Gratuity ಸಂಬಂಧಿಸಿದಂತೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಈಗ ಇಷ್ಟು ಲಕ್ಷದವರೆಗೆ ಇರಲ್ಲ ತೆರಿಗೆ

Gratuity: ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಹೆಚ್ಚಿಸಿದೆ. 

Written by - Yashaswini V | Last Updated : Mar 8, 2024, 09:26 AM IST
  • ಶಿವರಾತ್ರಿಯಲ್ಲಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ
  • ಕೇಂದ್ರ ಸಂಪುಟ ಸಭೆಯಲ್ಲಿ ಗ್ರಾಚ್ಯುಟಿ, ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ
Gratuity ಸಂಬಂಧಿಸಿದಂತೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಈಗ ಇಷ್ಟು ಲಕ್ಷದವರೆಗೆ ಇರಲ್ಲ ತೆರಿಗೆ  title=

Gratuity: ಮೋದಿ ಸರ್ಕಾರ ಸಂಪುಟ ಸಭೆಯಲ್ಲಿ ಗ್ರಾಚ್ಯುಟಿ ಕುರಿತಂತೆ ಮಹತ್ವದ ನಿರ್ಧಾವನ್ನು ಕೈಗೊಂಡಿದ್ದು ಲಕ್ಷಾಂತರ ಉದ್ಯೋಗಿಗಳಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು (Modi government) ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು 25ಲಕ್ಷ ರೂ.ಗಳವರೆಗೆ ಹೆಚ್ಚಿಸಿದೆ. ಅರ್ಥಾತ್ ಯಾವುದೇ ಉದ್ಯೋಗಿಯು 25ಲಕ್ಷ ರೂ.ವರೆಗೆ ಪಡೆಯುವ ಗ್ರಾಚ್ಯುಟಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. 

ಗಮನಾರ್ಹವಾಗಿ, ಮೊದಲು ಈ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿ (Tax-Free Gratuity) 10 ಲಕ್ಷ ರೂ.ವರೆಗೆ ಇತ್ತು. ಮಾರ್ಚ್ 8, 2019 ರ ಅಧಿಸೂಚನೆಯಲ್ಲಿ ಸಿ‌ಬಿ‌ಡಿ‌ಟಿ ತೆರಿಗೆ ಮುಕ್ತ ಗ್ರಾಚ್ಯುತಿ ಮಿತಿಯನ್ನು 10 ಲಕ್ಷ ರೂ.ಗಳಿಂದ 20ಲಕ್ಷ ರೂ.ವರೆಗೆ ಹೆಚ್ಚಿಸಲಾಗಿತ್ತು. ಇದೀಗ ಈ ಮಿತಿಯನ್ನು 20ರಿಂದ 25 ಲಕ್ಷ ರೂ.ವರೆಗೆ ಹೆಚ್ಚಿಸಲು ಮೋದಿ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. 

ಇದನ್ನೂ ಓದಿ- International Women's Day 2024: ದೇಶಾದ್ಯಂತದ 10 ಕೋಟಿ ಮಹಿಳೆಯರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ!

ತುಟ್ಟಿ ಭತ್ಯೆ 4% ಹೆಚ್ಚಳ: 
ಇದಲ್ಲದೇ ಮೋದಿ ಸರ್ಕಾರ ಕೇಂದ್ರ ನೌಕರರು (Central Employee) ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ (Dearness Allowance Hike) ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಕೇಂದ್ರ ಸರ್ಕಾರದ (Central Govt) ಈ ನಿರ್ಧಾರದಿಂದ ನೌಕರರು 50 ಪ್ರತಿಶತ ತುಟ್ಟಿಭತ್ಯೆಯನ್ನು (Dearness Allowance) ಪಡೆಯುತ್ತಾರೆ. ಈ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯವಾಗುತ್ತದೆ ಎಂದು ತಿಳಿದುಬಂದಿದ್ದು ಮಾರ್ಚ್ ಅಂತ್ಯದ ವೇಳೆಗೆ ಸಂಬಳದ ಜೊತೆಗೆ ಈ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Post Office Schemes: ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಸಣ್ಣ ಉಳಿತಾಯದ ಮೂಲಕ ಲಕ್ಷಾಂತರ ರೂ. ಗಳಿಸಿ

ಗಮನಾರ್ಹವಾಗಿ, ಸತತ ನಾಲ್ಕನೇ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ 12,868.72 ರೂ.ಗಳಷ್ಟು ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News