ರಣಬೀರ್‌ನ ವಿಚಿತ್ರ ಫ್ಯಾಶನ್‌ ಸೆನ್ಸ್‌ ತಡೆದುಕೊಳ್ತಾಯಿದ್ದೀನಿ: ದೀಪಿಕಾಳ ವೇದನೆ

Coffee with Karan: ಕಾಫಿ ವಿತ್‌ ಕರಣ್‌ ಶೋನ ಮೊದಲ ಸಂಚಿಕೆಯಲ್ಲಿ ರಣಬೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೊಣೆ ಅತಿಥಿಗಳಾಗಿ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಕರಣ್‌ ದೀಪಿಕಾಗೆ ಹಾಗೂ ರಣಬೀರ್‌ ಜೊತೆಗೆ ರಾಪಿಡ್‌ ಫೈಯರ್‌ ರೌಂಡ್‌ ಆಟವಾಡಿದ್ದಾರೆ. ಈ ಶೋದಲ್ಲಿ ಈ ಜೋಡಿ ಏನೆಲ್ಲಾ ಮಾತನಾಡಿದ್ದಾರೆಂದು ತಿಳಿಯೋಣ.  

Written by - Zee Kannada News Desk | Last Updated : Oct 27, 2023, 03:18 PM IST
  • ಕಾಫಿ ವಿತ್‌ ಕರಣ್‌ ಶೋನಲ್ಲಿ ರಣಬೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ
  • ರಾಪಿಡ್‌ ಫೈರ್‌ನ ಕರಣ್‌ ಪ್ರಶ್ನೆಗೆ, ದೀಪಾಕಾ ಪಟಾಪಟ್‌ ಅಂತ ಉತ್ತರ
  • ಐದು ವರ್ಷಗಳ ಬಳಿಕ ಶೋನಲ್ಲಿ ಮದುವೆಯ ವಿಡಿಯೋ ಹಂಚಿಕೊಂಡ ಬಾಲಿವುಡ್‌ ದಂಪತಿ
ರಣಬೀರ್‌ನ ವಿಚಿತ್ರ ಫ್ಯಾಶನ್‌ ಸೆನ್ಸ್‌ ತಡೆದುಕೊಳ್ತಾಯಿದ್ದೀನಿ: ದೀಪಿಕಾಳ ವೇದನೆ title=

Deepika-Ranbir At Coffee with Karan Show: ಬಾಲಿವುಡ್‌ನ ಸ್ಟಾರ್‌ ಜೋಡಿ ರಣಬೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಕಾಫಿ ವಿತ್‌ ಕರಣ್‌ ಸೀಸನ್‌ 8ರ ಮೊದಲ ಸಂಚಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಶೋದಲ್ಲಿ ರ‍್ಯಾಪಿಡ್ ಫೈರ್‌ ಸೆಷನ್‌ ವೇಳೆ ರಣಬೀರ್‌ ಪ್ಯಾಶನ್‌ ಸೆನ್ಸ್‌ ಬಗ್ಗೆ ದೀಪಿಕಾ ನೀಡಿರುವ ಹೇಳಿಕೆ ವಿಚಾರ ಇದೀಗ ಸಖತ್‌ ವೈರಲ್‌ ಆಗಿದೆ.

