ಆಕಸ್ಮಿಕ ಗರ್ಭಪಾತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ..!

ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು.ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು.ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡಬೇಕು.

Written by - Manjunath N | Last Updated : May 6, 2024, 12:33 AM IST
  • 3 ರಿಂದ 6 ತಿಂಗಳ ಅವಧಿಯ ಎರಡನೇ ತ್ರೈಮಾಸಿಕ ಗರ್ಭಿಣಿ ಅವಧಿಯಲ್ಲಿ ಮಾಸ (ಪ್ಲಾಸೆಂಟಾ) ಗರ್ಭಕೋಶದ ಕೆಳಭಾಗಕ್ಕೆ ಬಂದು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ
  • ಇದ್ದಕ್ಕಿದ್ದಂತೆ ಹೊಟ್ಟೆನೋವು ಅಥವಾ ಮೊದಲನೆ ಹೆರಿಗೆ ಸಿಜೆರಿಯನ್ ಆಗಿದ್ದರೆ ನೋವು ಜಾಸ್ತಿ ಕಂಡುಬರುವುದು
  • ಗರ್ಭ ಕಂಠದ ಮಾರ್ಗ ಸಣ್ಣದಿದ್ದಾಗ, ದುರ್ವಾಸನೆಯುಕ್ತ ಯೋನಿಸ್ರಾವವಾಗುತ್ತಿದ್ದರೆ ನಿರ್ಲಕ್ಷಿಸದೆ ವೈದ್ಯರ ಬಳಿ ತಕ್ಷಣ ತೆರಳಬೇಕು
 ಆಕಸ್ಮಿಕ ಗರ್ಭಪಾತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ..! title=
ಸಾಂಧರ್ಭಿಕ ಚಿತ್ರ

ಗರ್ಭಿಣಿಯರಿಗೆ ಸಹಜ ಹೆರಿಗೆ ನೋವು ಹೊರತು ಪಡಿಸಿ, ಯಾವುದೇ ತರಹದ ನೋವು ಕಂಡು ಬಂದರೂ ಸಹ ನಿರ್ಲಕ್ಷ್ಯ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು.ಶಿಶು ಮತ್ತು ತಾಯಿ ಮರಣವನ್ನು ತಡೆಗಟ್ಟಲು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ರಕ್ತದ ಪ್ರಮಾಣ ಅನುಸಾರ ಕಬ್ಬಿಣಾಂಶ ಮಾತ್ರೆಗಳ ಸೇವನೆ, ತೂಕ, ರಕ್ತದೊತ್ತಡ, ಹೆಚ್‍ಐವಿ, ಹೆಚ್‍ಬಿಎಸ್‍ಎಜಿ ಮುಂತಾದ ಅಗತ್ಯ ಪರೀಕ್ಷೆಗೆ ಒಳಗಾಗಬೇಕು.

ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು.ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು.ಇವುಗಳ ಜೊತೆಗೆ ಗರ್ಭಾವಸ್ಥೆಯಲ್ಲಿ ಕಂಡುಬರಬಹುದಾದ ತೊಂದರೆಗಳು ಮತ್ತು ಅವುಗಳ ಲಕ್ಷಣಗಳಾಧಾರದ ಮೇಲೆ ತಕ್ಷಣ ವೈದ್ಯರ ಭೇಟಿ ಮಾಡಬೇಕು.

ಇದನ್ನೂ ಓದಿ: ಮತಗಟ್ಟೆಗೆ ಬರುವ ಮತದಾರರ ಆರೋಗ್ಯ ಕಾಳಜಿಗೆ ಮೆಡಿಸಿನ್ ಕಿಟ್ ಸಿದ್ದ..!

ಲಕ್ಷಣಗಳು:

ಎಕ್ಟೋಪಿಕ್ ಪ್ರೆಗ್ನೆನ್ಸಿ:

1 ರಿಂದ 3 ತಿಂಗಳ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗೆ ಗೊತ್ತಿಲ್ಲದೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವ ತೊಂದರೆಯಾಗಿರುತ್ತದೆ.ಗರ್ಭಿಣಿಗೆ ಗರ್ಭನಾಳದಲ್ಲಿ ಅಥವಾ ಓವರಿಯಲ್ಲಿ, ಗರ್ಭಕೋಶದ ಹೊರಭಾಗದಲ್ಲಿ ಗರ್ಭಕಂಠದ ಹತ್ತಿರ ಗರ್ಭ ನಿಂತಲ್ಲಿ ಅದನ್ನು ಎಕ್ಟೋಪಿಕ್ ಪ್ರೆಗ್ನೆನ್ಸಿ ಎನ್ನಲಾಗುವುದು.ಸಾಮಾನ್ಯವಾಗಿ ಈ ರೀತಿಯ ಗರ್ಭದಾರಣೆಯಲ್ಲಿ ಕೆಲವೊಮ್ಮೆ ಗರ್ಭಿಣಿಗೆ ತೀವ್ರ ರೀತಿಯ ರಕ್ತಸ್ರಾವ, ಸಹಿಸಲಾಗದ ಅಸಾಧಾರಣ ನೋವು, ತಲೆ ತಿರುಗುವಿಕೆ ಕಂಡುಬರಬಹುದು.

