Actress Sudha Belawadi: ಸುಧಾ ಬೆಳವಡಿ ಅವರ ಮಗಳು ಯಾರು ಗೊತ್ತಾ? ಈಕೆಯೂ ಫೇಮಸ್‌ ನಟಿ!!

Sudha Belawadi Family: ಕಲಾ ಕುಟುಂಬದಿಂದ ಬಂದವರು ನಟಿ ಸುಧಾ ಬೆಳವಡಿ.. ಇವರು ಭಾರ್ಗವಿ ನಾರಾಯಣ್‌ ಹಾಗೂ ನಂಜುಂಡಿ ನಾರಾಯಣ್‌ ದಂಪತಿಯ ಮಗಳು.. ಇವರ ತಂದೆ ಚಿತ್ರರಂಗದಲ್ಲಿ ಖ್ಯಾತ ಮೇಕಪ್‌ ಆರ್ಟಿಸ್ಟ್‌ ಆಗಿದ್ದು, ಎಲ್ಲರು ಅವರನ್ನು ಮೇಕಪ್‌ ನಾಣಿ ಎಂದೇ ಕರೆಯುತ್ತಿದ್ದರು.. ಇವರ ತಾಯಿ ಭಾರ್ಗವಿ ನಾರಾಯಣ್‌ ಸಹ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ..

1 /5

ನಟಿ ಸುಧಾ ಬೆಳವಡಿ ಅವರು ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ.. ಸುಮಾರು ಎಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..  

2 /5

ಕಿರುತೆರೆಯ ಹಲವಾರು ಧಾರವಾಹಿಗಳಲ್ಲಿಯೂ ನಟಿಸಿದ ಸುಧಾ ಬೆಳವಡಿ ಅವರು ಮುಂಗಾರು ಮಳೆ, ಮೊಗ್ಗಿನ ಮನಸ್ಸುದಂತಹ ಎವರ್‌ಗ್ರೀನ್‌ ಸಿನಿಮಾಗಳಲ್ಲಿ ಮಿಂಚಿದ್ದಾರೆ..  

3 /5

ಕನ್ನಡ ಸಿನಿರಂಗದಲ್ಲಿ ತಾಯಿ ಪಾತ್ರವೆಂದರೇ ತಕ್ಷಣ ನೆನಪಾಗುವುದು ಸುಧಾ ಬೆಳವಡಿಯವರು.. ಅಷ್ಟರ ಮಟ್ಟಿಗೆ ಇವರು ತಮ್ಮ ಅದ್ಭುತ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದಾರೆ.  

4 /5

ಇನ್ನು ಸುಧಾ ಬೆಳವಡಿಯವರ ಸಹೋದರ ಪ್ರಕಾಶ್‌ ಬೆಳವಡಿ.. ಇವರೂ ಕೂಡ ಖ್ಯಾತ ನಟ, ಪತ್ರಕರ್ತ ಹಾಗೂ ನಿರ್ಮಾಪಕರಾಗಿದ್ದಾರೆ.. ಬಾಲಿವುಡ್‌ಗೂ ಇವರ ಪರಿಚಯವಿದೆ..  

5 /5

ಸುಧಾ ಬೆಳವಾಡಿಯವರ ಮಗಳು ಸಂಯುಕ್ತಾ.. ಇವರೂ ಕೂಡ ಮೂರನೇ ತಲೆಮಾರಿನ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ..