Gratuity: 7 ವರ್ಷದ ನೌಕರಿ, ವೇತನ 35,000 ರೂ.ಗಳಾಗಿದ್ದರೆ, ಗ್ರ್ಯಾಚುಟಿ ವೇಳೆ ಎಷ್ಟು ಮೊತ್ತದ ಚೆಕ್ ಕೈಸೇರುತ್ತದೆ?

Gratuity Calculation: ಗ್ರಾಚ್ಯುಟಿ ಪಡೆಯಲು ಓರ್ವ  ನೌಕರ ಕನಿಷ್ಠ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಿಂತ ಕಡಿಮೆ ಅವಧಿಗೆ ಉದ್ಯೋಗದ ಸಂದರ್ಭದಲ್ಲಿ, ನೌಕರರು ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ.(Business News In Kannada)  

Written by - Nitin Tabib | Last Updated : Mar 15, 2024, 03:13 PM IST
  • ಗ್ರಾಚ್ಯುಟಿಯನ್ನು ವಾರ್ಷಿಕ 15 ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
  • ಇದೇ ವೇಳೆ, ತಿಂಗಳಲ್ಲಿ ಕೇವಲ 26 ದಿನಗಳನ್ನು ಮಾತ್ರ ಪರಿಗಣಿಸಲಾಗುತ್ತದೆ,
  • ಏಕೆಂದರೆ 4 ದಿನಗಳು ರಜಾದಿನಗಳು ಎಂದು ಪರಿಗಣಿಸಲಾಗುತ್ತದೆ.
Gratuity: 7 ವರ್ಷದ ನೌಕರಿ, ವೇತನ 35,000 ರೂ.ಗಳಾಗಿದ್ದರೆ, ಗ್ರ್ಯಾಚುಟಿ ವೇಳೆ ಎಷ್ಟು ಮೊತ್ತದ ಚೆಕ್ ಕೈಸೇರುತ್ತದೆ? title=

Gratuity Calculator India: ಸರ್ಕಾರ ಇತ್ತೀಚೆಗೆ ಗ್ರಾಚ್ಯುಟಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಆದರೆ,, ಈ ನಿಯಮವು ಗ್ರಾಚ್ಯುಟಿ ಮೇಲಿನ ತೆರಿಗೆಗೆ ಸಂಬಂಧಿಸಿದೆ. 20 ಲಕ್ಷದವರೆಗಿನ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಇದೀಗ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಉದ್ಯೋಗಿ ತಾನು ಸೇವೆಸಲ್ಲಿಸುತ್ತಿರುವ  ಸಂಸ್ಥೆ ಅಥವಾ ಉದ್ಯೋಗದಾತರಿಂದ ಪಡೆಯುವ ಮೊತ್ತವಾಗಿದೆ. ಉದ್ಯೋಗಿ ಕನಿಷ್ಠ 5 ವರ್ಷಗಳವರೆಗೆ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಿದೆ.  ಸಾಮಾನ್ಯವಾಗಿ ಈ ಮೊತ್ತವನ್ನು ಉದ್ಯೋಗಿ (Employee) ಕೆಲಸ ಬಿಟ್ಟಾಗ ಅಥವಾ ನಿವೃತ್ತಿಯಾದಾಗ ನೀಡಲಾಗುತ್ತದೆ. ನೌಕರನು ಯಾವುದೇ ಕಾರಣದಿಂದ ಮರಣಹೊಂದಿದ ಸಂದರ್ಭದಲ್ಲಿ ಅಥವಾ ಅಪಘಾತದ ಕಾರಣದಿಂದ ಅವನು ಕೆಲಸವನ್ನು ತೊರೆದರೆ, ಆತನ ನಾಮಿನಿಗೆ  ಗ್ರಾಚ್ಯುಟಿ ಹಣವನ್ನು ಹಸ್ತಾಂತರಿಸಲಾಗುತ್ತದೆ.(Business News In Kannada)

