ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಈ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ!

ಇತ್ತೀಚಿನ ಈ ಆನ್‌ಲೈನ್ ಜಗತ್ತಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದನ್ನು ಕಾಣಬಹುದು. ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಹಣ ವಂಚನೆ ಕುರಿತು ಬ್ಯಾಂಕ್ ಎಚ್ಚರಿಕೆ ನೀಡಿದೆ. ನೀವು ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿದ್ದರೆ ಇಂತಹ ವಂಚನೆ ಬಗ್ಗೆ ಜಾಗರೂಕರಾಗಿರಬೇಕು.  

Written by - Yashaswini V | Last Updated : Jul 11, 2022, 08:41 AM IST
  • ನೀವು ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ, ಎಚ್ಚರ!
  • ನೀವು ವಾಟ್ಸಾಪ್‌ನಲ್ಲಿ ಈ ಸಂದೇಶವನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಖಾತೆ ಖಾಲಿ ಆಗಬಹುದು
  • ಈ ಕುರಿತಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಈ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ! title=
ICICI bank fraud

ಬ್ಯಾಂಕ್ ಅಲರ್ಟ್: ಇದು ಆನ್‌ಲೈನ್ ಯುಗ. ಮೊದಲೆಲ್ಲಾ ದಿನಗಟ್ಟಲೆ ಕಾಯಬೇಕಿದ್ದ ಬ್ಯಾಂಕಿಂಗ್ ಕೆಲಸಗಳನ್ನು ಈಗ ಬೆರಳ ತುದಿಯಲ್ಲಿ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ವಾಸ್ತವವಾಗಿ, ಆನ್‌ಲೈನ್ ಬ್ಯಾಂಕಿಂಗ್ ನಿಮ್ಮ ಎಲ್ಲಾ ಬ್ಯಾಂಕಿಂಗ್ ಮತ್ತು ಹಣಕಾಸಿನ ವಹಿವಾಟುಗಳನ್ನು ನಿಮ್ಮ ಬೆರಳ ತುದಿಯಲ್ಲಿ ಇರಿಸುತ್ತದೆ. ತಂತ್ರಜ್ಞಾನವು ಎಷ್ಟು ಪ್ರಯೋಜನಕಾರಿಯೋ, ಯಾಮಾರಿದರೆ ಅಷ್ಟೇ ಅಪಾಯಕಾರಿಯೂ ಹೌದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. 

