ಜನವರಿ 1 ರಿಂದ ದುಬಾರಿಯಾಗಲಿವೆ ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್‌ನಂತಹ ಗೃಹೋಪಯೋಗಿ ವಸ್ತುಗಳು..!

ರೆಫ್ರಿಜರೇಟರ್‌ಗಳು, ಟಿವಿಗಳು , ವಾಶಿಂಗ್ ಮೆಷಿನ್ ಇತ್ಯಾದಿ ಕಂಪನಿಗಳು ಈ ವರ್ಷ ಮೂರನೇ ಬಾರಿಗೆ ತಮ್ಮ ಬೆಲೆಗಳನ್ನು ಹೆಚ್ಚಿಸಿವೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

Written by - Ranjitha R K | Last Updated : Dec 31, 2021, 10:13 AM IST
  • ಗೃಹೋಪಯೋಗಿ ವಸ್ತುಗಳ ಬೆಲೆ ಶೇ.6ರಿಂದ 8ರಷ್ಟು ಹೆಚ್ಚಾಗಬಹುದು
  • 2021 ರಲ್ಲಿ ಬೆಲೆಗಳು ಏರಿಕೆಯಾಗಿತ್ತು ಬೆಲೆ
  • ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಹೆಚ್ಚುತ್ತಿದೆ ದರ
ಜನವರಿ 1 ರಿಂದ ದುಬಾರಿಯಾಗಲಿವೆ ಟಿವಿ, ಫ್ರಿಜ್ ಮತ್ತು ವಾಷಿಂಗ್ ಮೆಷಿನ್‌ನಂತಹ ಗೃಹೋಪಯೋಗಿ ವಸ್ತುಗಳು..!  title=
ಗೃಹೋಪಯೋಗಿ ವಸ್ತುಗಳ ಬೆಲೆ ಶೇ.6ರಿಂದ 8ರಷ್ಟು ಹೆಚ್ಚಾಗಬಹುದು (file photo)

ನವದೆಹಲಿ : 2022ರ ಹೊಸ ವರ್ಷದಲ್ಲಿ ಟಿವಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಜನವರಿ 1ರಿಂದ ಈ ಗೃಹೋಪಯೋಗಿ ವಸ್ತುಗಳು ದುಬಾರಿಯಾಗಲಿವೆ. ಕನ್ಸ್ಯುಮರ್ ಎಲೆಕ್ಟ್ರಾನಿಕ್ಸ್ ಅಂಡ್ ಅಪ್ಪ್ಲೈಯನ್ಸಸ್ ಮ್ಯಾನ್ಯುಫಾಕ್ಚರ್ ಅಸೋಸಿಯೇಶನ್  (CEAMA) ಅಧ್ಯಕ್ಷ ಎರಿಕ್ ಬ್ರೆಗಾಂಜಾ ಪ್ರಕಾರ, ಕಂಪನಿಗಳು 2021ರಲ್ಲಿ 12 ರಿಂದ 13 ಪ್ರತಿಶತದಷ್ಟು ಬೆಲೆಗಳನ್ನು ಹೆಚ್ಚಿಸಿವೆ. ಹೊಸ ವರ್ಷದಿಂದ ಎಲ್ ಇಡಿ ಟಿವಿ(LED Tv), ಫ್ರಿಡ್ಜ್ , ವಾಷಿಂಗ್ ಮಷಿನ್ (Washing Machine) ಮತ್ತಿತರ ಕೆಲವು ಗೃಹೋಪಯೋಗಿ ವಸ್ತುಗಳ ಬೆಲೆ ಶೇ.6ರಿಂದ 8ರಷ್ಟು ಹೆಚ್ಚಾಗಬಹುದು.

2022 ರಲ್ಲಿ ದರಗಳು ಹೆಚ್ಚಾಗುತ್ತವೆ :
 ರೆಫ್ರಿಜರೇಟರ್‌ಗಳು, ಟಿವಿಗಳು (TV), ವಾಶಿಂಗ್ ಮೆಷಿನ್ ಇತ್ಯಾದಿ ಕಂಪನಿಗಳು ಈ ವರ್ಷ ಮೂರನೇ ಬಾರಿಗೆ ತಮ್ಮ ಬೆಲೆಗಳನ್ನು ಹೆಚ್ಚಿಸಿವೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದೇ (Price Hike) ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 2022 ರ ಜನವರಿಯಲ್ಲಿ ಮತ್ತೊಮ್ಮೆ ಬೆಲೆಯನ್ನು ಹೆಚ್ಚಿಸುವ ಉತ್ಸಾಹದಲ್ಲಿ ಕಂಪನಿಗಳು ಇವೆ. 

ಇದನ್ನೂ ಓದಿ : PM Kisan Alert: 2 ಕೋಟಿ ರೈತರು ವಂಚಿತರಾಗಲಿದ್ದಾರೆ 10ನೇ ಕಂತಿನ ಹಣದಿಂದ , ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ತಕ್ಷಣ ಚೆಕ್ ಮಾಡಿಕೊಳ್ಳಿ

6 ರಿಂದ 8 ಪ್ರತಿಶತದಷ್ಟು ಬೆಲೆ ಏರಿಕೆ : 
CEAMA ಅಧ್ಯಕ್ಷ ಎರಿಕ್ ಬ್ರೆಗಾಂಜಾ ಪ್ರಕಾರ, ಕಂಪನಿಗಳು (Company) 2021 ರಲ್ಲಿ 12 ರಿಂದ 13 ಪ್ರತಿಶತದಷ್ಟು ಬೆಲೆಗಳನ್ನು ಹೆಚ್ಚಿಸಿವೆ. ಆದರೆ, ಈ ಅವಧಿಯಲ್ಲಿ ಅವುಗಳ ವೆಚ್ಚಗಳು 20 ಪ್ರತಿಶತದಷ್ಟು ಹೆಚ್ಚಾಗಿತ್ತು. ಆದ್ದರಿಂದ, ಈಗ ಕಂಪನಿಗಳು ಬೆಲೆಯನ್ನು ಶೇಕಡಾ 6 ರಿಂದ 8 ರಷ್ಟು ಹೆಚ್ಚಿಸಬಹುದು.

ಬೆಲೆ ಏರಿಕೆಗೆ ಕಾರಣ ಏನು ? 
ತಾಮ್ರ, ಉಕ್ಕು ಮತ್ತು ಅಲ್ಯೂಮಿನಿಯಂನಂತಹ ಪ್ರಮುಖ ಲೋಹಗಳ ಜೊತೆಗೆ ಕಚ್ಚಾ ತೈಲದ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. 2021 ರ ಆರಂಭ ಮತ್ತು ನವೆಂಬರ್ ನಡುವೆ, ಇವುಗಳ ಬೆಲೆ 25 ರಿಂದ 140 ಪ್ರತಿಶತದಷ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳ ಉತ್ಪಾದನಾ ವೆಚ್ಚ ಸಾಕಷ್ಟು ಹೆಚ್ಚಾಗಿದ್ದು, ಇದೀಗ ಗ್ರಾಹಕರ (Customer) ಜೇಬಿಗೆ ಹೊರೆಯಾಗುತ್ತಿದೆ.

ಇದನ್ನೂ ಓದಿ : Indian Railway : ರೈಲ್ವೆ ಪ್ರಯಾಣಿಕರ ಗಮನಕ್ಕೆ : ಈ ಮಹತ್ವದ ನಿಯಮ ಬದಲಿಸಲಿದೆ ರೈಲ್ವೆ ಇಲಾಖೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News