IPL 2023: ಕೊಹ್ಲಿ, ಬಟ್ಲರ್ ಅಲ್ಲ; ತನ್ನ ಐಪಿಎಲ್ ದಾಖಲೆ ಮುರಿಯೋದು ಟೀಂ ಇಂಡಿಯಾದ ಈ ಆಟಗಾರ ಎಂದ ಕ್ರಿಸ್ ಗೇಲ್

Chris Gayle and KL Rahul: ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್’ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಬ್ಯಾಟಿಂಗ್ ಮೂಲಕವೇ ಮೈದಾನದಲ್ಲಿ ಅಬ್ಬರಿಸುವ ಈ ಕೆರಿಬಿಯನ್ ಆಟಗಾರನ ದಾಖಲೆಗಳನ್ನು ಮುಟ್ಟಲೂ ಸಾಧ್ಯವಿಲ್ಲ.

1 /6

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್’ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಬ್ಯಾಟಿಂಗ್ ಮೂಲಕವೇ ಮೈದಾನದಲ್ಲಿ ಅಬ್ಬರಿಸುವ ಈ ಕೆರಿಬಿಯನ್ ಆಟಗಾರನ ದಾಖಲೆಗಳನ್ನು ಮುಟ್ಟಲೂ ಸಾಧ್ಯವಿಲ್ಲ.

2 /6

 ಆದರೆ ಇದೀಗ ತಮ್ಮ ಹೆಸರಿನಲ್ಲಿರುವ ಅತೀ ದೊಡ್ಡ ದಾಖಲೆಯನ್ನು ಮುರಿಯುವ ಆಟಗಾರನ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದ್ದಾರೆ. ಅವರ ಈ ಹೇಳಿಕೆ ಅಚ್ಚರಿಯನ್ನುಂಟು ಮಾಡಿದೆ.

3 /6

175 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ವಿಶೇಷ ದಾಖಲೆ ಬರೆದವರು ಗೇಲ್. ಇದು ಒಂದು ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಎನಿಸಿಕೊಂಡಿದೆ.

4 /6

ಈಗ ಈ ದಾಖಲೆಯನ್ನು ಕನ್ನಡಿಗ ಕೆ ಎಲ್ ರಾಹುಲ್ ಮುರಿಯಬಹುದು ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

5 /6

“ನಾನು ತೀರ ಹತ್ತಿರದಿಂದ ರಾಹುಲ್ ಆಟವನ್ನು ನೋಡಿದ್ದೇನೆ. ಅವರು ಮನಸ್ಸು ಮಾಡಿದರೆ ಖಂಡಿತ ನನ್ನ ದಾಖಲೆಯನ್ನು ಮುರಿಯುತ್ತಾರೆ. ಡೆತ್ ಓವರ್​ಗಳಲ್ಲಿ ರಾಹುಲ್ ತುಂಬಾ ಅಪಾಯಕಾರಿ ಬ್ಯಾಟ್ಸ್ಮನ್. ಅವರು ಉತ್ತಮ ಆರಂಭವನ್ನು ಪಡೆದರೆ, ಖಂಡಿತವಾಗಿಯೂ ನನ್ನ 175 ರನ್​ಗಳ ದಾಖಲೆಯನ್ನು ಮುರಿಯಲಿದ್ದಾರೆ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

6 /6

ಆದರೆ ರಾಹುಲ್ ಕಳಪೆ ಫಾರ್ಮ್​ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸುವ ಮೂಲಕ ಮತ್ತೆ ಲಯಕ್ಕೆ ಬಂದಿದ್ದಾರೆ.