Lord Kalki Avatar: ನಾನು ವಿಷ್ಣುವಿನ 10ನೇ ಅವತಾರ, ನನಗೆ ಸಂಬಳದ ಜೊತೆ ಗ್ರ್ಯಾಚುಟಿ ನೀಡಿ..!

ನನಗೆ ಬರಬೇಕಾಗಿರುವ 1 ವರ್ಷದ ಸಂಬಳ 16 ಲಕ್ಷ ರೂ. ಮತ್ತು 16 ಲಕ್ಷ ರೂ. ಗ್ರ್ಯಾಚುಟಿಯನ್ನು ಕೂಡಲೇ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರಗಾಲ ಆವರಿಸುತ್ತದೆ

Written by - Puttaraj K Alur | Last Updated : Jul 8, 2021, 04:41 PM IST
  • ನಾನು ಕಲ್ಕಿಯ ಅವತಾರ. ಜಗತ್ತನ್ನು ಪರಿವರ್ತನೆ ಮಾಡಲು ತಪಸ್ಸು ಮಾಡುತ್ತಿದ್ದೇನೆ
  • ನನಗೆ ಸಂಬಳ ಮತ್ತು ಗ್ರ್ಯಾಚುಟಿ ನೀಡದಿದ್ದರೆ ಇಡೀ ರಾಜ್ಯಕ್ಕೆ ಬರಗಾಲ ಆವರಿಸುತ್ತದೆ
  • ಕೆಲಸ ಮಾಡದೆ ನೌಕರಿ ಕಳೆದುಕೊಂಡಿದ್ದರೂ ಸಂಬಳಕ್ಕೆ ಬೇಡಿಕೆ ಇಟ್ಟಿರುವ ರಮೇಶ್ ಚಂದ್ರ
Lord Kalki Avatar: ನಾನು ವಿಷ್ಣುವಿನ 10ನೇ ಅವತಾರ, ನನಗೆ ಸಂಬಳದ ಜೊತೆ ಗ್ರ್ಯಾಚುಟಿ ನೀಡಿ..! title=
ಜಲಸಂಪನ್ಮೂಲ ಇಲಾಖೆಯ ಮಾಜಿ ಅಧಿಕಾರಿ ರಮೇಶ್ ಚಂದ್ರ ಫೆಫೆರ್

ಗುಜರಾತ್: ನಾನು ವಿಷ್ಣುವಿನ 10ನೇ ಅವತಾರ ಕಲ್ಕಿಯಾಗಿದ್ದೇನೆ. ನನಗೆ ಬರಬೇಕಾಗಿರುವ 16 ಲಕ್ಷ ರೂ. ಸಂಬಳ ಮತ್ತು ಗ್ರ್ಯಾಚುಟಿ ನೀಡದಿದ್ದಲ್ಲಿ ಇಡೀ ರಾಜ್ಯವೇ ಬರಗಾಲಕ್ಕೆ ತುತ್ತಾಗುತ್ತದೆ ಎಂದು ರಮೇಶ್ ಚಂದ್ರ ಫೆಫೆರ್ ಎಂಬ ಗುಜರಾತ್(Gujarat) ನ ಜಲಸಂಪನ್ಮೂಲ ಇಲಾಖೆಯ ಮಾಜಿ ಅಧಿಕಾರಿ ಆಗ್ರಹಿಸಿದ್ದಾರೆ. 

2018ರಲ್ಲಿಯೂ ತಾನು ಭಗವಾನ್ ವಿಷ್ಣು(Lord Vishnu)ವಿನ 10ನೇ ಅವತಾರವೆಂದು ಹೇಳಿಕೊಂಡಿದ್ದ ಈ ಅಧಿಕಾರಿ ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದರು. ತಾನು ವಿಷ್ಣುವಿನ ಅವತಾರವಾಗಿರುವುದರಿಂದ ಲೋಕಕಲ್ಯಾಣಕ್ಕಾಗಿ ದೈವಿ ಕೆಲಸ ಮಾಡಬೇಕಾಗಿದೆ. ಹೀಗಾಗಿ ನಾನು ಕಚೇರಿಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ನನಗೆ ಈಗ ಸಂಪೂರ್ಣ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿ ರಮೇಶ್ ಚಂದ್ರ ಸುದ್ದಿಯಾಗಿದ್ದರು. ಕಚೇರಿ ಬರದ ಕಾರಣ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಮತ್ತೆ ತನಗೆ ಬರಬೇಕಾಗಿರುವ ಬಾಕಿ ಸಂಬಳ ಮತ್ತು ಗ್ರ್ಯಾಚುಟಿ ನೀಡಬೇಕು.ಇಲ್ಲದಿದ್ದಲ್ಲಿ ಇಡೀ ರಾಜ್ಯವೇ ಬರಗಾಲ ಪರಿಸ್ಥಿತಿ ಎದುರಿಸುತ್ತದೆ ಎಂದು ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Weird Goat : ಪ್ರಕೃತಿಯ ಅದ್ಭುತ! ಈ ಮೇಕೆ ಮೈ ಮೇಲೆ ಒಂದು ಕಡೆ  'ಓಂ' ಒಂದು ಕಡೆ 'ಮೊಹಮ್ಮದ್'

