ಮಹಿಳೆಯರೇ ಈರುಳ್ಳಿ ಬಳಸದ ಅಡುಗೆಗೆ ರೆಡಿಯಾಗಿ ! ಗಗನಕ್ಕೇರಲಿದೆ ಈರುಳ್ಳಿ ಬೆಲೆ! ಪೂರೈಕೆಯಲ್ಲಿ ಭಾರೀ ಕೊರತೆ

ಇನ್ನೇನು ಟೊಮೇಟೊ ಬೆಳೆಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲಿಯೇ ಈರುಳ್ಳಿಯ ಬೆಲೆ ಏರತೊಡಗಿದೆ.

Written by - Bhavya Sunil Bangera | Last Updated : Oct 13, 2023, 01:48 PM IST
  • ಬೆಲೆ ಏರಿಕೆಯಿಂದಾಗಿ ಜನರು ಮೊದಲೇ ತ್ತ್ರಿಸಿ ಹೋಗಿದ್ದಾರೆ.
  • ಇದೀಗ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ.
  • ಈರುಳ್ಳಿ ಪೂರೈಕೆಯಲ್ಲಿ ಇಳಿಮುಖ
ಮಹಿಳೆಯರೇ ಈರುಳ್ಳಿ ಬಳಸದ ಅಡುಗೆಗೆ  ರೆಡಿಯಾಗಿ ! ಗಗನಕ್ಕೇರಲಿದೆ ಈರುಳ್ಳಿ ಬೆಲೆ! ಪೂರೈಕೆಯಲ್ಲಿ ಭಾರೀ ಕೊರತೆ  title=

ಬೆಂಗಳೂರು : ಟೋಮಾಟೋ ಬೆಲೆ ಏರಿಕೆಯಿಂದ ಜನರಿಗೆ ಇದೀಗ ಮತ್ತೊಂದು ತಲೆ ಬಿಸಿ ಎದುರಾಗಿದೆ. ಇದೀಗ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. 

ಬೆಲೆ ಏರಿಕೆಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಟೊಮಾಟೋ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದರು. ಇನ್ನೇನು ಟೊಮೇಟೊ ಬೆಲೆ  ಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲಿಯೇ ಈರುಳ್ಳಿಯ ಬೆಲೆ ಏರತೊಡಗಿದೆ. 

ಇದನ್ನೂ ಓದಿ : ಹುಬ್ಬಳ್ಳಿ ಕಂಪನಿಯೊಂದರ ದುರ್ವಾಸನೆಗೆ ಬೇಸತ್ತ ಜನ

ಈರುಳ್ಳಿ ಪೂರೈಕೆಯಲ್ಲಿ ಇಳಿಮುಖ :
ರಾಜ್ಯದ ವಿವಿಧ ಜಿಲ್ಲೆಗಳಿಂದ ಈರುಳ್ಳಿ  ಪೂರೈಕೆಯಾಗುತ್ತದೆ. ಆದರೆ ಈಗ ಈರುಳ್ಳಿ ಪೂರೈಕೆಯಲ್ಲಿ ಇಳಿಮುಖ ಕಂಡು ಬರುತ್ತಿದೆ. ಈ ಹಿಂದೆ ನಾಸಿಕ್ ಹಾಗೂ ಪುಣೆಯಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು.ಆದರೆ ನಾಸಿಕ್ ಹಾಗೂ ಪುಣೆಯಲ್ಲಿ ಸ್ಟಾಕ್ ಇಲ್ಲದ ಕಾರಣ ಸದ್ಯ ನಾಸಿಕ್ ಹಾಗೂ ಪುಣೆಯಿಂದ ಈರುಳ್ಳಿ  ಪೂರೈಕೆ ನಿಂತು ಹೋಗಿದೆ. ಅಲ್ಲದೇ ರಾಜ್ಯದ ಜಿಲ್ಲೆಗಳಲ್ಲಿ ಹೊಸ ಬೆಳೆ ಬೆಳೆಯುತ್ತಿದ್ದು, ಬೆಳೆ ಇನ್ನೂ ಕೈಗೆ ಬಾರದ ಕಾರಣ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.

ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ  : 
ಹೀಗಾಗಿ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ ವಾರ 15 ರಿಂದ 20 ರೂಪಾಯಿಗೆ ಸಿಗುತ್ತಿದ್ದ ಈರುಳ್ಳಿ, ಇದೀಗ ಏಕಾಏಕಿ 30 ರಿಂದ 40 ರೂ ಗೆ ಏರಿಕೆಯಾಗುತ್ತಿದೆ. ಸದ್ಯ ನಾಫೇಡ್ ನಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಒಂದು ವೇಳೆ ನಾಫೇಡ್ ನಿಂದ ಈರುಳ್ಳಿ ಪೂರೈಕೆಯಾಗುವುದು ಕಡಿಮೆಯಾದರೆ  ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ  ಇದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ : ಅರಣ್ಯ ಅಧಿಕಾರಿಗಳ ದಬ್ಬಾಳಿಕೆ: ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ ಕಾಡಿನ ಮಕ್ಕಳು

35% ರಷ್ಟು ಪೂರೈಕೆ ಕಡಿಮೆ :
ಪ್ರತಿದಿನ ಯಶವಂತಪುರ ಮಾರುಕಟ್ಟೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಇದೀಗ  ಈರುಳ್ಳಿ ಪೂರೈಕೆಯಲ್ಲಿ  35% ರಷ್ಟು ಪೂರೈಕೆ ಕಡಿಮೆಯಾಗಿದೆ. ಅಂದರೆ 60 ರಿಂದ  70 ಸಾವಿರ ಈರುಳ್ಳಿ ಚೀಲಗಳು ಮಾತ್ರವೇ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಡು ಕೊರತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News