Earthquake: 7.6 ತೀವ್ರತೆಯ ಭೂಕಂಪನಕ್ಕೆ ನಲುಗಿತು ಈ ದೇಶ: ಭಯಾನಕ ವಿಡಿಯೋ ಸೆರೆ

ಎಎನ್‌ಐ ಪ್ರಕಾರ, ಭೂಕಂಪನದಿಂದ ಭೂಕುಸಿತವೂ ಉಂಟಾಗಿದೆ. ಪಾಪುವಾ ನ್ಯೂ ಗಿನಿ ಭಾಗಗಳಲ್ಲಿ ವಿದ್ಯುತ್ ಕಡಿತವು ವರದಿಯಾಗಿದೆ.  ಭೂಕಂಪನದ ಅನುಭವವು  ಕೇಂದ್ರಬಿಂದುವಿನ ಸಮೀಪವಿರುವ ಕೌಂಟಿಗಳ ನಗರಗಳಿಂದ ಪೋರ್ಟ್ ಮೊರೆಸ್ಬಿಯ ರಾಜಧಾನಿಯವರೆಗೆ ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Sep 12, 2022, 01:20 PM IST
    • ಪಾಪುವಾ ನ್ಯೂ ಗಿನಿ ರಾಷ್ಟ್ರದಲ್ಲಿ ಸಂಭವಿಸಿದ ಭಾರೀ ಭೂಕಂಪನ
    • ಭೂಕಂಪನಕ್ಕೆ ಐದು ಮಂದಿ ಪ್ರಾಣಪಕ್ಷಿ ಹಾರಿಹೋಗಿದೆ
    • 7.6 ತೀವ್ರತೆಯ ಭೂಕಂಪವು ಕೆನಾಂಟು ಪಟ್ಟಣದ ಬಳಿ 90 ಕಿ.ಮೀ ಆಳದಲ್ಲಿ ಸಂಭವಿಸಿದೆ
Earthquake: 7.6 ತೀವ್ರತೆಯ ಭೂಕಂಪನಕ್ಕೆ ನಲುಗಿತು ಈ ದೇಶ: ಭಯಾನಕ ವಿಡಿಯೋ ಸೆರೆ title=
Papua New Guinea Earthquake

ಸೆಪ್ಟೆಂಬರ್ 12 ರಂದು ಪಾಪುವಾ ನ್ಯೂ ಗಿನಿ ರಾಷ್ಟ್ರದಲ್ಲಿ ಸಂಭವಿಸಿದ ಭಾರೀ ಭೂಕಂಪನಕ್ಕೆ ಐದು ಮಂದಿ ಪ್ರಾಣಪಕ್ಷಿ ಹಾರಿಹೋಗಿದೆ. 7.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿವೆ.  

7.6 ತೀವ್ರತೆಯ ಭೂಕಂಪವು ಕೆನಾಂಟು ಪಟ್ಟಣದ ಬಳಿ 90 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಸಮಯದಲ್ಲಿ ಉಂಟಾದ ಭಯಾನಕ ದೃಶ್ಯವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ರಸ್ತೆಗಳಲ್ಲಿ ದೊಡ್ಡ ಬಿರುಕುಗಳು, ಹಾನಿಗೊಳಗಾದ ಕಾರುಗಳು ಮತ್ತು ಹೆದ್ದಾರಿಗಳಲ್ಲಿ ಅಲ್ಲಲ್ಲಿ ಅವಶೇಷಗಳು ಕಂಡುಬರುತ್ತವೆ, ಭಯಭೀತರಾದ ಜನರು ಅತ್ತಿಂದಿತ್ತ ಓಡಾಡುವುದನ್ನು ಕಾಣಬಹುದು.

ಇದನ್ನೂ ಓದಿ: Viral Video: ಸ್ನಾನಕ್ಕೆಂದು ಹೊರಟ ಮಹಿಳೆಯನ್ನ ಬಾತ್ ರೂಂನಲ್ಲಿ ಸ್ವಾಗತಿಸಿದ್ದು 12 ಅಡಿ ಉದ್ದದ ಹೆಬ್ಬಾವು!

