ದೀಪಿಕಾ ಪಡುಕೋಣೆಯ ನೆಚ್ಚಿನ ಸಹ ನಟ ರಣಬೀರ್ ಕಪೂರ್ ಅಂತೆ!

ರಣವೀರ್ ಸಿಂಗ್ ಹೊರತುಪಡಿಸಿ ಮತ್ಯಾವ ಸಹನಟ ಇಷ್ಟಾಗುತ್ತಾರೆ ಎಂದು ಕೇಳಿದ ಪ್ರಶ್ನೆಗೆ ದೀಪಿಕಾ ರಣಬೀರ್ ಕಪೂರ್ ಎಂದು ಹೇಳಿದ್ದಾರೆ.

Last Updated : Jan 27, 2018, 02:25 PM IST
ದೀಪಿಕಾ ಪಡುಕೋಣೆಯ ನೆಚ್ಚಿನ ಸಹ ನಟ ರಣಬೀರ್ ಕಪೂರ್ ಅಂತೆ! title=

ನವದೆಹಲಿ: ಕಡೆಗೂ ಬಹು ನಿರೀಕ್ಷಿತ ಹಾಗೂ ಆರಂಭದಿಂದಲೂ ವಿವಾದಗಳನ್ನೇ ಎದುರಿಸುತ್ತಿದ್ದ ಬಾಲಿವುಡ್ ನ ನಂಬರ್ 1 ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತ್' ಚಿತ್ರ ದೇಶಾದ್ಯಂತ  ತೆರೆಕಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 

ರಾಣಿ ಪದ್ಮಾವತಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ದೀಪಿಕಾ ಅಭಿನಯ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿದೆ. 

ಇತ್ತೀಚೆಗೆ ನೇಹಾ ಅವರು ನಡೆಸಿಕೊಡುವ ಚಾಟ್ ಶೋ ಒಂದರಲ್ಲಿ ತನ್ನ ಸಹೋದರಿ ಅನಿಶಾ ಪಡುಕೋಣೆಯೊಂದಿಗೆ ದೀಪಿಕಾ ಭಾಗವಹಿಸಿದ್ದರು.

Dnaindia.com ಪ್ರಕಾರ, "ಸೇ ಇಟ್ ಆರ್ ಸ್ಟ್ರಿಪ್ ಇಟ್" ಶೀರ್ಷಿಕೆಯ ಒಂದು ಭಾಗದಲ್ಲಿ ನೇಹಾ ಅವರು ರಣವೀರ್ ಸಿಂಗ್ ಹೊರತುಪಡಿಸಿ ಮತ್ಯಾವ ಸಹನಟ ಇಷ್ಟಾಗುತ್ತಾರೆ ಎಂದು ಕೇಳಿದ ಪ್ರಶ್ನೆಗೆ ದೀಪಿಕಾ ರಣಬೀರ್ ಕಪೂರ್ ಎಂದು ಹೇಳಿದರು. ಅವರ ಸಹೋದರಿ ಆನಿಷಾ ಕೂಡ ರಣಬೀರ್ ಹೆಸರನ್ನು ತೆಗೆದುಕೊಂಡರು. ಆದಾಗ್ಯೂ, ನಂತರ, ದೀಪಿಕಾ ತನ್ನ ಪಿಕುವಿನ ಸಹ-ನಟ ಇರ್ಫಾನ್ ಹೆಸರನ್ನು ಕೂಡಾ ಸೇರಿಸಿದರು.

ದೀಪಿಕಾ ಇದುವೆರೆಗೂ ಹಲವಾರು ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದೊಡ್ಡ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ.

ಆದರೂ ಅವರ ಸಿನಿ ಪಯಣ ನಿಜಕ್ಕೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. 

Trending News