ಬಾಲಿವುಡ್‌ಗೆ ಕಾಲಿಡುತ್ತಲೇ ಆ ನಟನ ಜೊತೆ ಲಿಪ್‌ ಕಿಸ್‌ ಮಾಡೋಕೆ OK ಎಂದ ಕೀರ್ತಿ ಸುರೇಶ್‌..!

Keerthy Suresh : ಸೌತ್‌ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಕೀರ್ತಿ ಸುರೇಶ್‌ ಕೂಡ ಒಬ್ಬರು. ಇತ್ತೀಚಿಗೆ ಈ ಹೋಮ್ಲಿ ಬ್ಯೂಟಿ ಇಮೇಜ್‌ ಜೊತೆಗೆ ಗ್ಲಾಮರ್ ಕೂಡ ಹೆಚ್ಚುತ್ತಿದೆ. ನಟನೆ ಹಾಗೂ ಲುಕ್‌ನಲ್ಲೂ ತನಗೆ ಯಾರೂ ಸಾಟಿಯಿಲ್ಲ ಎಂಬುದನ್ನು ಕೀರ್ತಿ ಸಾಬೀತು ಮಾಡಿದ್ದಾರೆ. 

1 /6

ಕೀರ್ತಿ ಸುರೇಶ್ ಅಭಿನಯದ ಬಗ್ಗೆ ಹೇಳಲು ಮಹಾನಟಿಯ ಒಂದು ಸಿನಿಮಾ ಸಾಕು. ಕೌಟುಂಬಿಕ ಪ್ರೇಕ್ಷಕರಿಗೆ ಹೋಮ್ಲಿಯಾಗಿ ಇಷ್ಟವಾಗಿದ್ದರೂ, ಅಗತ್ಯವಿದ್ದಾಗ ಗ್ಲಾಮರಸ್ ಆಗಿಯೂ ಸಹ ಕಾಣಿಸಿಕೊಂಡು ಪಡ್ಡೆ ಹೈಕ್ಳಿಗೆ ಇಷ್ಟವಾಗಿದ್ದಾರೆ.  

2 /6

ಕೀರ್ತಿ ಸುರೇಶ್ ಸಿನಿಮಾಗಳಲ್ಲಿ ಅಳತೆ ಮೀರಿ ಗ್ಲಾಮರ್ ತೋರಿಸಿಲ್ಲ. ಅಗತ್ಯಕ್ಕೆ ತಕ್ಕಂತೆ ಹಾಡುಗಳಲ್ಲಿ ಗ್ಲಾಮರ್ ಶೋ ಮಾಡ್ತಾರೆ. ಸೌತ್ ಹೀರೋಯಿನ್‌ಗಳು ಬಾಲಿವುಡ್‌ಗೆ ಹೋದರೆ ಅವರ ಲೆಕ್ಕವಿಲ್ಲದಷ್ಟು ಬದಲಾಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ.. ಇದೀಗ ಕೀರ್ತಿ ಬಿಟೌನ್‌ ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ.   

3 /6

ಕೀರ್ತಿ ಸುರೇಶ್ ಇದುವರೆಗೂ ಲಿಪ್ ಲಾಕ್ ಮತ್ತು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿಲ್ಲ. ಸಧ್ಯ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ನಟಿ, ʼಬೇಬಿ ಜಾನ್ʼ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಥೆಯ ಭಾಗವಾಗಿ ಚುಂಬನ ಮತ್ತು ಪ್ರಣಯದ ದೃಶ್ಯಗಳು ಅತ್ಯಗತ್ಯವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.   

4 /6

ಇದರೊಂದಿಗೆ ಕೀರ್ತಿ ಸುರೇಶ್ ಲಿಪ್‌ಕಿಸ್ ಸೀನ್‌ಗಳಲ್ಲಿ ನಟಿಸಲು ಯಾವುದೇ ಅಡೆತಡೆಗಳಿಲ್ಲ ಅಂತ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲರ ಬಾರಿಗೆ ಕೀರ್ತಿ ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಈ ಸಿನಿಮಾ ರಿಲೀಸ್ ಆದ ಮೇಲೆ ಈ ಕುರಿತು ಸ್ಪಷ್ಟವಾಗುತ್ತದೆ..  

5 /6

ಈ ದೃಶ್ಯಗಳು ಸಹಜವಾಗಿ ಯುವಕರನ್ನು ಸೆಳೆಯುವ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ ನಿರ್ದೇಶಕರು. ಮತ್ತೊಂದೆಡೆ, ಕೀರ್ತಿ ಸುರೇಶ್ ʼಅಕ್ಕʼ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ವೆಬ್ ಸೀರೀಸ್ ಎಷ್ಟು ಬೋಲ್ಡ್ ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.   

6 /6

ಈ ವೆಬ್ ಸೀರಿಸ್ ನಲ್ಲಿ ರಾಧಿಕಾ ಆಪ್ಟೆ ಕೂಡ ನಟಿಸುತ್ತಿದ್ದಾರೆ. ಬೋಲ್ಡ್ ದೃಶ್ಯಗಳಿಗಾಗಿ ಅವರು ಮೊದಲ ಸಾಲಿನಲ್ಲಿದ್ದಾರೆ. ಈ ವೆಬ್ ಸರಣಿಯಲ್ಲಿ ರಾಧಿಕಾ ಜೊತೆಗೆ ಕೀರ್ತಿ ಸುರೇಶ್ ಪೈಪೋಟಿ ನಡೆಸಲಿದ್ದಾರೆ ಎಂಬ ವರದಿಗಳಿವೆ.