ರಾಜಕೋಟ್ ನಿವಾಸಿಯಾಗಿರುವ ರಮೇಶ್ ಚಂದ್ರ, ತಾನು ಭಗವಾನ್ ವಿಷ್ಣುವಿನ 10ನೇ ಅವತಾರ ಕಲ್ಕಿ(Lord Kalki Avatar)ಯಾಗಿದ್ದೇನೆ. ನನಗೆ ಬರಬೇಕಾದ ಸಂಬಳ ಮತ್ತು ಗ್ರ್ಯಾಚುಟಿ ಇನ್ನೂ ಬಂದಿಲ್ಲ. ಈ ಸರ್ಕಾರದಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ನನಗೆ ಬರಬೇಕಾಗಿರುವ ಸಂಬಳ ಮತ್ತು ಗ್ರ್ಯಾಚುಟಿಯನ್ನು ತಡೆಹಿಡಿಯುವ ಮೂಲಕ ಕಿರುಕುಳ ಅವರು ನನಗೆ ಕಿರುಕುಳ ನೀಡುತ್ತಿದ್ದಾರೆಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದಲ್ಲದೆ ನನಗೆ ಬರಬೇಕಾಗಿರುವ 1 ವರ್ಷದ ಸಂಬಳ 16 ಲಕ್ಷ ರೂ. ಮತ್ತು 16 ಲಕ್ಷ ರೂ. ಗ್ರ್ಯಾಚುಟಿಯನ್ನು ಕೂಡಲೇ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರಗಾಲ ಆವರಿಸುತ್ತದೆ ಎಂದು ಎಚ್ಚರಿಸಿದ್ದಾರೆ. 

ರಮೇಶ್ ಚಂದ್ರ ಅವರು ವಡೋದರಾ ಕಚೇರಿಯಲ್ಲಿ ಗುಜರಾತ್‌ನ ಜಲಸಂಪನ್ಮೂಲ ಇಲಾಖೆಯ ಸರ್ದಾರ್ ಸರೋವರ್(Sardar Sarovar) ಪುನರಸ್ವತ್ ಏಜೆನ್ಸಿಯಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನರ್ಮದಾ ಅಣೆಕಟ್ಟು ಯೋಜನೆಯಿಂದ ಹಾನಿಗೊಳಗಾದ ಕುಟುಂಬಗಳ ಪುನರ್ವಸತಿ ವ್ಯವಸ್ಥೆಯನ್ನು ಈ ಸಂಸ್ಥೆ ನೋಡಿಕೊಳ್ಳುತ್ತದೆ. 2018ರಲ್ಲಿ ರಮೇಶ್ ಚಂದ್ರ 8 ತಿಂಗಳಿನಲ್ಲಿ ಕೇವಲ 16 ದಿನ ಮಾತ್ರ ಕಚೇರಿಗೆ ಹಾಜರಾಗಿದ್ದರು. ಹೀಗಾಗಿ ಅವರಿಗೆ ಶೋಕಾಸ್ ನೋಟಿಸ್ ನೀಡಿಲಾಗಿತ್ತು. ನಾನು ಕಲ್ಕಿಯ ಅವತಾರ. ಜಗತ್ತನ್ನು ಪರಿವರ್ತನೆ ಮಾಡಲು ತಪಸ್ಸು ಮಾಡುತ್ತಿದ್ದೇನೆ. ಹೀಗಾಗಿ ಕಚೇರಿಗೆ ಬರಲು ಸಾಧ್ಯವಿಲ್ಲವೆಂದು ಹೇಳಿದ್ದರು.

ಇದನ್ನೂ ಓದಿ: Sorry Friend: ಪೊಲೀಸ್ ಮನೆಗೆ ಕನ್ನ ಹಾಕಿ ಸ್ವಾರಿ ಫ್ರೆಂಡ್ ಎಂದ ಖತರ್ನಾಕ್ ಕಳ್ಳ..!

ರಮೇಶ್ ಚಂದ್ರ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಎಂ.ಕೆ.ಜಾಧವ್, ‘ಅವರು ಅನೇಕ ದಿನಗಳಿಂದ ಕಚೇರಿಗೆ ಗೈರಾಗಿದ್ದರೂ ಸಂಬಳ ಮಾತ್ರ ಬೇಕು ಎನ್ನುತ್ತಿದ್ದಾರೆ. ಭೂಮಿಗೆ ಮಳೆ ತರಿಸುವುದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ವಾದಿಸುತ್ತಾರೆ. ಅವರಿಗೆ ಗ್ರ್ಯಾಚುಟಿ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಾನು ವಿಷ್ಣುವಿನ ಅವತಾರ(Lord Vishnu Avatar)ವೆಂದು ಕೆಲಸ ಮಾಡದೆ ನೌಕರಿ ಕಳೆದುಕೊಂಡಿರುವ ರಮೇಶ್ ಚಂದ್ರ ಇದೀಗ ತನಗೆ ಬರಬೇಕಾದ ಸಂಬಳ ಮತ್ತು ಗ್ರ್ಯಾಚುಟಿ ನೀಡಬೇಕೆಂದು ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News