Virat Kohli: ವಿಶೇಷ ದಾಖಲೆ ಸನಿಹದಲ್ಲಿ ‘ಕಿಂಗ್’: 6 ರನ್ ಗಳಿಸಿದರೆ ಸಾಕು ಟಿ20 ಕ್ರಿಕೆಟ್’ನಲ್ಲಿ ಇತಿಹಾಸ ಬರೆಯಲಿದ್ದಾರೆ ವಿರಾಟ್!!

Virat Kohli Next Record: ಈ ಐಪಿಎಲ್‌ ಸೀಸನ್‌ನಲ್ಲಿ ವಿರಾಟ್‌ ಮತ್ತೊಂದು ಸಾರ್ವಕಾಲಿಕ ದಾಖಲೆಗೆ ಕೊಹ್ಲಿ ಕೇವಲ 6 ರನ್‌ಗಳ ಅಂತರದಲ್ಲಿದ್ದಾರೆ.   

Written by - Savita M B | Last Updated : Mar 16, 2024, 11:27 AM IST
  • ಐಪಿಎಲ್ ಆರಂಭವಾದಾಗಿನಿಂದ ಲೀಗ್‌ನಲ್ಲಿ ಎಲ್ಲಾ ಸೀಸನ್‌ಗಳಲ್ಲಿ ಆಡಿದ ಕ್ರಿಕೆಟಿಗರು ಕಡಿಮೆ.
  • ಐಪಿಎಲ್ ಆರಂಭದಿಂದಲೂ ಇದೇ ಫ್ರಾಂಚೈಸಿಗಾಗಿ ಆಡುತ್ತಿರುವ ಕೊಹ್ಲಿ
  • ಆರ್‌ಸಿಬಿ ಈ ಬಾರಿ ವಿಜೇತರಾಗುವ ನಿರೀಕ್ಷೆಯಲ್ಲಿದೆ
Virat Kohli: ವಿಶೇಷ ದಾಖಲೆ ಸನಿಹದಲ್ಲಿ ‘ಕಿಂಗ್’: 6 ರನ್ ಗಳಿಸಿದರೆ ಸಾಕು ಟಿ20 ಕ್ರಿಕೆಟ್’ನಲ್ಲಿ ಇತಿಹಾಸ ಬರೆಯಲಿದ್ದಾರೆ ವಿರಾಟ್!! title=

Virat Kohli: ಐಪಿಎಲ್ ಆರಂಭವಾದಾಗಿನಿಂದ ಲೀಗ್‌ನಲ್ಲಿ ಎಲ್ಲಾ ಸೀಸನ್‌ಗಳಲ್ಲಿ ಆಡಿದ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರು.. ಐಪಿಎಲ್ ಆರಂಭದಿಂದಲೂ ಇದೇ ಫ್ರಾಂಚೈಸಿಗಾಗಿ ಆಡುತ್ತಿದ್ದರೂ ಕೊಹ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಗೆದ್ದಿಲ್ಲ. ಇದರೊಂದಿಗೆ ಆರ್‌ಸಿಬಿ ಈ ಬಾರಿ ವಿಜೇತರಾಗುವ ನಿರೀಕ್ಷೆಯಲ್ಲಿದೆ. ಆದರೆ ಈ ಸೀಸನ್‌ನಲ್ಲಿ ಕೊಹ್ಲಿ ಮತ್ತೊಂದು ಸಾರ್ವಕಾಲಿಕ ದಾಖಲೆಗೆ ಕೇವಲ 6 ರನ್‌ಗಳ ಅಂತರದಲ್ಲಿದ್ದಾರೆ.

ಐಪಿಎಲ್ 2024 ರ ಮೊದಲ ಪಂದ್ಯ ಮಾರ್ಚ್ 22 ರಂದು ನಡೆಯಲಿದೆ. ಎಂಸಿ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಕೊಹ್ಲಿ ಐಪಿಎಲ್ 2024 ರಲ್ಲಿ ಆಡಲಿದ್ದಾರೆ. ಎಂದಿನಂತೆ ಇವರ ಮೇಲೆ ಭಾರೀ ನಿರೀಕ್ಷೆಗಳಿವೆ.

