ಗೋಲ್ಡನ್ ಡ್ರೆಸ್ ಧರಿಸಿದ ದೀಪಿಕಾಗೆ ಖ್ಯಾಡಬರಿ ಕವರ್ ಎಂದು ವ್ಯಂಗ್ಯ

     

Last Updated : Dec 12, 2017, 08:41 PM IST
 ಗೋಲ್ಡನ್ ಡ್ರೆಸ್ ಧರಿಸಿದ ದೀಪಿಕಾಗೆ ಖ್ಯಾಡಬರಿ ಕವರ್ ಎಂದು ವ್ಯಂಗ್ಯ title=

ನವದೆಹಲಿ: ಇತ್ತೀಚಿಗೆ ಬಾಲಿವುಡ್ ಬೆಡಗಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ  ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ 2017 ನಲ್ಲಿ ಬಂಗಾರದ ಬಣ್ಣದ ಧಿರಿಸನ್ನು ಧರಿಸಿದ್ದಕ್ಕೆ  ಸಾಮಾಜಿಕ ಜಾಲತಾಣದಲ್ಲಿ ಅದನ್ನು ಕ್ಯಾಡ್ ಬರಿ ಚಾಕಲೇಟ್ ಮೇಲಿರುವ ಹೊದಿಕೆ ಎಂದು ವ್ಯಂಗ ಮಾಡಲಾಗಿದೆ.

 

🌟🌟GOLDENGIRL🌟🌟 @deepikapadukone tonight for the #luxgoldenroseawards2017 wearing couture @monishajaising makeup @sandhyashekar hair @yiannitsapatori assisted by @anjalichauhan16

A post shared by Shaleena Nathani (@shaleenanathani) on

 ದೀಪಿಕಾ ಪಡುಕೋಣೆ ಇನ್ಸ್ತಾಗ್ರಂ ನಲ್ಲಿ ಈ ಫೋಟೋ ಶೇರ್ ಮಾಡಿದಾಗ ಅವಳ ಹಲವಾರು ಇನ್ಸ್ತಾಗ್ರಾಂ ಹಿಂಬಾಲಕರು   ಅವಳನ್ನು ಟ್ರೋಲ್ ಮೂಲಕ ಕಾಲೆಳದಿದ್ದಾರೆ. ಕೆಲವರು ದೀಪಿಕಾಳ ಮುಖಚರ್ಯಕ್ಕೆ ಈ ಧಿರಿಸು ಹೊಂದುವುದಿಲ್ಲ  ಎಂದು ಹೇಳಿರುವುದಲ್ಲದೆ ಇದರಲ್ಲಿ ಹೆಚ್ಚು ಚಿನ್ನ ಹೆಚ್ಚು ಫ್ರಾಬ್ರಿಕ್ ಇದೆ ಎಂದು ಅಣಕವಾಡಿದ್ದಾರೆ.

ಆದರೆ ಬಟ್ಟೆಯ ಧಿರಿಸಿನ ವಿಚಾರವಾಗಿ ಬಾಲಿವುಡ್ ನಟಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುತ್ತಿರುವುದು ಇದೆ ಮೊದಲೇನಲ್ಲ, ಈ ಹಿಂದೆಯೂ ಕೂಡ  ಪ್ರಿಯಾಂಕ ಚೋಪ್ರಾ, ಇಶಾ ಗುಪ್ತಾ, ಅಮೀಷಾ ಪಟೇಲ್, ಸನಾ ಫಾತಿಮಾ ಶೇಕ್ ಮುಂತಾದವರು ಈ ಹಿಂದೆ ಟ್ರೋಲ್ ಗೆ ಒಳಪಟ್ಟಿದ್ದರು.  

Trending News