Health Benefits of Isabgol: ಮಲಬದ್ಧತೆ, ಕೊಲೆಸ್ಟ್ರಾಲ್ & ತೂಕ ಇಳಿಕೆಗೆ ಪವರ್‌ಫುಲ್‌ ಮನೆಮದ್ದು

ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಹಲವು ವಿಧಾನಗಳನ್ನು ಅಳವಡಿಸಿಕೊಂಡಿರಬಹುದು. ಆದರೆ ಈ ವಿಶೇಷ ಆಹಾರವನ್ನು ಒಮ್ಮೆ ಪ್ರಯತ್ನಿಸಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ ಕಾಣಲು ಸಾಧ್ಯವಾಗುತ್ತದೆ.

Written by - Puttaraj K Alur | Last Updated : Nov 26, 2023, 01:59 PM IST
  • ಇಸಾಬ್ಗೋಲ್ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮಾಗುತ್ತದೆ & ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
  • ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ನೀವು ಸುಲಭವಾಗಿ ತೂಕವನ್ನು ನಷ್ಟ ಮಾಡಿಕೊಳ್ಳಬಹುದು
  • ಇಸಾಬ್ಗೋಲ್ ಸೇವನೆಯಿಂದ ದೇಹ ನಿರ್ವಿಶೀಕರಣಗೊಳ್ಳುತ್ತದೆ ಮತ್ತು ಇದು ಮಧುಮೇಹಕ್ಕೆ ಸಹಕಾರಿ
Health Benefits of Isabgol: ಮಲಬದ್ಧತೆ, ಕೊಲೆಸ್ಟ್ರಾಲ್ & ತೂಕ ಇಳಿಕೆಗೆ ಪವರ್‌ಫುಲ್‌ ಮನೆಮದ್ದು title=
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರ

ನವದೆಹಲಿ: ಸಮಯಕ್ಕೆ ಸರಿಯಾಗಿ ಕೊಲೆಸ್ಟ್ರಾಲ್ ನಿಯಂತ್ರಿಸದಿದ್ದರೆ, ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ LDL ರಕ್ತನಾಳಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತದೆ. ಇದು ನಂತರ ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನೀವು ಗಾಬರಿಪಡುವ ಅಗತ್ಯವಿಲ್ಲ, ನಿಮ್ಮ ದೈನಂದಿನ ಆಹಾರದಲ್ಲಿ ಇಸಾಬ್ಗೋಲ್ ಸೇರಿಸಿದರೆ, ಅದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಿಸಲು ಇಸಾಬ್ಗೋಲ್ ಸೇವಿಸಿ: ಇಸಾಬ್ಗೋಲ್ ಅನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಸೇವನೆಯ ಮೂಲಕ ಪರಿಣಾಮಕಾರಿಯಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಈ ಸೂಪರ್‌ಫುಡ್ ನಮ್ಮ ಕರುಳಿನಲ್ಲಿ ತೆಳುವಾದ ಪದರವನ್ನು ರೂಪಿಸುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೀರಲ್ಪಡುವುದಿಲ್ಲ ಮತ್ತು ಬೆಳಗ್ಗೆ ಶೌಚಾಲಯದ ಮೂಲಕ ಹೊರಬರುತ್ತದೆ.

ಇದನ್ನೂ ಓದಿ: ನಿಮಗೆ ಬೆಳಿಗ್ಗೆ ಎದ್ದಾಗ ದೇಹದಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತಾ?... ಹಾಗಿದ್ದರೆ ಎಚ್ಚರದಿಂದಿರಿ

ಇಸಾಬ್ಗೋಲ್ ಹೇಗೆ ಸೇವಿಸುವುದು?: ಕೊಲೆಸ್ಟ್ರಾಲ್ ನಿಯಂತ್ರಿಸಲು ನೀವು ಪ್ರತಿದಿನ ಇಸಾಬ್ಗೋಲ್ ಸೇವಿಸಬಹುದು. ಇದಕ್ಕಾಗಿ ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಇಸಾಬ್ಗೋಲ್ ಸೇರಿಸಿ. ಅನೇಕ ತಜ್ಞರು ಸಂಜೆ ಈ ಇದನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವೇ ವಾರಗಳಲ್ಲಿ ನಿಮ್ಮ ದೇಹದಲ್ಲಿ ವ್ಯತ್ಯಾಸ ಗೋಚರಿಸುತ್ತದೆ.

ವೈದ್ಯರನ್ನು ಸಂಪರ್ಕಿಸಬೇಕು: ಇಸಾಬ್ಗೋಲ್ ಸೇವಿಸಿದ ನಂತರ ಕೆಲವರು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆ ಗ್ಯಾಸ್, ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ಈ ಪದಾರ್ಥ ಸೇವಿಸುವುದನ್ನು ನಿಲ್ಲಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: Health Tips: ಮಧುಮೇಹ ರೋಗಿಗಳು ಈ 5 ಹಣ್ಣುಗಳಿಂದ ದೂರವಿರಬೇಕು!

ಇಸಾಬ್ಗೋಲ್‍ನ ಇತರ ಪ್ರಯೋಜನಗಳು

ನಿಯಮಿತವಾಗಿ ಇಸಾಬ್ಗೋಲ್ ಸೇವಿಸಿದರೆ, ಇದು ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕಲು ಸಹಾಯ ಮಾಡುತ್ತದೆ. ದೇಹಕ್ಕೆ ಇತರ ಅನೇಕ ಪ್ರಯೋಜನಗಳು ದೊರೆಯುತ್ತವೆ. ಈ ಪ್ರಯೋಜನಗಳು ಯಾವುವು ಎಂದರೆ..?

-ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

-ಮಲಬದ್ಧತೆ ನಿವಾರಣೆಯಾಗುತ್ತದೆ

-ಮಧುಮೇಹಕ್ಕೆ ಸಹಕಾರಿ

-ದೇಹ ನಿರ್ವಿಶೀಕರಣಗೊಳ್ಳುತ್ತದೆ

-ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News