ಈ ಇಬ್ಬರು ಆಟಗಾರರನ್ನು ಪಡೆದ ಟೀಂ ಇಂಡಿಯಾವೇ ಜಗತ್ತಿನ ಅದೃಷ್ಟಶಾಲಿ ತಂಡ: ಇಂಗ್ಲೆಂಡ್ ಆಟಗಾರ ಹೊಗಳಿದ್ದು ಯಾರನ್ನು?

Nasser Hussain on KL Rahul and Rishabh Pant: ಅಮೆರಿಕಾ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೂ ಮುನ್ನ ಪಂತ್ ಕ್ರಿಕೆಟ್’ಗೆ ಮರಳುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹುಸೇನ್ ಹೇಳಿಕೆಯನ್ನು ಉಲ್ಲೇಖಿಸಿ, 'ತುಂಬಾ ಗಂಭೀರವಾದ ಅಪಘಾತವಾಗಿತ್ತು. ಇಡೀ ಜಗತ್ತು ಒಂದು ಕ್ಷಣ ಸ್ಥಬ್ದವಾಗಿತ್ತು” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 31, 2023, 05:25 PM IST
    • ರಿಷಬ್ ಪಂತ್ ಪುನರಾಗಮನ ಮಾಡಲಿ ಎಂದು ಇಂಗ್ಲೆಂಡ್ ಮಾಜಿ ನಾಯಕ ಹಾರೈಕೆ
    • ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್
    • ಟಿ20 ವಿಶ್ವಕಪ್’ಗೂ ಮುನ್ನ ಪಂತ್ ಕ್ರಿಕೆಟ್’ಗೆ ಮರಳುವ ನಿರೀಕ್ಷೆ
ಈ ಇಬ್ಬರು ಆಟಗಾರರನ್ನು ಪಡೆದ ಟೀಂ ಇಂಡಿಯಾವೇ ಜಗತ್ತಿನ ಅದೃಷ್ಟಶಾಲಿ ತಂಡ: ಇಂಗ್ಲೆಂಡ್ ಆಟಗಾರ ಹೊಗಳಿದ್ದು ಯಾರನ್ನು?  title=
Nasser Hussain

Nasser Hussain on KL Rahul and Rishabh Pant: 2024ರಲ್ಲಿ ಭಾರತದ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಬ್ ಪಂತ್ ಪುನರಾಗಮನ ಮಾಡಲಿ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಹಾರೈಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 30ರಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ… ರೋಹಿತ್ ಶರ್ಮಾ ಪಾರುಪತ್ಯ ಅಂತ್ಯ!?

ಅಮೆರಿಕಾ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೂ ಮುನ್ನ ಪಂತ್ ಕ್ರಿಕೆಟ್’ಗೆ ಮರಳುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹುಸೇನ್ ಹೇಳಿಕೆಯನ್ನು ಉಲ್ಲೇಖಿಸಿ, 'ತುಂಬಾ ಗಂಭೀರವಾದ ಅಪಘಾತವಾಗಿತ್ತು. ಇಡೀ ಜಗತ್ತು ಒಂದು ಕ್ಷಣ ಸ್ಥಬ್ದವಾಗಿತ್ತು” ಎಂದು ಹೇಳಿದ್ದಾರೆ.

ರಿಷಬ್ ಪಂತ್ 'ಬಾಕ್ಸಾಫೀಸ್' ಕ್ರಿಕೆಟಿಗ

“ರಿಷಬ್ ಅವರು ಚೇತರಿಸಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅವರ ಆರಂಭಿಕ ಹಂತಗಳನ್ನು ನೋಡಿದೆ. ಜಿಮ್‌’ನಲ್ಲಿ ತರಬೇತಿ, ರಿಕಿ ಪಾಂಟಿಂಗ್‌ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋವನ್ನು ಕಂಡಿದ್ದೇನೆ. ಆಶಸ್‌’ನಲ್ಲಿ ರಿಕಿಯೊಂದಿಗೆ ಇದ್ದೆ. ಆಗ ರಿಕಿ ನನಗೆ ರಿಷಬ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ರಿಷಬ್ 'ಬಾಕ್ಸಾಫೀಸ್' (ಹಿಟ್) ಕ್ರಿಕೆಟಿಗ” ಎಂದು ಬಣ್ಣಿಸಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದರು. ಇತ್ತೀಚೆಗೆ ಏಕದಿನ ವಿಶ್ವಕಪ್‌’ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್, 75.33ರ ಸರಾಸರಿಯಲ್ಲಿ 452 ರನ್ ಗಳಿಸಿದರು.

ಇದನ್ನೂ ಓದಿ:ವಿಶ್ವದಾಖಲೆ ಹೊಸ್ತಿಲಲ್ಲಿ ರೋಹಿತ್: ಯಾರೂ ಬರೆದಿರದ ವಿಶಿಷ್ಟ ರೆಕಾರ್ಡ್ ಇದು…

ಮಾತು ಮುಂದುವರೆಸಿದ ಹುಸೇನ್, “ಪಂತ್ ಇಲ್ಲದೆ ಭಾರತ ಉತ್ತಮ ಪ್ರದರ್ಶನ ನೀಡಿತು. ಏಕೆಂದರೆ ಅವರ ಸ್ಥಾನಕ್ಕೆ ಕೆಎಲ್ ಬಂದರು. ರಾಹುಲ್ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮವಾಗಿದ್ದರು. ಈ ಇಬ್ಬರು ಆಟಗಾರರನ್ನು ಪಡೆದ ಭಾರತ ತಂಡವೇ ಅದೃಷ್ಟಶಾಲಿ. ಆದರೆ ಗಾಯದ ಮೊದಲು ಪಂತ್ 'ಬಾಕ್ಸ್ ಆಫೀಸ್ ಹಿಟ್ ಕ್ರಿಕೆಟಿಗನಾಗಿದ್ದರು. ಗಾಯದಿಂದ ಚೇತರಿಸಿಕೊಂಡು ಬಂದ ನಂತರವೂ ಅವರು ಇರುತ್ತಾರೆ ಎಂದು ಭಾವಿಸುತ್ತೇವೆ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News