ಹೌದು.. ಶೋನಲ್ಲಿ ದೀಪಿಕಾ ಹಾಗೂ ರಣಬೀರ್‌ ತಮ್ಮ ಸಾಕಷ್ಟು ವಿಷಯಗಳನ್ನು ಹೊಂಚಿಕೊಂಡಿದ್ದಾರೆ. ದೀಪಿಕಾ ತಮ್ಮ ಇಷ್ಟ, ಕಷ್ಟ ಹಾಗೂ ಪತಿ ರಣಬೀರ್‌ ಬಗ್ಗೆಯೂ ಸಾಕಷ್ಟು ಇಂಟ್ರಸ್ಟಿಂಗ್‌ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ರ‍್ಯಾಪಿಡ್ ಫೈರ್‌ ಸುತ್ತಿನಲ್ಲಿ ದೀಪಾಕೆಗೆ ಕರಣ್‌ ಕೇಳಿರುವ ಪ್ರಶ್ನೆಗೆ, ತುಂಬಾ ಚೆನ್ನಾಗಿಯೆ ಜಾಸ್ತಿ ಯೋಚನೆ ಮಾಡದೆ ಪಟ್‌ ಪಟ್‌ ಅಂತ ಉತ್ತರಗಳನ್ನು ನೀಡಿದ್ದಾರೆ. ಈ ಹಿಂದಿನ ಕಾಫಿ ವಿತ್‌ ಕರಣ್‌ ಶೋನಲ್ಲಿ ದೀಪಿಕಾ ರಣಬೀರ್‌ನ ಭಾವನಾತ್ಮಕ ಅಂಶಗಳು, ಅವರು ಮಲಗುವ ಸಮಯ ಹಾಗೂ ವಿಭಿನ್ನ ಡ್ರೆಸಿಂಗ್‌ ಸ್ಟೈಲ್‌ ತಡೆದುಕೊಳುತ್ತಿದ್ದೀನಿ ಅಂತ ಹೇಳಿದ್ದನ್ನು ನೆನಪು ಮಾಡಿಕೊಂಡರು.

ಇದನ್ನು ಓದಿ: ಆ ಚಟಕ್ಕೆ ಶಿವಕಾರ್ತಿಕೇಯನ್ ಅಡಿಕ್ಟ್! ನನ್ನನ್ನೂ ಬಲವಂತ ಮಾಡಿದ್ರು.. ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಮೋಹನ್

ಆದರೆ ಈ ಸೀಸನ್‌ನಲ್ಲಿ ದೀಪಿಕಾ "ನಾನು ಅವನ ಮನಸ್ಸನ್ನು ಪ್ರೀತಿಸುತ್ತೇನೆ, ನಾನು  ನಿದ್ರೆಯ ಸಮಯವನ್ನು ಸಹಿಸಿಕೊಳ್ಳುತ್ತೇನೆ ಏಕೆಂದರೆ ಅದು ಉತ್ತಮವಾಗಿದೆ ಮತ್ತು ನಾನು ಅವನ ಫ್ಯಾಶನ್ ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ. ಜೀವನಶೈಲಿ ಬದಲಾಗಿದೆ, ಇಷ್ಟಕಷ್ಟಗಳಿಂದ, ಅದು ತುಂಬಾ ಪ್ರೀತಿಯಕಡೆ  ಚಲಿಸುತ್ತಿದೆ." ಎಂದು ರಣಬೀರ್‌ ಬಗ್ಗೆ ಮಾತನಾಡಿದಾರೆ. ಈ ಮಾತು ದೀಪಿಕಾ ರಣಬೀರ್‌ ಮೇಲೆ ಇಟ್ಟಿರುವ ಪ್ರೀತಿ ಹೇಗೆ ಹೊಂದಾಣಿಕೆಯಿಂದ ಈ ಜೋಡಿ ಇದ್ದಾರೆಂಬುದು ತಿಳಿಯುತ್ತದೆ. 

ಈ ಜೋಡಿಯು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದರು. ಇವರ ಮದುವೆ ವಿಡಿಯೋವನ್ನು ಐದು ವರ್ಷಗಳ ನಂತರ ಈ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ನಂತರ ಕರಣ್‌ ಮತ್ತೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು. ಕರಣ್‌ ದೀಪಿಕಾ ನಿಮ್ಮ ಮದುವೆಯ 10ನೇ ವಾರ್ಷಿಕೋತ್ಸವ ದಿನ ಈ ಮೂರು ಪ್ರತಿಜ್ಞೆಗಳನ್ನು ನವೀಕರಿಸುವ ಅವಕಾಶವನ್ನು ಪಡೆದರೆ ಯಾವುದನ್ನು ಆರಿಸಿಕೊಳ್ಳುತ್ತೀರ ಅಂತ ಕೇಳಿದಾಗ, ದೀಪಿಕಾ "ಇದು ಮೂರು ಆಗಿರುವುದಿಲ್ಲ, ಅದು ಕೇವಲ ಒಂದೇ ಆಗಿರುತ್ತದೆ ಮತ್ತು ನಾನು ಮಾಡುತ್ತಿರುವುದನ್ನೇ ಇನ್ನೂ ಹೆಚ್ಚು ಮಾಡುತ್ತಿರುತ್ತೇನೆ" ಎಂದು ಹೇಳಿದರು.

