Health Tips: ಯಾವಾಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಈ 5 ಜ್ಯೂಸ್ ಸೇವಿಸಿರಿ

ಈ ಜ್ಯೂಸ್ ಗಳು ನಿಮ್ಮ ಸದಾ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಸಹಕಾರಿಯಾಗಿವೆ. ಇವುಗಳನ್ನು ಪ್ರತಿದಿನವೂ ಸೇವಿಸಿದರೆ ನೀವು ಯಾವಾಗಲೂ ಚಿರಯೌವ್ವನ ಹೊಂದುತ್ತೀರಿ.

Written by - Puttaraj K Alur | Last Updated : Feb 13, 2022, 01:56 PM IST
  • ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಉರಿಯೂತದ ಸಮಸ್ಯೆ, ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ
  • ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡಲು ಬೀಟ್ರೂಟ್ ಜ್ಯೂಸ್ ತುಂಬಾ ಪರಿಣಾಮಕಾರಿ
  • ಉತ್ತಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಗುಲಾಬಿ ದ್ರಾಕ್ಷಿಹಣ್ಣಿನ ಜ್ಯೂಸ್ ಸಹಾಯ ಮಾಡುತ್ತದೆ
Health Tips: ಯಾವಾಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಈ 5 ಜ್ಯೂಸ್ ಸೇವಿಸಿರಿ title=
ನಿಮ್ಮ ಉತ್ತಮ ಆರೋಗ್ಯಕ್ಕೆ 5 ಜ್ಯೂಸ್ ಗಳು

ನವದೆಹಲಿ: ತಾಜಾ ಹಣ್ಣಿನ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಅಲೋಪತಿಯಿಂದ ಹಿಡಿದು ನ್ಯಾಚುರೋಪತಿ, ಆಯುರ್ವೇದ ಇತ್ಯಾದಿ ಎಲ್ಲಾ ವೈದ್ಯಕೀಯ ವ್ಯವಸ್ಥೆಯಲ್ಲಿ ಜ್ಯೂಸ್ ಸೇವಿಸುವ ಮಹತ್ವದ ಬಗ್ಗೆ ಉಲ್ಲೇಖ ಕಂಡುಬರುತ್ತದೆ. ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ಅನೇಕ ರೋಗಗಳಿಂದ ನಿಮ್ಮನ್ನು ದೂರವಿಡುತ್ತವೆ. ಕೆಲವು ಹಣ್ಣುಗಳು ತುಂಬಾ ಅದ್ಭುತವಾಗಿದ್ದು, ವಯಸ್ಸಾಗುವಿಕೆ ಸಮಸ್ಯೆಗೆ ರಾಮಬಾಣವಾಗಿವೆ. ಈ ಜ್ಯೂಸ್ ಗಳು ನಿಮ್ಮ ಸದಾ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಸಹಕಾರಿಯಾಗಿವೆ. ಇವುಗಳನ್ನು ಪ್ರತಿದಿನವೂ ಸೇವಿಸಿದರೆ ನೀವು ಯಾವಾಗಲೂ ಚಿರಯೌವ್ವನ ಹೊಂದುತ್ತೀರಿ.

ನಿಮ್ಮ ಉತ್ತಮ ಆರೋಗ್ಯಕ್ಕೆ 5 ಜ್ಯೂಸ್ ಗಳು  

ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ಜ್ಯೂಸ್(Carrot Juice) ಕುಡಿಯುವುದರಿಂದ ಯಾವಾಗಲೂ ಸುಂದರವಾಗಿರುವುದು ಮಾತ್ರವಲ್ಲದೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಜ್ಯೂಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಲುಟೀನ್ ನಮ್ಮ ಕಣ್ಣು ಮತ್ತು ಮೆದುಳಿನ ಕಾರ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಮ್ಮ ಜ್ಞಾಪಕಶಕ್ತಿಯನ್ನು ಉತ್ತಮವಾಗಿಡಲು ಇದು ತುಂಬಾ ಸಹಕಾರಿ.

ಇದನ್ನೂ ಓದಿ: Sprouting Garlic: ಮೊಳಕೆ ಬಂದ ಬೆಳ್ಳುಳ್ಳಿ ಸೇವನೆಯ ಆರೋಗ್ಯಕರ ಲಾಭಗಳು ನಿಮಗೆ ಗೊತ್ತೇ?

ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್‌(Pomegranate Juice)ನಲ್ಲಿ ಅನೇಕ ಆ್ಯಂಟಿಆಕ್ಸಿಡೆಂಟ್‌ಗಳಿವೆ, ಇದು ವಯಸ್ಸಾದಾಗ ಉಂಟಾಗುವ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಜೊತೆಗೆ ಉರಿಯೂತದ ಸಮಸ್ಯೆ, ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಇದು ವಯಸ್ಸಾದ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹದ ಮೇಲೆ ವಯಸ್ಸಿನ ಪರಿಣಾಮವನ್ನುಂಟು ಮಾಡುವುದಿಲ್ಲ. ಇದು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೀಟ್ರೂಟ್ ಜ್ಯೂಸ್: ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡಲು ಬೀಟ್ರೂಟ್ ಜ್ಯೂಸ್(Beetroot Juice) ತುಂಬಾ ಪರಿಣಾಮಕಾರಿಯಾಗಿದೆ. ಇದು ಚರ್ಮಕ್ಕೆ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಬೀಟ್ರೂಟ್ ಜ್ಯೂಸ್ ಕುಡಿಯುವವರ ರಕ್ತದೊತ್ತಡ ಸಮಸ್ಯೆಯೂ ಕಂಟ್ರೋಲ್ ಆಗುತ್ತದೆ.

ವೀಟ್ ಗ್ರಾಸ್ ಜ್ಯೂಸ್(Wheatgrass Juice): ವೀಟ್ ಗ್ರಾಸ್ ಜ್ಯೂಸ್ ಆ್ಯಂಟಿ ಏಜಿಂಗ್ ವಿಷಯದಲ್ಲಿ ತುಂಬಾ ಒಳ್ಳೆಯದು. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ವಯಸ್ಸಾಗುವಿಕೆಯ ಪರಿಣಾಮಗಳನ್ನು ನಿಯಂತ್ರಿಸಬಹುದು. ಇದು ವೃದ್ಧಾಪ್ಯದಲ್ಲಿ ಸಾಮಾನ್ಯ ಸಮಸ್ಯೆಯಾದ ಉರಿಯೂತವನ್ನು ತಡೆಯುತ್ತದೆ.

ಇದನ್ನೂ ಓದಿ: Weight Loss Tips : ಪ್ರತಿ ದಿನ ರಾತ್ರಿ ಈ ಕೆಲಸ ಮಾಡಿ ದೇಹ ತೂಕ ಕಳೆದುಕೊಳ್ಳಿ!

ಗುಲಾಬಿ ದ್ರಾಕ್ಷಿಹಣ್ಣಿನ ರಸ: ಗುಲಾಬಿ ದ್ರಾಕ್ಷಿಹಣ್ಣಿನ ರಸ(Pink Grapefruit Juice)ವು ಲೈಕೋಪೀನ್ ಎಂಬ ಕ್ಯಾರೊಟಿನಾಯ್ಡ್ ಅನ್ನು ಹೊಂದಿರುತ್ತದೆ. ಇದು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ವಯಸ್ಸಾದ ಕಾರಣ ಚರ್ಮದ ಮೇಲೆ ಪರಿಣಾಮ ಬೀರುವುದನ್ನು ತಡೆಯುತ್ತದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News