ಭಾರತದಲ್ಲಿ ಬ್ಯಾಂಕಿಂಗ್ ಅತ್ಯಂತ ಬಳಕೆದಾರ ಸ್ನೇಹಿಯಾಗಿದೆ. ನೀವು ಹೊಸ ಖಾತೆಯನ್ನು ತೆರೆಯಬೇಕೆ, ಇಎಂಐಗಳನ್ನು ಪಾವತಿಸಬೇಕೇ ಅಥವಾ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸಬೇಕೇ ಅಥವಾ ನಿಮ್ಮ ಬಿಲ್‌ಗಳನ್ನು ಪಾವತಿಸಬೇಕೇ, ಎಲ್ಲವೂ ಸೆಕೆಂಡುಗಳಲ್ಲಿ ಸಾಧ್ಯ. ಆದರೆ ಫಿಶಿಂಗ್ ದಾಳಿಗಳು ಮತ್ತು ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಮೇಲ್‌ಗಳು, ಸ್ಪ್ಯಾಮ್ ಕರೆಗಳು ಹೀಗೆ ಹಲವು ವಂಚನಾ ಜಾಲಗಳ ಮೂಲಕ ಜನರನ್ನು ವಂಚಿಸಲು ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಐಸಿಐಸಿಐ ಬ್ಯಾಂಕ್ ತನ್ನ ಖಾತೆದಾರರಿಗೆ ಫೇಸ್ ಬುಕ್ ಮತ್ತು ವಾಟ್ಸಾಪ್ ಹಣ ವಂಚನೆ ಬಗ್ಗೆ ಎಚ್ಚರಿಕೆ ನೀಡಿದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರೇ, ಜಾಗರೂಕರಾಗಿರಿ!
ವಾಸ್ತವವಾಗಿ, ಇಂತಹ ವಂಚನೆ ಪ್ರಕರಣಗಳು ಹೆಚ್ಚಾದಂತೆ ತಮ್ಮ ಗ್ರಾಹಕರನ್ನು ರಕ್ಷಿಸಲು ಬ್ಯಾಂಕ್‌ಗಳು ಹಲವು ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ, ಅದರ ಅದರ ಹೊರತಾಗಿಯೂ ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್ ವಂಚನೆಗಳು ಹೆಚ್ಚಾಗುತ್ತಿವೆ. ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಭವನೀಯ ವಂಚನೆಗಳ ಕುರಿತು ಟ್ವೀಟ್‌ನಲ್ಲಿ ಎಚ್ಚರಿಸಿದೆ, 'ಫೋನ್ ಮೂಲಕ ನಿಮ್ಮ ಯುಪಿಐ ಪಿನ್ ಅನ್ನು ಹಂಚಿಕೊಳ್ಳಲು ನಿಮ್ಮನ್ನು ಮನವೊಲಿಸಲು ಪ್ರಯತ್ನಿಸುತ್ತಿರುವ ವಂಚಕರ ಬಗ್ಗೆ ಎಚ್ಚರದಿಂದಿರಿ. ಸುರಕ್ಷಿತವಾಗಿರಿ, #SafeBanking ಅಭ್ಯಾಸವನ್ನು ರೂಢಿಸಿಕೊಳ್ಳಿ" ಎಂದು ಬ್ಯಾಂಕ್ ಎಚ್ಚರಿಕೆ ಸಂದೇಶ ರವಾನಿಸಿದ್ದು, ಸದ್ಯ ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. 

ಇದನ್ನೂ ಓದಿ- Online Payment Cost Increased: ಪೇಟಿಎಂ & ಫೋನ್ ಪೇ ಬಳಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..!

ಬ್ಯಾಂಕ್ ಪ್ರಕಾರ, ಅನೇಕ ವಂಚಕರು ತಮ್ಮ ಸಂಪರ್ಕಗಳಿಗೆ ತ್ವರಿತವಾಗಿ ಸಂದೇಶಗಳನ್ನು ಕಳುಹಿಸಲು ಗ್ರಾಹಕರ ವಾಟ್ಸಾಪ್ ಅಥವಾ ಫೇಸ್ ಬುಕ್ ಖಾತೆಗಳನ್ನು ಬಳಸುತ್ತಿದ್ದಾರೆ. ವಿನಂತಿಯು ತಿಳಿದಿರುವ ಮೂಲದಿಂದ ಬಂದಿರುವುದರಿಂದ, ಅನೇಕ ಸಂಪರ್ಕಗಳು ಅಗತ್ಯ ಮೊತ್ತವನ್ನು ವರ್ಗಾಯಿಸುತ್ತಿವೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಗ್ರಾಹಕರನ್ನು ಎಚ್ಚರಿಸಿರುವ ಐಸಿಐಸಿಐ ಬ್ಯಾಂಕ್, 'ಅಂತಹ ಸಂದರ್ಭಗಳಲ್ಲಿ, ಜಾಗರೂಕರಾಗಿರಿ ಮತ್ತು ಯಾವಾಗಲೂ ಪರಿಶೀಲಿಸಿ. ನಿಮ್ಮ ವಾಟ್ಸಾಪ್ ಅಥವಾ ಫೇಸ್ ಬುಕ್ ಖಾತೆಯು ಯಾವುದೇ ರೀತಿಯಲ್ಲಿ ಹ್ಯಾಕ್ ಆಗಿದ್ದರೆ, ದಯವಿಟ್ಟು ಅಧಿಕಾರಿಗಳಿಗೆ ತಿಳಿಸಿ" ಎಂದು ತಿಳಿಸಿದೆ. ಮತ್ತೊಂದು ಬ್ಲಾಗ್‌ನಲ್ಲಿ ಐಸಿಐಸಿಐ ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ನೊಂದಿಗೆ ಸುರಕ್ಷಿತವಾಗಿರಲು ಕೆಲವು ಸಲಹೆಗಳನ್ನು ಸಹ ಹಂಚಿಕೊಂಡಿದೆ.

