IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್

IPL 2024 : ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ  148 ರನ್ಗಳ ಗೆಲುವಿನ ಗುರಿ ನೀಡಿದೆ 

Written by - Zee Kannada News Desk | Last Updated : May 4, 2024, 09:36 PM IST
  • ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ 148 ರನ್ಗಳ ಗೆಲುವಿನ ಗುರಿ ನೀಡಿದೆ
  • ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
  • ಒಟ್ಟಾರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 148 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್ title=

 Gujarat Titans set RCB target of 148 : ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟನ್ಸ್ ನಡುವೆ 52ನೇ ಪಂದ್ಯ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಮತ್ತು ಮೊದಲ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ 148 ರನ್ ಗಳ ಟಾರ್ಗೆಟ್ ನೀಡಿದೆ. 

ಇದನ್ನು ಓದಿ : ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಖಳನಾಯಕ, ಇದೀಗ ಡಾಲಿಯ 'ಕೋಟಿ' ಸಿನಿಮಾದಲ್ಲಿ ನಟನೆ 

ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಕಣಕ್ಕಿಳಿದರು. ವೃದ್ಧಿಮಾನ್ ಸಹಾ 1(7), ಶುಭಮನ್ ಗಿಲ್ 2(7), ಸಾಯಿ ಸುದರ್ಶನ್ 6(14), ಶಾರುಖ್ ಖಾನ್ 37(25), ಡೇವಿಡ್ ಮಿಲ್ಲರ್ 30(20), ರಶೀದ್ ಖಾನ್ 18(14), ರಾಹುಲ್ ತೆವಾಟಿಯಾ 35(21), ವಿಜಯ್ ಶಂಕರ್ 10(7) , ಮಾನವ್ ಸುತಾರ್ 1(2) , ಮೋಹಿತ್ ಶರ್ಮಾ 0(1) ನೂರ್ ಅಹ್ಮದ್ 0(0) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಹಮ್ಮದ್ ಸಿರಾಜ್ 2, ಯಶ್ ದಯಾಳ್ 2,  ಕ್ಯಾಮರೂನ್ ಗ್ರೀನ್ 1, ಕರ್ಣ ಶರ್ಮ 1, ವೈಶಾಖ್ ವಿಜಯ್ ಕುಮಾರ್ 2 ವಿಕೆಟ್ ಪಡೆದುಕೊಂಡರು. 

ಇದನ್ನು ಓದಿ : ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಪಡೆಯುವ ಸಂಬಳ ಎಷ್ಟು ಗೊತ್ತಾ ? 

ಇಡೀ ಇನ್ನಿಂಗ್ಸ್ ನಲ್ಲಿ  ಮೊದಲ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಲ್ ತಂಡ 19.3 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು ರನ್ ಗಳಿಸಿದರು. ಒಟ್ಟಾರೆಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 148 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News