ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ತಗಲುವ ವೆಚ್ಚ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

ಸ್ಕೂಟಿ ಅಥವಾ ಕಡಿಮೆ ಸಿಸಿ ವಾಹನವಾಗಿದ್ದರೆ ಪಾರ್ಸೆಲ್ ಮೂಲಕವೇ ಅದನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸಾಗಿಸಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಪಾರ್ಸೆಲ್ ಕಂಪನಿಯ ಮೊರೆ ಹೋದರೆ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ.

Written by - Ranjitha R K | Last Updated : Dec 18, 2023, 09:33 AM IST
  • ರೈಲಿನಲ್ಲಿ ಕ್ಯಾರೇಜ್ ಕಳುಹಿಸಲು ಈ ದಾಖಲೆಗಳು ಅಗತ್ಯ
  • ಪಾರ್ಸೆಲ್ ಬೆಲೆ 500 ರೂ.
  • ಸರಿಯಾದ ಪರಿಶೀಲನೆಯ ನಂತರವೇ ಕಳುಹಿಸಬೇಕಾಗುತ್ತದೆ
ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ತಗಲುವ ವೆಚ್ಚ ಎಷ್ಟು? ಇಲ್ಲಿದೆ  ಸಂಪೂರ್ಣ ವಿವರ! title=

ಬೆಂಗಳೂರು : ಕೆಲಸ ಮತ್ತು ಇತರ ಅಗತ್ಯಗಳಿಗಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ದ್ವಿಚಕ್ರ ವಾಹನವನ್ನು ಒಯ್ಯುವ ಅವಶ್ಯಕತೆ ಹಲವು ಬಾರಿ ಎದುರಾಗುತ್ತದೆ. ಹೆಚ್ಚಿನ ಸಾಮರ್ಥ್ಯದ ವಾಹನವಾಗಿದ್ದರೆ  ಆ ವಾಹನವನ್ನು ಓಡಿಸಿಕೊಂಡೆ ಬೇರೆ ಊರಿಗೆ ಸಾಗಿಸಬಹುದು. ಆದರೆ ಸ್ಕೂಟಿ ಅಥವಾ ಕಡಿಮೆ ಸಿಸಿ ವಾಹನವಾಗಿದ್ದರೆ ಪಾರ್ಸೆಲ್ ಮೂಲಕವೇ ಅದನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸಾಗಿಸಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಪಾರ್ಸೆಲ್ ಕಂಪನಿಯ ಮೊರೆ ಹೋದರೆ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ, ಭಾರತೀಯ ರೈಲ್ವೆ ವಾಹನ ಪಾರ್ಸೆಲ್ ಅನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರೈಸುತ್ತದೆ.  

ಬ್ಯಾಗೇಜ್ ಮೋಡ್ ಎಂದರೆ ಪ್ಯಾಸೆಂಜರ್ ರೈಲಿನಲ್ಲಿ ಸಾಗಿಸುವ ಕ್ಯಾರೇಜ್ ಮತ್ತು ಪಾರ್ಸೆಲ್. ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ರೈಲು ಕ್ಯಾಬ್ ಅನ್ನು ಬುಕ್ ಮಾಡಬಹುದು. ರೈಲಿನಲ್ಲಿ ವಾಹನ ಸಾಗಿಸಬೇಕಾದರೆ ಎಷ್ಟು ಖರ್ಚು ಮಾಡಬೇಕಾಗುತ್ತದೆ? ಯಾವ ದಾಖಲೆಗಳು ಅಗತ್ಯವಿದೆ ಎನ್ನುವ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : Bank Fraud: ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಇಂತಹ ಪಠ್ಯ ಸಂದೇಶಗಳ ಬಗ್ಗೆ ಇರಲಿ ಎಚ್ಚರ

ರೈಲಿನಲ್ಲಿ ಬೈಕು ಪಾರ್ಸೆಲ್ ಮಾಡಲು ಮೊದಲು ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಿ ಪಾರ್ಸೆಲ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಲ್ಲಾ ದಾಖಲೆಗಳ ಮೂಲ ಮತ್ತು ಫೋಟೊಕಾಪಿಗಳನ್ನು ಒದಗಿಸಬೇಕು. ಅಧಿಕಾರಿಗಳು ಪರಿಶೀಲಿಸುವ ಸಮಯದಲ್ಲಿ ದಾಖಲೆಯ ಮೂಲ ಮತ್ತು ಫೋಟೊಕಾಪಿ ಎರಡೂ ನಿಮ್ಮ ಬಳಿ ಇರಬೇಕು. ರೈಲ್ವೆ ಸಿಬ್ಬಂದಿ ಪಾರ್ಸೆಲ್ ಮಾಡುವ ಮೊದಲು ಬೈಕ್ ಅಥವಾ ಸ್ಕೂಟಿಯ ಪೆಟ್ರೋಲ್ ಟ್ಯಾಂಕ್ ಅನ್ನು ಪರಿಶೀಲಿಸುತ್ತಾರೆ. ಪೆಟ್ರೋಲ್ ಟ್ಯಾಂಕ್ ಖಾಲಿ ಮಾಡಿದ ನಂತರವೇ ಪಾರ್ಸೆಲ್ ಪ್ಯಾಕಿಂಗ್ ಮಾಡಲಾಗುತ್ತದೆ.