ಗ್ರಾಚ್ಯುಟಿ ಪಡೆಯಲು ಅರ್ಹತೆ ಏನು?
ಗ್ರಾಚ್ಯುಟಿ ಪೇಮೆಂಟ್ಸ್ ಆಕ್ಟ್ 1972 ರ ನಿಯಮಗಳ ಪ್ರಕಾರ, ಗರಿಷ್ಠ ಮೊತ್ತದ ಗ್ರಾಚ್ಯುಟಿ ಮೊತ್ತವು 25 ಲಕ್ಷ ರೂ. ಗಳಾಗಿದೆ. ಗ್ರಾಚ್ಯುಟಿ ಪಡೆಯಲು ಓರ್ವ ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆಸಲ್ಲಿಸುವುದು ಕಡ್ಡಾಯವಾಗಿದೆ(gratuity eligibility). ಇದಕ್ಕಿಂತ ಕಡಿಮೆ ಅವಧಿಯಾ ಉದ್ಯೋಗದ ಸಂದರ್ಭದಲ್ಲಿ, ನೌಕರ ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ. 4 ವರ್ಷ 11 ತಿಂಗಳೊಳಗೆ ಕೆಲಸ ಬಿಟ್ಟರೂ ಗ್ರಾಚ್ಯುಟಿ ಸಿಗುವುದಿಲ್ಲ.  ಆದಾಗ್ಯೂ, ಹಠಾತ್ ಸಾವು ಅಥವಾ ಅಪಘಾತದ ಸಂದರ್ಭಗಳಲಿ ಉದ್ಯೋಗಿ ಕೆಲಸವನ್ನು ತೊರೆದರೆ ಈ ನಿಯಮ ಅನ್ವಯಿಸುವುದಿಲ್ಲ.

ಕಂಪನಿಯು ತನ್ನ ನೌಕರರಿಗೆ ಗ್ರಾಚ್ಯುಟಿಯನ್ನು ನೀಡುತ್ತದೆ. ಇದಕ್ಕಾಗಿ ಸತತ 5 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದರೆ, 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಲು ಮರಣ ಅಥವಾ ಅಂಗವೈಕಲ್ಯ ಸಂದರ್ಭದಲ್ಲಿ ಗ್ರಾಚ್ಯುಟಿ ಮೊತ್ತವನ್ನು ನೀಡುವ ಅಗತ್ಯವಿಲ್ಲ. ಗ್ರಾಚ್ಯುಟಿಯ ಗರಿಷ್ಠ ಮಿತಿ 25 ಲಕ್ಷ ರೂ.ಗಳಾಗಿದೆ, 

ಗ್ರಾಚ್ಯುಟಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? (How Gratuity Calculated In India)
ಒಟ್ಟು ಗ್ರಾಚ್ಯುಟಿ ಮೊತ್ತ = (ಅಂತಿಮ ವೇತನ) x (15/26) x (ಕಂಪನಿಯಲ್ಲಿ ಕೆಲಸ ಮಾಡಿದ ವರ್ಷಗಳ ಸಂಖ್ಯೆ). ಇದನ್ನು ಒಂದು ಉದಾಹರಣೆ ಮುಖಾಂತರ ಅರ್ಥಮಾಡಿಕೊಳ್ಳೋಣ ಬನ್ನಿ, 

ನೀವು 7 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಿರಿ ಎಂದು ಭಾವಿಸೋಣ. ನಿಮ್ಮ ಅಂತಿಮ ವೇತನವು ರೂ 35000 ಆಗಿದ್ದರೆ (ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿದಂತೆ), ಆಗ ಲೆಕ್ಕಾಚಾರ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ
(35000) x (15/26) x (7) = 1,41,346 ರೂ. ಅಂದರೆ ನಿಮಗೆ 1,41,346 ರೂ. (7th pay commission gratuity calculation formula)

