ ಏಳುವುದಿಲ್ಲ. ಇಂತಹ ಸಂದರ್ಭದಲ್ಲಿ ಮಿಡಲ್  ಬರ್ತ್‌ನಲ್ಲಿ ಪ್ರಯಾಣಿಸುವವರಿಗೆ ತೊಂದರೆ ಆಗುತ್ತದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಪ್ರಯಾಣಿಕರು ರೈಲ್ವೆ ನಿಯಮಗಳ ಪ್ರಕಾರ ಆಸನವನ್ನು ಪಡೆಯಬಹುದು. 

ಇದನ್ನೂ ಓದಿ- PM Kisan: ಪಿಎಂ ಕಿಸಾನ್ ನಿಧಿಯ 12ನೇ ಕಂತಿಗೆ ಸಂಬಂಧಿಸಿದಂತೆ ಬಿಗ್ ನ್ಯೂಸ್

ಭಾರತೀಯ ರೈಲ್ವೇ ಟಿಕೆಟ್ ತಪಾಸಣೆ ನಿಯಮಗಳು:
ನಿಮ್ಮ ಪ್ರಯಾಣದ ಸಮಯದಲ್ಲಿ, ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (TTE) ಟಿಕೆಟ್ ಪರಿಶೀಲಿಸಲು ಬರುತ್ತಾರೆ. ಆದರೆ ಅವರೂ ಸಹ ಯಾವಾಗ ಬೇಕಾದರೂ ಬಂದು ಹಾಗೆ ಟಿಕೆಟ್ ಚೆಕ್ ಮಾಡುವಂತಿಲ್ಲ. ಅಂದರೆ, ಕೆಲವೊಮ್ಮೆ ಟಿಟಿಇ ರಾತ್ರಿ ಪ್ರಯಾಣಿಕರು ಮಲಗಿದ ಮೇಲೆ ಬಂದು ಪ್ರಯಾಣಿಕರನ್ನು ಎಬ್ಬಿಸಿ ಟಿಕೆಟ್ ಮತ್ತು ಐಡಿಯನ್ನು ಪರಿಶೀಲಿಸುತ್ತಾರೆ. ಆದರೆ, ಭಾರತೀಯ ರೈಲ್ವೇ ಟಿಕೆಟ್ ತಪಾಸಣೆ ನಿಯಮಗಳ ಪ್ರಕಾರ ರಾತ್ರಿ 10ಗಂಟೆ ಬಳಿಕ ಟಿಟಿಇ ಬಂದು ನಿಮ್ಮ ಟಿಕೆಟ್ ಪರಿಶೀಲಿಸುವಂತಿಲ್ಲ. ಟಿಟಿಇ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಟಿಕೆಟ್‌ಗಳನ್ನು ಪರಿಶೀಲಿಸಬೇಕಾಗುತ್ತದೆ.  ಆದಾಗ್ಯೂ, ರಾತ್ರಿ 10ಗಂಟೆ ನಂತರ ಪ್ರಯಾಣ ಆರಂಭಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News