ಇದನ್ನು ಓದಿ: ಕಾನೂನು ಎಲ್ಲರಿಗೂ ಒಂದೇ ಅಲ್ವಾ : ಸಂತೋಷ್‌ - ಅರ್ಚಕರ ಬಂಧನ, ಸೆಲೆಬ್ರೆಟಿಗಳ ವಿಚಾರಣೆ..! ನ್ಯಾಯ ಎಲ್ಲಿದೆ..?

ಮತ್ತೆ ಕರಣ್‌ ರಣಬೀರ್‌ನ ಬಂದ್‌ ಬಜಾ‌ ಬಾರತ್, ಗಲ್ಲಿ ಬಾಯ್‌ ಹಾಗೂ ರಾಕಿ ಔರ್‌ ರಾಣಿಕಿ ಪ್ರೇಮ್‌ ಕಹಾನಿ ಈ ಮೂರು ಸಿನಿಮಾಗಳಲ್ಲಿ ಯಾವ ಚಿತ್ರದಲ್ಲಿ ರಣಬೀರ್‌ನ ಸಹ ನಟಿಯಾಗಿ ಅಭಿನಯಿಸಲು ಆಯ್ಕೆ ಮಾಡುತ್ತೀರ ಅಂತ ಕೇಳಿದಾಗ, ದೀಪಿಕಾ ಮೂರನ್ನೂ ಆಯ್ಕೆ ಮಾಡುತೇನೆಂದು ಹೇಳಿದರು. ಹಾಗೆ ಪ್ರಶ್ನೆ ಮುಂದುವರೆಸುತ್ತಾ ಕರಣ್‌ ಈ ಯಾವ ನಟರ ಜೊತೆ ದೀಪಿಕಾಗೆ ಆನ್‌ ಸ್ಕ್ರೀನ್‌ ಮೇಲೆ ಒಳ್ಳೆಯ ಕೆಮಿಸ್ಟ್ರೀ ಚೆನ್ನಾಗಿ ಇತ್ತು ಅಂತ ಕೇಳಿದಾಗ ದೀಪಿಕಾ " ನಿಜ ಹೇಳಬೇಕೆಂದರೆ ನಾನು ಬಹಳಷ್ಟು ಜನರೊಂದಿಗೆ ಉತ್ತಮ ಕೆಮಿಸ್ಟ್ರೀಯಿತ್ತು. ನನ್ನ ಮತ್ತು ರಣವೀರ್ ಅದ್ಭುತ ಕೆಮಿಸ್ಟ್ರಿ ಹೊಂದಿದ್ದೇವೆ ಅದಕ್ಕಾಗಿಯೇ ನಾವು ಈ ಕಾಸ್ಟಿಂಗ್‌ ಕೌಚ್‌ನ ಸಮಸ್ಯೆಗೆ ಒಳಗಾಗಿದ್ದೇವೆ. ಆದರೆ ಶಾರುಖ್, ರಣಬೀರ್. ನಾನು ಇರ್ಫಾನ್ ಜೊತೆಗೂ ಕೆಮಿಸ್ಟ್ರೀ ಸರಿಯಾಗೂ ಇತ್ತು, ನಾನು ಹೃತಿಕ್ ಜೊತೆಗೂ ಕೆಮಿಸ್ಟ್ರೀ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ, ಇದನ್ನು ಎಲ್ಲರೂ ಫೈಟರ್‌ ಸಿನಿಮಾದಲ್ಲಿ ನೋಡಲಿದ್ದಾರೆ" ಎಂದು ದೀಪಿಕಾ ಉತ್ತರ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News