ಕೇವಲ ಒಂದೇ ತಿಂಗಳಲ್ಲಿ ಕೊಬ್ಬು ಕರಗುವಂತೆ ಮಾಡುತ್ತದೆ ಈ ಪಾನೀಯ

weight loss drink : ಜಿಮ್ ಗೆ ಹೋಗದೆ ತೂಕವನ್ನು ಕಳೆದುಕೊಳ್ಳಬೇಕಾದರೆ, ಈ ಪಾನೀಯವನ್ನು ಸೇವಿಸಬೇಕು. 

weight loss drink : ನೀವು ಅನೇಕ ಜನರನ್ನು ಅವರು ವರ್ಕೌಟ್ ಮಾಡುವುದಿಲ್ಲ. ಅವರ ಆಹಾರಕ್ರಮವೂ ಸರಿಯಾಗಿರುವುದಿಲ್ಲ . ಆದರೂ ತಮ್ಮ ತೂಕವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರ ಹಿಂದೆ ಅವರು ಅನುಸರಿಸುವ ಕೆಲವು ಸುಲಭವಾದ ಮನೆಮದ್ದುಗಳಿರುತ್ತವೆ. ಅದು ಅವರಿಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಈ ವಿಧಾನಗಳು ನೈಸರ್ಗಿಕವಾಗಿರುತ್ತವೆ. ಅವುಗಳನ್ನು ಡಿಟಾಕ್ಸ್ ಪಾನೀಯಗಳೆಂದು ಕರೆಯಲಾಗುತ್ತದೆ. ಜಿಮ್ ಗೆ ಹೋಗದೆ ತೂಕವನ್ನು ಕಳೆದುಕೊಳ್ಳಬೇಕಾದರೆ, ಈ ಪಾನೀಯವನ್ನು ಸೇವಿಸಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೊತ್ತಂಬರಿ, ಜೀರಿಗೆ ಮತ್ತು ಸೋಂಪು ಸೇರಿಸಿ ತಯಾರಿಸಲಾದ ಈ ಡಿಟಾಕ್ಸ್ ಪಾನೀಯವು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪಾನೀಯವನ್ನು ತಯಾರಿಸಲು, ನೀವು ಒಂದು ಚಮಚ ಕೊತ್ತಂಬರಿ, ಜೀರಿಗೆ ಮತ್ತು ಸೋಂಪು ಹಾಕಿ ದೊಡ್ಡ ಲೋಟ ನೀರಿನಲ್ಲಿ ನೆನೆಸಿಡಬೇಕು. ಈ ಮೂರನ್ನೂ ರಾತ್ರಿಯಿಡೀ ನೀರಿನಲ್ಲಿ ನೆನೆಯಲು ಬಿಡಬೇಕು. ಬೆಳಿಗ್ಗೆ ಎದ್ದು ಈ ನೀರನ್ನು ಕುದಿಸಿ ನಂತರ ಫಿಲ್ಟರ್ ಮಾಡಿ ತಣ್ಣಗಾದ ನಂತರ ಆ ನೀರನ್ನು ಕುಡಿಯಿರಿ. ರುಚಿಗೆ ನೀವು ಕಪ್ಪು ಉಪ್ಪು ಅಥವಾ ನಿಂಬೆ ರಸವನ್ನು ಕೂಡ ಸೇರಿಸಬಹುದು. ಇವೆರಡೂ ಈ ಪಾನೀಯದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2 /5

ಜೀರಿಗೆ ಅನೇಕ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ, ಇದರ ಸೇವನೆಯು ಪ್ರಯೋಜನವನ್ನು ನೀಡುತ್ತದೆ.  ಏಕೆಂದರೆ ಇದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ತಾಮ್ರದಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ಇದು ಕಬ್ಬಿಣದ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡುತ್ತವೆ.  

3 /5

ಸೋಂಪು  ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮಾತ್ರವಲ್ಲ, ದೇಹ ತಂಪಾಗಿಸುವ ಗುಣಗಳನ್ನು ಹೊಂದಿದೆ. ಇದು ಹಾರ್ಮೋನ್ ಸಮತೋಲನದಲ್ಲಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಕೂಡಾ ಇದು ಹೊಂದಿದೆ. ಇದು ಜೀರ್ಣಕ್ರಿಯೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ.

4 /5

ಕೊತ್ತಂಬರಿ ಕೂಡ ತೂಕ ಇಳಿಸುವ ಪ್ರಮುಖ ಅಂಶಗಳನ್ನೂ ಒಳಗೊಂಡಿದೆ. ಇದು ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಇದು ಆಂಟಿ-ಸೆಪ್ಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಕೊತ್ತಂಬರಿ  ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಕೊತ್ತಂಬರಿಯು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮ ಮೆದುಳು ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

5 /5

ಈ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ನೀವು ಶುದ್ಧ-ಸಮತೋಲಿತ ಆಹಾರದ ಜೊತೆಗೆ ವ್ಯಾಯಾಮವನ್ನು ಮಾಡಿದರೆ, ಖಂಡಿತವಾಗಿಯೂ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.