ಇದನ್ನೂ ಓದಿ-MIW vs RCBW, WPL 2024: ಎಲಿಸ್‌ ಪೆರಿ ಏಕಾಂಗಿ ಹೋರಾಟ, ಮೊದಲ ಬಾರಿ ಫೈನಲ್‌ ಪ್ರವೇಶಿಸಿದ RCB!

ಕೆಲವು ವರ್ಷಗಳ ಹಿಂದೆ, ಮಲೇಷ್ಯಾದಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2008 ರಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಕೊಹ್ಲಿಯನ್ನು RCB ಖರೀದಿಸಿತು. ಅಂದಿನಿಂದ ಅವರು ಅದೇ ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ. ಆರ್‌ಸಿಬಿ ಅವರನ್ನು 2011, 2014, 2018, 2022ರಲ್ಲಿಯೂ ತಂಡದಲ್ಲಿಯೇ ಉಳಿಸಿಕೊಂಡಿತ್ತು.. ಐಪಿಎಲ್ ಇತಿಹಾಸದಲ್ಲಿ 16 ವರ್ಷಗಳ ಕಾಲ ಒಂದೇ ತಂಡದಲ್ಲಿ ಆಡಿದ ಏಕೈಕ ಆಟಗಾರ ಕೊಹ್ಲಿಯಾಗಿದ್ದಾರೆ.. 

ಹಲವು ವರ್ಷಗಳಿಂದ ಸತತವಾಗಿ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹಾಗೂ ಅತಿ ಹೆಚ್ಚು ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. 2016 ರಲ್ಲಿ, ಅವರು 973 ರನ್ ಗಳಿಸುವ ಮೂಲಕ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ಮಾಡಿದರು. ಮುಂಬರುವ ಲೀಗ್‌ನಲ್ಲಿ ಇನ್ನೂ 6 ರನ್ ಗಳಿಸಿದರೆ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ ಈ ಸ್ಟಾರ್‌ ಆಟಗಾರ.. 

ಇದನ್ನೂ ಓದಿ-RCBW Vs MIW:  ಮಿಂಚಿದ ಎಲ್ಲಿಸ್ ಪೆರಿ, ಆರ್ಸಿಬಿಗೆ ಐದು ರನ್ ಗಳ ರೋಚಕ ಗೆಲುವು 

ಕೊಹ್ಲಿ ಸದ್ಯ ಕಡಿಮೆ ಮಾದರಿಯಲ್ಲಿ ಒಟ್ಟು 11994 ರನ್ ಗಳಿಸಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4037 ರನ್ ಗಳಿಸಿದರು ಮತ್ತು ಅಂತರಾಷ್ಟ್ರೀಯ T20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದರು. ವಿರಾಟ್ ಐಪಿಎಲ್‌ನಲ್ಲಿ ಒಟ್ಟು 7263 ರನ್ ಗಳಿಸಿದ್ದಾರೆ. ಅಂದರೇ 11,194. ರನ್ ಆದರೆ ಒಟ್ಟಾರೆ, ಟಿ20 ಮಾದರಿಯಲ್ಲಿ 12,000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಲು ವಿರಾಟ್ ಕೊಹ್ಲಿಗೆ ಇನ್ನೂ 6 ರನ್ ಅಗತ್ಯವಿದೆ.

ಕ್ರಿಸ್ ಗೇಲ್ (14562) ಒಟ್ಟಾರೆ T20Iಗಳಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ. ನಂತರ ಶೋಯೆಬ್ ಮಲಿಕ್ (13360), ಕೀರನ್ ಪೊಲಾರ್ಡ್ (12900), ಅಲೆಕ್ಸ್ ಹೇಲ್ಸ್ (12225) ಮತ್ತು ಡೇವಿಡ್ ವಾರ್ನರ್ (12065) ಟಾಪ್-5 ಪಟ್ಟಿಯಲ್ಲಿದ್ದಾರೆ. ಅವರ ನಂತರ ಕೊಹ್ಲಿ 12 ಸಾವಿರ ರನ್ ಗಳಿಸಿದ ಆರನೇ ಆಟಗಾರ ಆಗಲಿದ್ದಾರೆ.. 

ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ (11194) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ (11156), ಶಿಖರ್ ಧವನ್ (9465), ಸುರೇಶ್ ರೈನಾ (8654) ಮತ್ತು ಕೆಎಲ್ ರಾಹುಲ್ (7066) ಇದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News