ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಇತಿಹಾಸ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ!

Sri Anjaneyaswamy Brahmarathotsavam: ನಗರೀಕರಣದ ಎಫೆಕ್ಟ್ ನಿಂದಾಗಿ ನಗರ ಪ್ರದೇಶಗಳಲ್ಲಿ ಜಾತ್ರೆಯಂತಹ ಧಾರ್ಮಿಕ ಆಚರಣೆಗಳು ಅಪರೂಪ ಎನ್ನುವಂತಾಗಿದೆ. ಆದ್ರೆ ಬೆಂಗಳೂರಿನ ಈ ಏರಿಯಾದಲ್ಲಿ ಪ್ರತಿ ವರ್ಷ ಅತ್ಯಂತ ಸಂಭ್ರಮ ಸಡಗರದಿಂದ ಹನುಮಂತನ ಬ್ರಹ್ಮ ರಥೋತ್ಸವ ಆಚರಿಸುತ್ತಾರೆ. ಅಷ್ಟಕ್ಕೂ ವಿಜೃಂಭಣೆಯಿಂದ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ನಡೆದಿದ್ದಾರೂ ಎಲ್ಲಿ ಅಂತೀರಾ....? ಈ ಸ್ಟೋರಿ ಓದಿ

Written by - Savita M B | Last Updated : May 5, 2024, 10:50 PM IST
  • ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ವಿಜೃಂಭಣೆಯ ಆಂಜನೇಯ ಬ್ರಹ್ಮ ರಥೋತ್ಸವ
  • ರಥೋತ್ಸವಕ್ಕೆ ಚಾಲನೆ ನೀಡಿದ ಪ್ರಮೋದ್ ಮುತಾಲಿಕ್, ನಟ ರಮೇಶ್ ಅರವಿಂದ್
  • 50 ಅಡಿ ಎತ್ತರದ ಅರಳಿಕಟ್ಟೆ ಆಂಜನೇಯ ಸ್ವಾಮಿ ರಥ ನಿರ್ಮಾಣ ಜಾತ್ರೆ ವಿಶೇಷ
ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಇತಿಹಾಸ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ! title=

ಹೌದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡಕಮ್ಮನಹಳ್ಳಿಯಲ್ಲಿ ಇಂದು ಶ್ರೀ ಅರಳಿಕಟ್ಟೆ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ದಾರೆ. ಗ್ರಾಮದ ಯುವ ಮುಖಂಡ ಅನಂತುಗೌಡ ನೇತೃತ್ವದಲ್ಲಿ ನಡೆದ ಬ್ರಹ್ಮ ರಥೋತ್ಸವದಲ್ಲಿ ಆಚರಣೆ ಮಾಡಿದ್ದು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಂದ್ರಶೇಖರ್ ಸ್ವಾಮೀಜಿ, ನಟ ರಮೇಶ್ ಅರವಿಂದ್ ಮತ್ತು ವರ್ತೂರ್ ಸಂತೋಷ್ ಬ್ರಹ್ಮ ರಥೋತ್ಸವದಲ್ಲಿ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯು ಅರಳಿಕಟ್ಟೆ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ನಡೆಸಲಾಗುತ್ತಿದ್ದು, ಸಾವಿರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ವಾ.ಓ. ಇನ್ನೂ ಇದೆ ವೇಳೆ ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ಎರಡು ಪಾರ್ಟ್ ಇವೆ. ಇದನ್ನ ಮ್ಯಾಪಿಂಗ್ ಮಾಡಿದ್ದಾರೆ, ವ್ಯವಸ್ಥಿತವಾಗಿ ಜೋಡಿಸಿದ್ದಾರೆ ಎನ್ನುವುದು ಒಂದು ಭಾಗ.

ಇದನ್ನೂ ಓದಿ-ನರೇಂದ್ರ ಮೋದಿ ಆಕಾಶ; ಆಕಾಶಕ್ಕೆ ಉಗುಳೋ ಕೃತ್ಯ ಮಾಡ್ತಿದ್ದಾರೆ ಕಾಂಗ್ರೆಸ್ಸಿಗರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

 ಇನ್ನೊಂದು ಬಾಗ ಇದು ನಿಜ ಇದೆ ಎನ್ನುವಂತಹದ್ದಾಗಿದೆ. ಈಗಾಗಲೇ ಒಬ್ಬರ ಬಂಧನ ಆಗಿದೆ. ಮತ್ತೊಬ್ಬರ ಬಂಧನ ಆಗಬೇಕಿದೆ. SIT ವರದಿ ಬಂದ ಮೇಲೆ ಸತ್ಯಾಸತ್ಯತೆ ತಿಳಿಯಲಿದೆ. ಇಂತಹ ಘಟನೆ ಯಾರು ಮಾಡಿದ್ದಾರೆ ಅದು ಅಂತೂ ಮಹಾ ಅಪರಾಧ. ಹೊರಗಡೆ ಬಿಟ್ಟಿದ್ದು ಇನ್ನೂ ದೊಡ್ಡ ಅಪರಾಧ. ಹೆಣ್ಣು ಮಕ್ಕಳು ಬದುಕು ಹರಾಜು ಮಾಡಿದ್ದು, ಬಹಳ ದೊಡ್ಡ ದುರಂತ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಹಿಂದೂ ಸಂಸ್ಕೃತಿಯಲ್ಲಿ ತಾಯಿಯನ್ನು ದೇವರ ಸ್ಥಾನದಲ್ಲಿ ಪುಜಿಸುವ ದೇಶ ನಮ್ಮದು. ವಿಡಿಯೋಗಳ ಮೂಲಕ ಹೆಣ್ಣುಮಕ್ಕಳ ಮಾನ ಹರಾಜು ಯಾವುದೇ ರಾಜಕಾರಣಿ ಮಾಡಬಾರದು. ಅದು ಮಾಡಿದ್ರೆ ನಿಮ್ಮ ತಾಯಿಗೆ ದ್ರೋಹ ಮಾಡಿದಂತೆ. ಈ ಸಮಯದಲ್ಲಿ ದೇಶದ ಮಹಿಳೆಯರ ಗೌರವ ಉಳಿಸಬೇಕಿದ್ದು, ರಾಜಕಾರಣಿಗಳು ಬಾಯಿ ಮುಚ್ಚಿಕೊಂಡಿರಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತ್ರೆ ಅಂಗವಾಗಿ ಅಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದು, ಸಾವಿರಾರು ಭಕ್ತಾದಿಗಳು ರಥೋತ್ಸವಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ-ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ವಿರೋಧಿ ಅಲೆ ಎದ್ದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News