ಲೆಕ್ಕಾಚಾರದಲ್ಲಿ 15/26 ರ ಅರ್ಥವೇನು? (what is 15/26 in gratuity calculation)
ಗ್ರಾಚ್ಯುಟಿಯನ್ನು ವಾರ್ಷಿಕ 15 ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದೇ ವೇಳೆ, ತಿಂಗಳಲ್ಲಿ ಕೇವಲ 26 ದಿನಗಳನ್ನು ಮಾತ್ರ ಪರಿಗಣಿಸಲಾಗುತ್ತದೆ, ಏಕೆಂದರೆ 4 ದಿನಗಳು ರಜಾದಿನಗಳು ಎಂದು ಪರಿಗಣಿಸಲಾಗುತ್ತದೆ. ಗ್ರಾಚ್ಯುಟಿ ಲೆಕ್ಕಾಚಾರದ ಪ್ರಮುಖ ವಿಷಯವೆಂದರೆ ಉದ್ಯೋಗಿ 6 ತಿಂಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ಅದನ್ನು ಒಂದು ವರ್ಷ ಎಂದು ಲೆಕ್ಕಹಾಕಲಾಗುತ್ತದೆ. ಉದ್ಯೋಗಿ 7 ವರ್ಷ ಮತ್ತು 7 ತಿಂಗಳು ಕೆಲಸ ಮಾಡಿದರೆ, ಅದನ್ನು 8 ವರ್ಷ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಆಧಾರದ ಮೇಲೆ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ಇದೇ ವೇಳೆ, ಒಬ್ಬರು 7 ವರ್ಷ ಮತ್ತು 3 ತಿಂಗಳು ಕೆಲಸ ಮಾಡಿದರೆ ಅದನ್ನು 7 ವರ್ಷಗಳವರೆಗೆ ಮಾತ್ರ ಪರಿಗಣಿಸಲಾಗುತ್ತದೆ.

ಗ್ರಾಚ್ಯುಟಿಯನ್ನು ಎರಡು ವಿಭಾಗಗಳಲ್ಲಿ ನಿರ್ಧರಿಸಲಾಗುತ್ತದೆ
ಗ್ರಾಚ್ಯುಟಿ ಪಾವತಿ ಕಾಯಿದೆ 1972
ರಲ್ಲಿ, ನೌಕರರು ಸ್ವೀಕರಿಸುವ ಗ್ರಾಚ್ಯುಟಿ ಮೊತ್ತದ ಸೂತ್ರವನ್ನು ನಿರ್ಧರಿಸಲು, ನೌಕರರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಈ ಕಾಯಿದೆಯ ವ್ಯಾಪ್ತಿಗೆ ಬರುವ ನೌಕರರನ್ನು ಒಳಗೊಂಡಿದೆ, ಆದರೆ ಎರಡನೇ ವರ್ಗವು ಕಾಯಿದೆಯ ಹೊರಗಿರುವ ನೌಕರರನ್ನು ಒಳಗೊಂಡಿದೆ. ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಎರಡೂ ರೀತಿಯ ಉದ್ಯೋಗಿಗಳು ಈ ಎರಡು ವಿಭಾಗಗಳಿಗೆ ಒಳಪಡುತ್ತಾರೆ.

ಇದನ್ನೂ ಓದಿ-Bad Cholesterol Symptoms: ಪಾದಗಳ ಮೇಲೆ ಈ ನಾಲ್ಕು ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ!

ವರ್ಗ 1-
ಗ್ರಾಚ್ಯುಟಿ ಪಾವತಿ ಕಾಯಿದೆ 1972 ರ ವ್ಯಾಪ್ತಿಯಲ್ಲಿ ಬರುವ ನೌಕರರು.

ಇದನ್ನೂ ಓದಿ-Benefits Of Apple Peel: ಸೇಬು ಹಣ್ಣು ತಿಂದು ನೀವೂ ಅದರ ಸಿಪ್ಪೆ ಎಸೆಯುತ್ತೀರಾ? ಹಾಗಾದ್ರೆ ಲೇಖನ ತಪ್ಪದೆ ಓದಿ!

ವರ್ಗ 2-
ಗ್ರಾಚ್ಯುಟಿ ಪಾವತಿ ಕಾಯಿದೆ 1972 ರ ವ್ಯಾಪ್ತಿಗೆ ಬರದ ನೌಕರರು.
ಗ್ರಾಚ್ಯುಟಿಯ ಮೊತ್ತವನ್ನು ನಿರ್ಧರಿಸಲು ಸೂತ್ರ (ಕಾಯ್ದೆಯ ಅಡಿಯಲ್ಲಿ ಬರುವ ನೌಕರರಿಗೆ)
ಕೊನೆಯ ಸಂಬಳ x ಸೇವಾ ಅವಧಿ x 15/26

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News