ಇದನ್ನೂ ಓದಿ- EPFO: ದೇಶದ 73 ಲಕ್ಷ ಪಿಂಚಣಿದಾರರಿಗೊಂದು ಸಂತಸದ ಸುದ್ದಿ ! ಶೀಘ್ರದಲ್ಲಿಯೇ ಸರ್ಕಾರ ಈ ವ್ಯವಸ್ಥೆ ಜಾರಿಗೆ ತರಲಿದೆ

ಮೊಬೈಲ್ ಬ್ಯಾಂಕಿಂಗ್‌ನೊಂದಿಗೆ ಸುರಕ್ಷಿತವಾಗಿರಲು ಸಲಹೆಗಳು:
- ನೀವು ಸಂದೇಶವನ್ನು ಸ್ವೀಕರಿಸಿದ್ದರೆ ಮತ್ತು ಅದು ಯುಆರ್ಎಲ್ ಅನ್ನು ಹೊಂದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ. 
- ನೀವು ನಿಮ್ಮ ಮೊಬೈಲ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾದರೆ, ಬ್ರೌಸಿಂಗ್ ಇತಿಹಾಸ, ಸಂಗ್ರಹ, ತಾತ್ಕಾಲಿಕ ಫೈಲ್‌ಗಳನ್ನು ತೆರವುಗೊಳಿಸಲು ಮತ್ತು ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲು ಮರೆಯದಿರಿ.
- ಆಪಲ್ ಆಪ್ ಸ್ಟೋರ್, ಗೂಗಲ್ ಪ್ಲೇ  ಸ್ಟೋರ್ ಮತ್ತು ಹೆಚ್ಚಿನವುಗಳಂತಹ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
- ಇ-ಮೇಲ್ ಅಥವಾ ಪಠ್ಯ ಸಂದೇಶದ ಮೂಲಕ ವೈಯಕ್ತಿಕ ಮಾಹಿತಿ ಅಥವಾ ಆನ್‌ಲೈನ್ ಬ್ಯಾಂಕಿಂಗ್ ರುಜುವಾತುಗಳನ್ನು ಎಂದಿಗೂ ಬಹಿರಂಗಪಡಿಸಬೇಡಿ. ಏಕೆಂದರೆ ಇವುಗಳನ್ನು ಗುರುತಿನ ಕಳ್ಳತನಕ್ಕೆ ಬಳಸಬಹುದು.  
- ನಿಮ್ಮ ವಹಿವಾಟನ್ನು ಪೂರ್ಣಗೊಳಿಸಿದ ತಕ್ಷಣ ಆನ್‌ಲೈನ್ ಮೊಬೈಲ್ ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್‌ನಿಂದ ಲಾಗ್ ಔಟ್ ಮಾಡಿ. ನೀವು ಆ ವಿಂಡೋವನ್ನು ಮುಚ್ಚಿರುವುದನ್ನು ಸಹ ಖಚಿತಪಡಿಸಿಕೊಳ್ಳಿ. ಯಾವಾಗಲೂ ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸಿ ಮತ್ತು ಅಪ್ಲಿಕೇಶನ್‌ನ ಉದ್ದೇಶಕ್ಕೆ ಸಂಬಂಧಿಸಿದ ಸಂದರ್ಭವನ್ನು ಹೊಂದಿರುವ ಅನುಮತಿಗಳನ್ನು ಮಾತ್ರ ನೀಡಿ.
- ಅಸುರಕ್ಷಿತ, ಅಪರಿಚಿತ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವುದನ್ನು ತಪ್ಪಿಸಿ. ನೀವು ಯಾವುದೇ ರೀತಿಯ ಬ್ಯಾಂಕಿಂಗ್ ವಂಚನೆಯನ್ನು ಎದುರಿಸಿದರೆ, ತಕ್ಷಣವೇ ಅದನ್ನು ಬ್ಯಾಂಕ್‌ಗೆ ವರದಿ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News