Rishabh Pant: "ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ರಿಷಬ್ ಪಂತ್ ಆಟವಾಡಲಿದ್ದಾರೆ": ಆಕಾಶ್‌ ಚೋಪ್ರಾ!

Rishabh Pant in IPL 2024: ಭಾರತದ ಕ್ರಿಕೇಟಿಗ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಟ ಆಡಲಿದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 21, 2024, 12:38 PM IST
  • ಆಕಾಶ್‌ ಚೋಪ್ರಾ ಈ ಬಾರಿ ಭಾರತ ವಿಕೆಟ್ ಕೀಪರ್-ಬ್ಯಾಟರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್‌ಗಾಗಿ ಆಟವಾಡುತ್ತಾರೆ
  • ರಿಷಬ್ ಪಂತ್ 2022 ರ ಅಂತ್ಯದಲ್ಲಿ ವಾಹನ ಅಪಘಾತದಿಂದ ಅನೇಕ ಗಾಯಗೊಂಡಿದ್ದು, ಸದು ಈತನ್ನು ಜೀವಂತವಾಗಿ ನೋಡಲು ತುಂಬಾ ಸಂತೋಷದ ವಿಚಾರವಾಗಿದೆ.
  • ಈ ವರ್ಷದ ಐಪಿಎಲ್ ಸೀಸನ್‌ನಲ್ಲಿ 26 ವರ್ಷ ವಯಸ್ಸಿ ರಿಷಬ್‌ ಪಂತ್‌ ದೆಹಲಿ ಮೂಲದ ಫ್ರಾಂಚೈಸಿ ಕಡೆಯಿಂದ ಆಟವಾಡಲಿದ್ದಾರೆ ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ.
Rishabh Pant: "ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ರಿಷಬ್ ಪಂತ್ ಆಟವಾಡಲಿದ್ದಾರೆ": ಆಕಾಶ್‌ ಚೋಪ್ರಾ! title=

Akash Chopra Spoke About Rishabh Pant: ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಫೆಬ್ರವರಿ 21 2024 ಬುಧವಾರದಂದು  ಕ್ರಿಕೇಟಿಗ ರಿಷಬ್ ಪಂತ್ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಕಾಶ್‌ ಚೋಪ್ರಾ ಈ ಬಾರಿ ಭಾರತ ವಿಕೆಟ್ ಕೀಪರ್-ಬ್ಯಾಟರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್‌ಗಾಗಿ ಆಟವಾಡುತ್ತಾರೆ ಎಂದು ಹೇಳಿದ್ದಾರೆ. ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್‌ ಚೋಪ್ರಾ ರಿಷಬ್‌ ಪಂತ್‌ ಗಾಯಗೊಂಡಿದ್ದರ ಬಗ್ಗೆ ಮಾತನಾಡುತ್ತಾ ಆತ ಹೇಗೆ ಚೇತರಿಸಿಕೊಂಡಿರುವುದು ಒಂದು ಅದ್ಭುತ ಎಂದು ಹೇಳಿದ್ದಾರೆ.

ಆಕಾಶ್‌ ಚೋಪ್ರಾ "ಕೆಲವು ವರದಿಗಳ ಪ್ರಕಾರ ರಿಷಬ್ ಪಂತ್ ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಾರೆ. ಇದೊಂದು ಅಸಾಧಾರಣವಾದ ವಿಷಯವಾಗಿದೆ. ಅವರು ಎಲ್ಲಿಂದ ಬಂದರು ಮತ್ತು ಎಲ್ಲಿಗೆ ತಲುಪಿದ್ದಾರೆ. ಇದೊಂದು ಅದ್ಭುತವೆಂದು ಪರಿಗಣಿಸಲಾಗಿದೆ" ಎಂದು ಹೇಳಿದರು. ರಿಷಬ್ ಪಂತ್ 2022 ರ ಅಂತ್ಯದಲ್ಲಿ ವಾಹನ ಅಪಘಾತದಿಂದ ಅನೇಕ ಗಾಯಗೊಂಡಿದ್ದು, ಸದು ಈತನ್ನು ಜೀವಂತವಾಗಿ ನೋಡಲು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಚೋಪ್ರಾ ಮಾತನಾಡಿದ್ದಾರೆ.

ಇದನ್ನೂ ಓದಿ:  IPL 2024 ಗೂ ಮುನ್ನ KKR ಫ್ಯಾನ್ಸ್‌ಗೆ ಬಿಗ್ ಶಾಕ್.. ತಂಡದಿಂದ ಪ್ರಮುಖ ವೇಗಿ ಔಟ್.!

ಆಕಾಶ್‌ ಚೋಪ್ರಾ ಮಾತನ್ನು ಮುಂದುವರೆಸುತ್ತಾ, "ಕ್ರಿಕೆಟ್ ಜೀವನದ ಒಂದು ಚಿಕ್ಕ ಭಾಗವಾಗಿದೆ. ಇದು ಬಹಳ ಮುಖ್ಯ ಆದರೆ ಜೀವವಿದ್ದರೆ ಮಾತ್ರ ಕ್ರಿಕೆಟ್ ಇರುತ್ತದೆ. ಇಂತಹದೊಂದು ಅಪಘಾತದಲ್ಲಿ, ಅವನು ಬದುಕಿ ಬಂದಿದ್ದಾನೆಂದು ಕೇಳಿ ನನಗೆ ಸಂತೋಷವಾಯಿತು. ಅವನು ಅಂತಹ ಸ್ತಿತಿಯಂದ ಇಲ್ಲಿಯವರೆಗೇ ಬರೋದಕ್ಕೆ ತುಂಬಾ ಕೆಲಸಗಳನ್ನು ಮಾಡಬೇಕಾಗಿತ್ತು. ಅಲ್ಲಿಂದ ಇಲ್ಲಿಯ ತನಕದ ಅದು ಕಷ್ಟಕರವಾದ ಸಮಯ ” ಎಂದು  ಹೇಳಿದರು.

ಈ ವರ್ಷದ ಐಪಿಎಲ್  ಸೀಸನ್‌ನಲ್ಲಿ 26 ವರ್ಷ ವಯಸ್ಸಿ ರಿಷಬ್‌ ಪಂತ್‌ ದೆಹಲಿ ಮೂಲದ ಫ್ರಾಂಚೈಸಿ ಕಡೆಯಿಂದ ಆಟವಾಡಲಿದ್ದಾರೆ ಎಂದು ಆಕಾಶ್‌ ಚೋಪ್ರಾ ಹೇಳುತ್ತಾ " ರಿಷಬ್ ಬ್ಯಾಟಿಂಗ್ ಮತ್ತು ನಾಯಕತ್ವ ವಹಿಸುತ್ತಾರೆ. ಬ್ಯಾಟಿಂಗ್‌ನೊಂದಿಗೆ, ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅತ್ಯಂತ ಪ್ರಮುಖವಾದ ಸಮಸ್ಯೆಯನ್ನು ಪರಿಹರಿಸುತ್ತಾರೆ ಏಕೆಂದರೆ  ಕ್ರಮಾಂಕದಲ್ಲಿ ಸ್ವಲ್ಪ ಕೆಳಗೆ ಬ್ಯಾಟ್ ಮಾಡಬಹುದು, ದುರದೃಷ್ಟವಶಾತ್, ಅವರ ಎಲ್ಲಾ ಉತ್ತಮ ಆಟಗಾರರು ಅಗ್ರ ಕ್ರಮಾಂಕದಲ್ಲಿದ್ದಾರೆ" ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News