ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು !

Cash Limit at Home:ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು  ಕೆಲವು ನಿಯಮಗಳಿವೆ.  

Written by - Ranjitha R K | Last Updated : Apr 23, 2024, 12:04 PM IST
  • ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆನ್‌ಲೈನ್‌ ಮೂಲಕವೇ ಪಾವತಿಸುತ್ತಾರೆ.
  • ನಗದು ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ.
  • ಕೆಲವರು ಮಾತ್ರ ಇಂದಿಗೂ ನಗದು ವ್ಯವಹಾರವನ್ನೇ ನಡೆಸುತ್ತಿದ್ದಾರೆ
ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು !  title=

Cash Limit at Home : ಕೆಲವು ವರ್ಷಗಳ ಹಿಂದಿನವರೆಗೆ ನಾವು ಎಲ್ಲಾ ವ್ಯವಹಾರಗಳನ್ನು ನಗದಿನ ಮೂಲಕವೇ ನಡೆಸುತ್ತಿದ್ದೆವು.ಆದರೆ ಇಂದು ಡಿಜಿಟಲ್ ಯುಗ. ನಗದು ರಹಿತ ಡಿಜಿಟಲ್ ವಹಿವಾಟನ್ನು ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ನಗದು ವಹಿವಾಟಿಗಿಂತ ಡಿಜಿಟಲ್ ವ್ಯವಹಾರವೇ ಉತ್ತಮ ಎನ್ನುವಂತಾಗಿದ್ದು. 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆನ್‌ಲೈನ್‌ ಮೂಲಕವೇ ಪಾವತಿಸುತ್ತಾರೆ. ಈ ಮೂಲಕ ಯಾವ ಕೆಲಸಕ್ಕೆ ಹೋಗಬೇಕಾದರೂ ನಗದು  ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ.  ಆದರೂ ಕೆಲವರು ಮಾತ್ರ ಇಂದಿಗೂ ನಗದು ವ್ಯವಹಾರವನ್ನೇ ನಡೆಸುತ್ತಿದ್ದಾರೆ.ಇಂಟರ್ನೆಟ್ ಅಪ್ಲಿಕೇಶನ್‌ಗಳ ಬಗ್ಗೆ ಅಷ್ಟೊಂದು ಪರಿಚಯವಿಲ್ಲದ ಜನರು ನಗದು ವರ್ಗಾವಣೆಯನ್ನೇ ಮುಂದುವರೆಸಿದ್ದಾರೆ. 

ಇದನ್ನೂ ಓದಿ :Fuel Credit Card: ಏನಿದು ಇಂಧನ ಕ್ರೆಡಿಟ್ ಕಾರ್ಡ್, ಇದನ್ನು ಬಳಸುವುದು ಹೇಗೆ?

ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು  ಕೆಲವು ನಿಯಮಗಳಿವೆ. ತೆರಿಗೆ ವಂಚನೆ ಮತ್ತು ಕಪ್ಪುಹಣದಂತಹ ಅನೇಕ ಹಣ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಇದಕ್ಕೆ ಸಂಬಂಧಿಸಿದ ಹಲವಾರು ನಿಯಮಗಳನ್ನು ರೂಪಿಸಿದೆ. 

ಮನೆಯಲ್ಲಿ ಹಣವನ್ನು ಇಡುವ ನಿಯಮಗಳೇನು? :
ಆದಾಯ ತೆರಿಗೆ ನಿಯಮಗಳ ಪ್ರಕಾರ, ಮನೆಯಲ್ಲಿ ಹಣವನ್ನು ಇಡುವುದಕ್ಕೆ  ಯಾವುದೇ ಮಿತಿಯಿಲ್ಲ.ಒಬ್ಬ ವ್ಯಕ್ತಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ, ಅವನು ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು.ಆದರೆ ಅವರ ಬಳಿ ಇರುವ ಮೊತ್ತಕ್ಕೆ ದಾಖಲೆ ಇರಬೇಕು. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಕೇಳಿದರೆ ನಿಮ್ಮ ಬಳಿ ಇರುವ ಮೊತ್ತದ ದಾಖಲೆ ತೋರಿಸಬೇಕು.ಇದಲ್ಲದೆ, ಐಟಿಆರ್ ಡಿಕ್ಲರೇಶನ್ ಅನ್ನು ಸಹ ತೋರಿಸಬೇಕು. ನಿಮ್ಮ ಬಳಿ ಇರುವ ಹಣದ ದಾಖಲೆ ನಿಮ್ಮಲ್ಲಿ ಇದ್ದರೆ  ಮನೆಯಲ್ಲಿ ಎಷ್ಟೇ ಹಣವಿದ್ದರೂ ಆತಂಕ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ :ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!

ಯಾವ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು? : 
ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಹೆಚ್ಚುವರಿ ಹಣವನ್ನು ಇಟ್ಟುಕೊಂಡಿದ್ದು, ಆದಾಯ ತೆರಿಗೆ ಅಧಿಕಾರಿಗಳು ಅದನ್ನು ಪ್ರಶ್ನಿಸಿದಾಗ ಮನೆಯಲ್ಲಿರುವ ಹಣದ ಮೂಲವನ್ನು ಬಹಿರಂಗಪಡಿಸಬೇಕು.ವ್ಯಕ್ತಿಯು ತನ್ನ ಬಳಿ ಇರುವ ಹಣದ  ಮೂಲದ ಬಗ್ಗೆ ಹೇಳಲು ಸಾಧ್ಯವಾಗದಿದ್ದರೆ, ಅಪಾಯಕ್ಕೆ ಸಿಲುಕಬೇಕಾಗುತ್ತದೆ. 

ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸದ ಹಣವನ್ನು ನಿಮ್ಮ ಮನೆಯಲ್ಲಿ  ಇಟ್ಟುಕೊಂಡಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಹೀಗೆ ಕಡಿತಗೊಳಿಸಿದ ಮೊತ್ತದ ಮೇಲೆ 137% ವರೆಗಿನ ತೆರಿಗೆಯನ್ನು ನಿಮಗೆ ವಿಧಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News