ಎಎನ್‌ಐ ಪ್ರಕಾರ, ಭೂಕಂಪನದಿಂದ ಭೂಕುಸಿತವೂ ಉಂಟಾಗಿದೆ. ಪಾಪುವಾ ನ್ಯೂ ಗಿನಿ ಭಾಗಗಳಲ್ಲಿ ವಿದ್ಯುತ್ ಕಡಿತವು ವರದಿಯಾಗಿದೆ.  ಭೂಕಂಪನದ ಅನುಭವವು  ಕೇಂದ್ರಬಿಂದುವಿನ ಸಮೀಪವಿರುವ ಕೌಂಟಿಗಳ ನಗರಗಳಿಂದ ಪೋರ್ಟ್ ಮೊರೆಸ್ಬಿಯ ರಾಜಧಾನಿಯವರೆಗೆ ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಯುಎಸ್ ಜಿಯೋಲಾಜಿಕಲ್ ಸರ್ವೆ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು,  ಆ ಬಳಿಕ ಈ ಭೂಕಂಪನ ಸಂಭವಿಸಿದೆ.

 

 

ಪಾಪುವಾ ನ್ಯೂ ಗಿನಿ ಪ್ರಧಾನ ಮಂತ್ರಿ ಜೇಮ್ಸ್ ಮಾರ್ಪೆ ಅವರು ಭೂಕಂಪವು "ತೀವ್ರ" ಎಂದು ಹೇಳಿದ್ದಾರೆ. ಜನರು ಜಾಗೃತರಾಗಬೇಕು ಎಂದು ಮನವಿ ಮಾಡಿದರು. ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ನಿರ್ಣಯಿಸಲು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಪತ್ತು ಏಜೆನ್ಸಿಗಳು ಮತ್ತು ಮುಖಂಡರಿಗೆ ಸೂಚಿಸಲಾಗಿದೆ ಎಂದು ಪಿಎಂ ಮಾರ್ಪೆ ಹೇಳಿದರು.

ಕೆಲವು ಆರೋಗ್ಯ ಕೇಂದ್ರಗಳು, ಮನೆಗಳು, ಗ್ರಾಮೀಣ ರಸ್ತೆಗಳು ಮತ್ತು ಹೆದ್ದಾರಿಗಳು, ಕಟ್ಟಡಗಳು ಭೂಕಂಪನದ ತೀವ್ರತೆಗೆ ಧರಾಶಾಹಿಯಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. 

ಇದನ್ನೂ ಓದಿ: Earthquake : 6.8 ತೀವ್ರತೆಯ ಭೂಕಂಪ, 46 ಜನರ ದುರ್ಮರಣ

ಪಾಪುವಾ ನ್ಯೂ ಗಿನಿ ರಾಷ್ಟ್ರವು ಪೆಸಿಫಿಕ್ ಮಹಾಸಾಗರದ "ರಿಂಗ್ ಆಫ್ ಫೈರ್" ನ ಉದ್ದಕ್ಕೂ ನೆಲೆಗೊಂಡಿದೆ. ಇದೇ ಕಾರಣದಿಂದ ಭೂಕಂಪಗಳಿಗೆ ಒಳಗಾಗುತ್ತದೆ. 2018 ರಲ್ಲಿ, ದೇಶದ ದೂರದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪವು 60 ಕ್ಕೂ ಹೆಚ್ಚು ಜನರನ್ನು ಪ್ರಾಣವನ್ನು ಪಡೆದಿತ್ತು. ಇದರಿಂದಾಗಿ ಅದೆಷ್ಟೋ ಜನರು ಬೀದಿಪಾಲಾಗಿದ್ದರು. ಎಎನ್ಐ ಪ್ರಕಾರ, 1900 ರಿಂದ ನ್ಯೂ ಗಿನಿಯಾದಲ್ಲಿ ಸುಮಾರು 22 ಬಾರಿ ಭೂಕಂಪನ ಸಂಭವಿಸಿದ್ದು, 7.5 ತೀವ್ರತೆಯು ಹೆಚ್ಚಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News