IND vs SA : ಈ ಸ್ಟಾರ್ ಆಟಗಾರನಿಗೆ ಶನಿಯಾಗಿ ಕಾಡುತ್ತಿದ್ದಾನೆ ಮೊಹಮ್ಮದ್ ಸಿರಾಜ್!

ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಲು ಆಟಗಾರನನ್ನು ಹೊರಗೆ ಕೂರಿಸಬಹುದು. ಹಾಗಿದ್ರೆ ಈ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : Sep 30, 2022, 04:38 PM IST
  • ತಂಡದಲ್ಲಿ ಈ ಆಟಗಾರನ ಹೆಚ್ಚಿದ ಉದ್ವೇಗ
  • ಕಳೆದ ಕೆಲವು ವರ್ಷಗಳಲ್ಲಿ ಪದೇ ಪದೇ ಫ್ಲಾಪ್‌
  • ಇದುವರೆಗಿನ ಟೀಂ ಇಂಡಿಯಾ ಪ್ರದರ್ಶನ
IND vs SA : ಈ ಸ್ಟಾರ್ ಆಟಗಾರನಿಗೆ ಶನಿಯಾಗಿ ಕಾಡುತ್ತಿದ್ದಾನೆ ಮೊಹಮ್ಮದ್ ಸಿರಾಜ್! title=

India vs South Africa 2nd T20 : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ ಮಧ್ಯೆ ಭಾರತದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಲು ಆಟಗಾರನನ್ನು ಹೊರಗೆ ಕೂರಿಸಬಹುದು. ಹಾಗಿದ್ರೆ ಈ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..

ತಂಡದಲ್ಲಿ ಈ ಆಟಗಾರನ ಹೆಚ್ಚಿದ ಉದ್ವೇಗ

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಕೊನೆಯ ಟಿ20 ಸರಣಿ ಇದಾಗಿದ್ದು, ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಂಡವು ಅತ್ಯುತ್ತಮ ಸಂಯೋಜನೆಯನ್ನು ನೀಡುವತ್ತ ಎದುರು ನೋಡುತ್ತಿದೆ. ಟಿ20 ವಿಶ್ವಕಪ್‌ಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಕೂಡ ಆಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಅವರು ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಅವರ ಮೊದಲ ಆಯ್ಕೆಯಾಗಲಿದ್ದಾರೆ. ಮೊಹಮ್ಮದ್ ಸಿರಾಜ್ ತಂಡದಲ್ಲಿ ಅವಕಾಶ ಪಡೆದರೆ, ಹರ್ಷಲ್ ಪಟೇಲ್ ಆಡುವ 11 ರಿಂದ ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ : ಉಮ್ರಾನ್ ಮಲಿಕ್‍ಗೆ ನೀವು ಯಾವಾಗ ಅವಕಾಶ ನೀಡುತ್ತೀರಿ?: ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ

ಕಳೆದ ಕೆಲವು ವರ್ಷಗಳಲ್ಲಿ ಪದೇ ಪದೇ ಫ್ಲಾಪ್‌

ಹರ್ಷಲ್ ಪಟೇಲ್ ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮರಳಿದರು. ಈ ಸರಣಿಯಲ್ಲಿ ಹರ್ಷಲ್ ಪಟೇಲ್ ಸಂಪೂರ್ಣ ವಿಫಲರಾಗಿದ್ದರು. ಹಾಗೆ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ 20 ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಹರ್ಷಲ್ ಪಟೇಲ್ ಕೂಡ ಸೇರ್ಪಡೆಗೊಂಡಿದ್ದಾರೆ, ಆದರೆ ಹಿಂದಿರುಗಿದ ನಂತರ ಅವರು ತಮ್ಮ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ.

ಇದುವರೆಗಿನ ಟೀಂ ಇಂಡಿಯಾ ಪ್ರದರ್ಶನ

ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ, ಆದರೆ ಅವರಿಗೆ ಏಕದಿನ ಮತ್ತು ಟಿ20ಗಳಲ್ಲಿ ಸತತ ಅವಕಾಶಗಳು ಸಿಕ್ಕಿಲ್ಲ. ಮೊಹಮ್ಮದ್ ಸಿರಾಜ್ ಅವರು ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಭಾರತದ ಪರ 13 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್, 10 ODIಗಳಲ್ಲಿ 10 ವಿಕೆಟ್ ಮತ್ತು 5 T20 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್ , ಶಹಬಾಜ್ ಅಹಮದ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : Virat Kohli ‌: ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್‌ ಮಾಡಬೇಡಿʼ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News