ಆಕಸ್ಮಿಕ ಗರ್ಭಪಾತ ಸಾಧ್ಯತೆಗಳು:

3 ರಿಂದ 6 ತಿಂಗಳ ಅವಧಿಯ ಎರಡನೇ ತ್ರೈಮಾಸಿಕ ಗರ್ಭಿಣಿ ಅವಧಿಯಲ್ಲಿ ಮಾಸ (ಪ್ಲಾಸೆಂಟಾ) ಗರ್ಭಕೋಶದ ಕೆಳಭಾಗಕ್ಕೆ ಬಂದು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.ಸಾಮಾನ್ಯವಾಗಿ ಈ ಹಂತದಲ್ಲಿ ಕಾರಣವಿಲ್ಲದೆ ರಕ್ತಸ್ರಾವವಾಗುವುದು,ಇದ್ದಕ್ಕಿದ್ದಂತೆ ಹೊಟ್ಟೆನೋವು ಅಥವಾ ಮೊದಲನೆ ಹೆರಿಗೆ ಸಿಜೆರಿಯನ್ ಆಗಿದ್ದರೆ ನೋವು ಜಾಸ್ತಿ ಕಂಡುಬರುವುದು, ಗರ್ಭ ಕಂಠದ ಮಾರ್ಗ ಸಣ್ಣದಿದ್ದಾಗ, ದುರ್ವಾಸನೆಯುಕ್ತ ಯೋನಿಸ್ರಾವವಾಗುತ್ತಿದ್ದರೆ ನಿರ್ಲಕ್ಷಿಸದೆ ವೈದ್ಯರ ಬಳಿ ತಕ್ಷಣ ತೆರಳಬೇಕು.

ರಕ್ತದೊತ್ತಡದಿಂದ ಉಂಟಾಗುವ ತೊಂದರೆಗಳು:

6 ರಿಂದ 9 ತಿಂಗಳ ಅವಧಿಯ 3ನೇ ತ್ರೈಮಾಸಿಕ ಅವಧಿಯಲ್ಲಿ ಸಾಮಾನ್ಯವಾಗಿ ರಕ್ತದೊತ್ತಡ ಇದ್ದು ಕಾಲು, ಹೊಟ್ಟೆ, ಮುಖದಲ್ಲಿ ಬಾವು ಕಂಡುಬರುತ್ತಿದ್ದು ಕೆಲವು ಗರ್ಭಿಣಿಯರಲ್ಲಿ ರಕ್ತದೊತ್ತಡ ಹೆಚ್ಚಾಗಿ ಹೊಟ್ಟೆ ಗಟ್ಟಿಯಾದ ಅನುಭವ, ಮಗು ಮಿಸುಗಾಡದೆ ಇರುವುದು ಅಥವಾ ರಕ್ತಸ್ರಾವವಾಗುವುದು ಕಂಡುಬಂದಲ್ಲಿ ನಿರ್ಲಕ್ಷಿಸಬಾರದು.ಈ ಹಂತದಲ್ಲಿ ಗರ್ಭಕೋಶದಲ್ಲಿಯೇ ಮಾಸ (ಪ್ಲಾಸೆಂಟಾ) ಕಳಚಿಕೊಂಡು ರಕ್ತ ಹೆಪ್ಪುಗಟ್ಟುವುದರಿಂದ ಈ ರೀತಿ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಕುಟುಂಬದ ಸದಸ್ಯರು ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬರುವ ಮೂಲಕ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಾಗುವ ಸನ್ನಿವೇಶಗಳನ್ನು ತಪ್ಪಿಸಬಹುದಾಗಿದೆ.

ಅಲ್ಲದೆ ಪ್ರಸ್ತುತ ಬಿಸಿಲಿನ ಪ್ರಖರತೆ ಹೆಚ್ಚು ಇರುವ ಕಾರಣ ಹೆರಿಗೆ ನಂತರದಲ್ಲಿ ಬಾಣಂತಿಯು ಹೆಚ್ಚು ನೀರು ಸೇವಿಸುವಂತೆ ಮಾಡುವುದರಿಂದ ಹಾಲಿನ ಉತ್ಪತ್ತಿಯು ಹೆಚ್ಚಾಗುತ್ತದೆ.ಯಾವುದೇ ಕಾರಣಕ್ಕೂ ನವಜಾತ ಶಿಶುವಿಗೆ 06 ತಿಂಗಳು ವಯಸ್ಸಿನವರೆಗೆ ತಾಯಿ ಎದೆ ಹಾಲು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಎನನ್ನೂ ಕೊಡಬಾರದು ಮತ್ತು ಮಗುವಿನ ಒಂದು ವರ್ಷ ವಯಸ್ಸಿನೊಳಗೆ 12 ಮಾರಕ ರೋಗಗಳ ವಿರುದ್ದ ನೀಡುವ ಲಸಿಕೆಗ¼ನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ಹಾಕಿಸುವ ಮೂಲಕ ಮಗುವಿನ ಆರೋಗ್ಯ ಸದೃಡವಾಗಿರಿಸಲು ಸಹಕರಿಸಬೇಕು.

ಇದನ್ನೂ ಓದಿ: ರಾಜ್ಯದ 14 ಜಿಲ್ಲೆಗಳ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News