ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ನಾಲ್ಕನೇ ಬಾರಿಕೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಮಿತಿಯನ್ನು ವಿಸ್ತರಿಸಿದೆ. ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಸಂಪರ್ಕಿಸಲು ಜೂನ್ 30ರವರೆಗೆ CBDT ಗಡುವು ನೀಡಿದ್ದು, ಆ ಗಡುವು ಇಂದಿಗೆ ಕೊನೆಗೊಳ್ಳಲಿದೆ.
ಪಾನ್ ಕಾರ್ಡ್ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಥವಾ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯಲು ಮಾತ್ರವಲ್ಲದೆ, ಪ್ರತಿ ಹಣಕಾಸು ವ್ಯವಹಾರಕ್ಕಾಗಿ ಪ್ಯಾನ್ ಕಾರ್ಡ್ ಅಗತ್ಯವಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಇದಕ್ಕಾಗಿ ಅಧಿಸೂಚನೆ ಹೊರಡಿಸಿದೆ. ಸಿಬಿಡಿಟಿ ಬೋರ್ಡ್ ಅಧಿಸೂಚನೆ ಮೇರೆಗೆ ಆದಾಯ ತೆರಿಗೆ ಕಾಯಿದೆಯ ವಿಭಾಗ 139 ಎ ಮತ್ತು 295 ರನ್ನು ತಿದ್ದುಪಡಿ ಮಾಡಲಾಗಿದೆ.
ನಿಮ್ಮ ಪಾನ್ ನಿಮ್ಮ ತೆರಿಗೆ ವಿವರವನ್ನು ತೋರಿಸುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಿರೇ/ಇಲ್ಲವೇ ಎಂಬುದರ ವಿವರವನ್ನು ನಿಮ್ಮ ಪಾನ್ ಸಂಖ್ಯೆಯಿಂದ ಕೇಂದ್ರ ಸರ್ಕಾರವು ಪರಿಶೀಲಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.