ನೀವು ಬೈಕು ಕಳುಹಿಸಬೇಕಾದ ದಿನಕ್ಕೆ ಒಂದು ದಿನ ಮುಂಚಿತವಾಗಿ ಈ ಪಾರ್ಸೆಲ್ ಅನ್ನು ಬುಕ್ ಮಾಡಬೇಕಾಗುತ್ತದೆ. ಪಾರ್ಸೆಲ್ ಗೆ ಮುಖ್ಯವಾಗಿ ಬೈಕ್ ನೋಂದಣಿ ಪ್ರಮಾಣಪತ್ರ ಮತ್ತು ವಿಮೆಯಂತಹ ದಾಖಲೆಗಳನ್ನು ಒಳಗೊಂಡಿರಬೇಕು. ನಿಮ್ಮ ಗುರುತಿನ ಚೀಟಿ, ಆಧಾರ್, ಡ್ರೈವಿಂಗ್ ಲೈಸೆನ್ಸ್ ಕಾಪಿಯನ್ನು ಕೂಡಾ ಪಾರ್ಸೆಲ್‌ಗೆ ಲಗತ್ತಿಸಲಾಗುವುದು. ಹೆಡ್‌ಲೈಟ್‌ಗಳು ಮತ್ತು ಸೀಟ್ ಚೆನ್ನಾಗಿ ಪ್ಯಾಕ್ ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಿ. ಪಾರ್ಸೆಲ್ ಸಂದರ್ಭದಲ್ಲಿ ಟ್ಯಾಂಕ್‌ನಲ್ಲಿ ಪೆಟ್ರೋಲ್ ಇದ್ದರೆ 1000 ರೂಪಾಯಿ ದಂಡ ವಿಧಿಸಬಹುದು.

ಇದನ್ನೂ ಓದಿ : ನಿಮ್ಮ ಖಾತೆಯಲ್ಲಿ 35 ಸಾವಿರ ರೂ.ಗಳಿವೆಯಾ? ಈ ದೇಶಕ್ಕೆ ಹೋಗಿ ಕೋಟ್ಯಾಧೀಶರಾಗುವಿರಿ!

ತಗಲುವ ವೆಚ್ಚ ಎಷ್ಟು? :
ರೈಲ್ವೆ ಮೂಲಕ ಬೈಕು ಕಳುಹಿಸಲು ಶುಲ್ಕವನ್ನು ಅದರ ತೂಕ ಮತ್ತು ದೂರಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. 500 ಕಿ.ಮೀ ದೂರಕ್ಕೆ ಬೈಕ್ ಕಳುಹಿಸಲು ಸರಾಸರಿ 1200 ರೂ. ತಗಲುತ್ತದೆ. ಬೈಕಿನ ತೂಕ ಮತ್ತು ಸಾಗಿಸುವ ದೂರವನ್ನು ಅವಲಂಬಿಸಿ ಈ ದರದಲ್ಲಿ ಕೆಲವೊಮ್ಮೆ ವ್ಯತ್ಯಾಸವೂ ಆಗಬಹುದು. ಇದಲ್ಲದೇ ಬೈಕ್ ಪ್ಯಾಕಿಂಗ್ ಗೆ 300ರಿಂದ 500 ರೂ. ವೆಚ್ಚ ನೀಡಬೇಕಾಗುತ್ತದೆ. ಬೈಕ್ ನಿಮ್ಮ ಹೆಸರಿನಲ್ಲಿದ್ದರೆ ಮಾತ್ರ ಅದನ್ನು ಪಾರ್ಸೆಲ್‌ ಮೂಲಕ ಕಳುಹಿಸಬಹುದು. ಫೋಟೋ ಐಡಿ ಬಳಸಿ ಬೇರೊಬ್ಬರ ಹೆಸರಿನಲ್ಲಿ ಬೈಕು ಬುಕ್ ಮಾಡಬಹುದು. ಬೈಕ್ ಅಥವಾ ಸ್ಕೂಟರ್‌ನ ಆರ್‌ಸಿ ಮತ್ತು ವಿಮೆಯನ್ನು ಹೊಂದಿರಬೇಕು. ಪಾರ್ಸೆಲ್ ಬುಕಿಂಗ್ 10 AM ನಿಂದ 5 PM ವರೆಗೆ ನಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News